ಗಲ್ಫ್

ದುಬಾಯಿಯಲ್ಲಿ ತೌಳವರ ಸಂಭ್ರಮದ “ತುಳುಸಿರಿ ಐಸಿರ-2015” ಅನಾವರಣ

Pinterest LinkedIn Tumblr

Duabi Tulusiri_Feb 28_2015-041

ಫೋಟೋ: ಅಶೋಕ್ ಬೆಳ್ಮಣ್

ತುಳುಸಿರಿ ದುಬಾಯಿ ಆಶ್ರಯದಲ್ಲಿ 2015 ಫೆಬ್ರವರಿ 27ನೇ ತಾರೀಕು ಶುಕ್ರವಾರ ದುಬಾಯಿ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ದಿನ ಪೂರ್ತಿ ನಡೆದ, ತುಳುಸಿರಿ ಐಸಿರ-2015 ಸಂಭ್ರಮದ ಸಮಾವೇಶಕ್ಕೆ ಕೊಲ್ಲಿ ನಾಡಿನಲ್ಲಿ ನೆಲೆಸಿರುವ ತೌಳವ ಬಂದು ಮಿತ್ರರು ಸಾಕ್ಷಿಯಾದರು.

ಮುಖ್ಯ ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ

Duabi Tulusiri_Feb 28_2015-023

ತುಳು ಸಿರಿ ಐಸಿರ – 2015 ಸಮಾರಂಭದ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಉಡುಪಿಯಿಂದ ಆಗಮಿಸಿದ ತುಳುಭಾಷೆ ಸಾಹಿತ್ಯ, ಸಂಸ್ಕೃತಿಯಲ್ಲಿ ಅಪಾರ ಸಾಧನೆ, ಸಂಶೋಧನೆ ಮಾಡಿರುವ ಡಾ| ವೈ. ಎನ್. ಶೆಟ್ಟಿಯವರನ್ನು ಮತ್ತು ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಡಲು ಮಂಗಳೂರಿನಿಂದ ನಮ್ಮ ಟಿ.ವಿ. ಯ ಪ್ರಖ್ಯಾತ ನಿರೂಪಕ ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತು ಇನ್ನಿತರ ಗಣ್ಯರನ್ನು ಪೂರ್ಣ ಕುಂಭ ಸ್ವಾಗಾತದೊಂದಿಗೆ ಸುಮಂಗಲೆಯರು ಸಭಾಂಗಣಕ್ಕೆ ಬರಮಾಡಿಕೊಂಡರು. ಕು| ಸ್ಪರ್ಶಾ ಸ್ವಾಗತ ನೃತ್ಯ ನಡೆಯಿತು.

Duabi Tulusiri_Feb 28_2015-135

Duabi Tulusiri_Feb 28_2015-136

Duabi Tulusiri_Feb 28_2015-137

Duabi Tulusiri_Feb 28_2015-142

Duabi Tulusiri_Feb 28_2015-196

Duabi Tulusiri_Feb 28_2015-202

Duabi Tulusiri_Feb 28_2015-212

Duabi Tulusiri_Feb 28_2015-265

Duabi Tulusiri_Feb 28_2015-277

Duabi Tulusiri_Feb 28_2015-307

ಡಾ| ವೈ. ಎನ್. ಶೆಟ್ಟಿಯವರಿಂದ ತುಳುಸಿರಿ ಐಸಿರ-2015 ಉದ್ಘಾಟನೆ

Duabi Tulusiri_Feb 28_2015-043

Duabi Tulusiri_Feb 28_2015-044

Duabi Tulusiri_Feb 28_2015-045

Duabi Tulusiri_Feb 28_2015-046

Duabi Tulusiri_Feb 28_2015-047

ದುಬಾಯಿ ತುಳು ಸಿರಿ ಅಧ್ಯಕ್ಷರಾದ ಶ್ರೀ ಪದ್ಮರಾಜ್ ಎಕ್ಕಾರ್ ಸರ್ವರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಅಬುಧಾಬಿ ಕರ್ನಾಟಕ ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಹೋಟೆಲ್ ಚೇರ್ಮನ್ ಶ್ರೀ ಪ್ರವೀನ್ ಕುಮಾರ್ ಶೆಟ್ಟಿ, ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಶೇರಿಗಾರ್, ದಾಯ್ಜಿವರ್ಲ್ಡ್ ಮುಖ್ಯಸ್ಥ ಶ್ರೀ ವಾಲ್ಟರ್ ನಂದಳಿಕೆ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಶ್ರೀ ಸತೀಶ್ ವೆಂಕಟರಮಣ, ಸ್ಪ್ರೇಟೆಕ್ ಕಾಂಟ್ರಾಕ್ಟಿಂಗ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರ ಹೆಗ್ಡೆ ಹಾಗೂ ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರುಗಳ ಸಮ್ಮುಖದಲ್ಲಿ ಡಾ| ವೈ. ಎನ್. ಶೆಟ್ಟಿಯವರು ಜ್ಯೋತಿ ಬೆಳಗಿಸಿ, ಕಲ್ಪವೃಕ್ಷ ಪುಷ್ಪವನ್ನು ಅರಳಿಸಿ ತುಳುಸಿರಿ ಐಸಿರ-2015 ಉದ್ಘಾಟಿಸಿದರು.

“ಸಾಹಿತ್ಯ ಸಿರಿ” ತುಳು ಪುಸ್ತಕಗಳು ಮತ್ತು ಧ್ವನಿಸುರುಳಿ ಬಿಡುಗಡೆ

Duabi Tulusiri_Feb 28_2015-049

Duabi Tulusiri_Feb 28_2015-051

Duabi Tulusiri_Feb 28_2015-052

Duabi Tulusiri_Feb 28_2015-054

Duabi Tulusiri_Feb 28_2015-055

Duabi Tulusiri_Feb 28_2015-058

ಊರಿನಲ್ಲಿ ನೂತನವಾಗಿ ಮುದ್ರಣವಾಗಿ ಪ್ರಕಟಣೆಗೆ ಸಿದ್ದವಾಗಿರುವ ತುಳು ಪುಸ್ತಕಗಳು ಮತ್ತು ಧ್ವನಿ ಸುರುಳಿಗಳು ಕೊಲ್ಲಿ ನಾಡಿನ ತುಳುವರಿಗೆ ಪಡೆಯುವ ಸುವರ್ಣಾವಕಾಶದ ಕ್ಷಣ. ವೇದಿಕೆಯಲ್ಲಿ ಮುಖ್ಯ ಅತಿಥಿಗಳು ಅಮೂಲ್ಯ ತುಳು ಪುಸ್ತಕ ಮತ್ತು ಧ್ವನಿ ಸುರುಳಿಗಳನ್ನು ಬಿಡುಗಡೆ ಗೊಳಿಸಿದರು.ಶ್ರೀ ಸರ್ವೋತ್ತಮ ಶೆಟ್ಟಿ ಮತ್ತು ಶ್ರೀ ವಾಲ್ಟರ್ ಡಿ’ಸೋಜ ನಂದಳಿಕೆಯರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕೊಲ್ಲಿ ನಾಡಿನ ತುಳುವರಿಗೆ ಶುಭವನ್ನು ಹಾರೈಸಿದರು.

ತುಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೀ ಶೋಧನ್ ಪ್ರಸಾದ್ ರವರಿಗೆ ಸನ್ಮಾನ

Duabi Tulusiri_Feb 28_2015-060

Duabi Tulusiri_Feb 28_2015-061

Duabi Tulusiri_Feb 28_2015-062

Duabi Tulusiri_Feb 28_2015-063

ಯು.ಎ.ಇ. ಯಲ್ಲಿ ತುಳು ಸಾಂಸ್ಕೃತಿಕ ರಂಗದಲ್ಲಿ ತುಳುವೆರೆ ಪರ್ಬ ಅತ್ಯಂತ ಯಶಸ್ವಿಯಾಗಿ ನಡೆಸಿ, ನಾಟಕ ರಂಗದಲ್ಲಿ ಸೇವೆ ಸಲ್ಲಿಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಬಾರಿಗೆ ತುಳು ಸಿನೆಮಾ “ನಿರೆಲ್” ನಿರ್ಮಾಪಕರಾಗಿ ಜನಮನ್ನಣೆ, ಪ್ರಶಸ್ತಿ ಪಡೆದಿರುವ ಶ್ರೀ ಶೋಧನ್ ಪ್ರಸಾದ್ ರವರ ಸಾಧನೆಗೆ ತುಳು ಸಿರಿ ಐಸಿರ 2015 ರ ವೇದಿಕೆಯಲ್ಲಿ ಧರ್ಮಪತ್ನಿ ಶ್ರೀಮತಿ ಸಂಧ್ಯ ಶೋಧನ್ ಪ್ರಸಾದ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಸುಧಾಕರ್ ತುಂಬೆ ಸನ್ಮಾನ ಪತ್ರ ವಾಚಿಸಿದರು.

Duabi Tulusiri_Feb 28_2015-008

Duabi Tulusiri_Feb 28_2015-026

Duabi Tulusiri_Feb 28_2015-027

Duabi Tulusiri_Feb 28_2015-028

Duabi Tulusiri_Feb 28_2015-031

Duabi Tulusiri_Feb 28_2015-033

Duabi Tulusiri_Feb 28_2015-034

ಡಾ| ವೈ ಎನ್. ಶೆಟ್ಟಿ ತಮ್ಮ ಅದ್ಯಕ್ಷೀಯ ಭಾಷಣದಲ್ಲಿ ಸಮಗ್ರ ತುಳು ಭಾಷೆಯ ಇತಿಹಾಸ ಸಂಸ್ಕೃತಿ, ಆಚಾರಿ ವಿಚಾರ, ಉಡುಗೆ ತೊಡುಗೆ ಗಳ ಪೂರ್ಣ ಮಾಹಿತಿ ನೀಡಿದರು. ಉದ್ಘಾಟನ ಸಮಾರಂಭದ ಕೊನೆಯಲ್ಲಿ ವಂದನೆ ಸಲ್ಲಿಸಲಾಯಿತು.

“ಭಾಷೆ ಸಿರಿ” ಶ್ರೀ ಬಿ. ಕೆ. ಗಣೇಶ್ ರೈ ಯವರ ಅಧ್ಯಕ್ಷತೆಯಲ್ಲಿ ಅರ್ಥ ಪೂರ್ಣ ತುಳು ಭಾಷಾ ಗೋಷ್ಠಿ

Duabi Tulusiri_Feb 28_2015-072

Duabi Tulusiri_Feb 28_2015-076

Duabi Tulusiri_Feb 28_2015-077

Duabi Tulusiri_Feb 28_2015-078

Duabi Tulusiri_Feb 28_2015-079

Duabi Tulusiri_Feb 28_2015-080

Duabi Tulusiri_Feb 28_2015-365

ತುಳು ಸಾಹಿತ್ಯ, ಸಾಂಸ್ಕೃತಿ, ಭಾಷೆ, ಕಾವ್ಯ, ಹಾಸ್ಯ, ನಾಟಕ, ಯಕ್ಷಗಾನ, ಸಿನೆಮಾ, ತುಳು ಜಾಗೃತಿಯಬಗ್ಗೆ ವಿಚಾರ ವಿಮರ್ಶೆಯ ಬಗ್ಗೆ ಕೊಲ್ಲಿನಾಡಿನಲ್ಲಿ ತುಳುಭಾಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹನಿಯರುಗಳಾದ ಶ್ರೀ ಬಿ.ಕೆ.ಗಣೇಶ್ ರೈ ಯವರ ಅಧ್ಯಕ್ಷತೆಯಲ್ಲಿ ಅಬುಧಾಬಿಯಿಂದ ಶ್ರೀ ಮನೋಹರ್ ತೋನ್ಸೆ, ದುಬಾಯಿಯಿಂದ ಶ್ರೀ ನಾಣು ಮರೋಲ್, ಶ್ರೀ ಸುದರ್ಶನ್ ಹೆಗ್ಡೆ, ಶ್ರೀ ಪದ್ಮರಾಜ್ ಎಕ್ಕಾರ್ ಸಮಗ್ರವಾಗಿ ವಿಚಾರವನ್ನು ಮಂಡಿಸಿದರು.

ಕೊಲ್ಲಿ ನಾಡಿನಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ನೆಲೆಸಿರುವ ತುಳುವರು ಮೈಗೂಡಿಸಿಕೊಂಡು ಬಂದಿರುವ ತುಳು ಭಾಷೆ ಸಂಸ್ಕೃತಿಯ ಅನಾವರಣದ ದಾಖಲೆಯನ್ನು ಗೋಷ್ಠಿಯ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್ ರೈಯವರು ತುಳು ಸಿರಿ ದುಬಾಯಿ ಅಧ್ಯಕ್ಷ ರಾದ ಶ್ರೀ ಪದ್ಮರಾಜ್ ಎಕ್ಕಾರ್ ಸಮ್ಮುಖದಲ್ಲಿ ತುಳು ಸಿರಿ ಐಸಿರ -2015 ರ ಅಧ್ಯಕ್ಷತೆ ವಹಿಸಿದ ಸಾಂಸ್ಕೃತಿಕ ರಾಯಭಾರಿ ಡಾ| ವೈ.ಎನ್. ಶೆಟ್ಟಿಯವರಿಗೆ ಸಮರ್ಪಿಸಿದರು.

ಕೊನೆಯಲ್ಲಿ ಭಾಷಾ ಸಿರಿಯಲ್ಲಿ ಭಾಗವಸಿದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಡಾ| ವೈ.ಎನ್. ಶೆಟ್ಟಿಯವರು ಕೊಲ್ಲಿ ನಾಡಿನಲ್ಲಿರುವ ತುಳುವರಿಗೆ ಅಭಿಮಾನ ಜಾಗೃತಿ ಮೂಡಿಸುವ ಬಗ್ಗೆ ಹಿತವಚನ ನೀಡಿದರು.

ಮನ ಸೆಳೆದ “ತುಳುನಾಡ ವೈಭವ”

Duabi Tulusiri_Feb 28_2015-135

Duabi Tulusiri_Feb 28_2015-143

Duabi Tulusiri_Feb 28_2015-152

ಶ್ರೀ ಗಣೇಶ್ ಶೆಟ್ಟಿ ತಂಡದವರು “ತುಳುನಾಡ ವೈಭವ” ಅದ್ಭುತ ಪ್ರದರ್ಶನವನ್ನು ನೀಡಿ ಜನಮೆಚ್ಚುಗೆಯನ್ನು ಪಡೆದರು.

“ಕಬಿತೆ ಸಿರಿ” ಶ್ರೀ ಇರ್ಷಾದ್ ಮೂಡಬಿದರಿ ಯವರ ಅಧ್ಯಕ್ಷತೆಯಲ್ಲಿ ಗಮನ ಸೆಳೆದ ಕವಿ ಗೋಷ್ಠಿ

Duabi Tulusiri_Feb 28_2015-154

Duabi Tulusiri_Feb 28_2015-164

Duabi Tulusiri_Feb 28_2015-165

Duabi Tulusiri_Feb 28_2015-172

Duabi Tulusiri_Feb 28_2015-174

Duabi Tulusiri_Feb 28_2015-001

Duabi Tulusiri_Feb 28_2015-002

Duabi Tulusiri_Feb 28_2015-003

Duabi Tulusiri_Feb 28_2015-004

Duabi Tulusiri_Feb 28_2015-005

ಕಬಿತೆ ಸಿರಿ – ಕವಿ ಗೋಷ್ಠಿ ಶ್ರೀ ಇರ್ಷಾದ್ ಮೂಡಬಿದರಿ ಯವರ ಅಧ್ಯಕ್ಷತೆಯಲ್ಲಿ ಕಾವ್ಯ ವಾಚನ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ತಮ್ಮ ರಚನೆಯಲ್ಲಿ ಮೂಡಿಬಂದ ಕವನಗಳನ್ನು ವಾಚಿಸಿದವರು ಶಾರ್ಜಾದಿಂದ ಶ್ರೀ ಗೋಪಿನಾಥ್ ರಾವ್, ದುಬಾಯಿಯಿಂದ ಶ್ರೀ ಎಂ.ಇ. ಮೂಳೂರ್, ಶ್ರೀ ರಾಬರ್ಟ್ ಫೆರ್ನಾಂಡಿಸ್ ಉಧ್ಯಾವರ, ಶ್ರೀ ಸ್ಟಾನಿ ಡಿಸೋಜಾ ಬೆಳಾ, ಶ್ರೀ ಅರ್ಥರ್ ಪಿರೆರಾ ಒಮ್ಜೂರ್, ಮತ್ತು ಪ್ರಕಾಶ್ ರಾವ್ ಪಯ್ಯಾರ್. ಕೊನೆಯಲ್ಲಿ ಎಲ್ಲಾ ಕವಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

“ಸಂಗೀತ ಸಿರಿ”

Duabi Tulusiri_Feb 28_2015-116

Duabi Tulusiri_Feb 28_2015-121

DSC_5590

DSC_5581

DSC_5570 (1)

Duabi Tulusiri_Feb 28_2015-189

Duabi Tulusiri_Feb 28_2015-122

Duabi Tulusiri_Feb 28_2015-123

Duabi Tulusiri_Feb 28_2015-125

Duabi Tulusiri_Feb 28_2015-126

Duabi Tulusiri_Feb 28_2015-127

Duabi Tulusiri_Feb 28_2015-128

Duabi Tulusiri_Feb 28_2015-129

Duabi Tulusiri_Feb 28_2015-130

Duabi Tulusiri_Feb 28_2015-131

Duabi Tulusiri_Feb 28_2015-132

Duabi Tulusiri_Feb 28_2015-133

ಶ್ರೀ ಅರುಣ್ ಕಾರ್ಲೊ ತಂಡದವರ ಸಂಗೀತ ನಿರ್ದೇಶನದಲ್ಲಿ ಗಾಯಕರಾದ ಶ್ರೀ ಹರೀಶ್ ಶೇರಿಗಾರ್, ಶ್ರೀ ಡೋನಿ ಕೊರೆಯಾ, ಶ್ರೀಮತಿ ಆಶಾ ಕೊರೆಯಾ, ಶ್ರೀಮತಿ ಪ್ರೀಮಾ ರೋಡ್ರಿಗಸ್, ಕು| ಸಾಂದ್ರಾ ಡಿ’ಸೋಜಾ, ತುಳು ಗೀತೆಗಳನ್ನು ಸುಶ್ರಾವ್ಯವಾಗಿ ತಮ್ಮ ಸುಮಧುರ ಕಂಠಸಿರಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದರು.

“ತುಳುನಾಡ ವೈಭವ”

Duabi Tulusiri_Feb 28_2015-202

Duabi Tulusiri_Feb 28_2015-209

Duabi Tulusiri_Feb 28_2015-219

Duabi Tulusiri_Feb 28_2015-236

Duabi Tulusiri_Feb 28_2015-281

Duabi Tulusiri_Feb 28_2015-288

Duabi Tulusiri_Feb 28_2015-291

Duabi Tulusiri_Feb 28_2015-316

Duabi Tulusiri_Feb 28_2015-331

Duabi Tulusiri_Feb 28_2015-344

Duabi Tulusiri_Feb 28_2015-355

Duabi Tulusiri_Feb 28_2015-358

Duabi Tulusiri_Feb 28_2015-360

ಸ್ಮೈಲ್ ಕ್ರಿಯೇಶನ್ಸ್ ಲಾಂಛನದಲ್ಲಿ ಶ್ರೀಮತಿ ಜಸ್ಮಿತಾ ವಿವೇಕ್ ನಿರ್ದೇಶನದಲ್ಲಿ ತಮ್ಮ ತಂಡದವರಿಂದ ತುಳುನಾಡ ವೈಭವ ನೃತ್ಯರೂಪಕವನ್ನು ಪ್ರಸ್ತುತ ಪಡಿಸಿದರು.

ಸಮಾರೋಪ ಸಮಾರಂಭ

Duabi Tulusiri_Feb 28_2015-369

Duabi Tulusiri_Feb 28_2015-371

ತುಳುಸಿರಿ ಐಸಿರಿ 2015 ರ ಸಮಾರೋಪ ಸಮಾರಂಭ ಡಾ| ವೈ ಎನ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ, ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಶೆರಿಗಾರ್, ದಾಯ್ಜಿವರ್ಲ್ಡ್ ಮುಖ್ಯಸ್ಥ ಶ್ರೀ ವಾಲ್ಟರ್ ನಂದಳಿಕೆ, ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಾವ್ ಪಯ್ಯಾರ್, ದಾಯ್ಜಿ ದುಬಾಯಿ ಸ್ಥಾಪಕ ಅಧ್ಯಕ್ಷರಾದ ಶ್ರೀ ಡಯಾನ್ ಡಿಸೋಜಾ, ಇಂಪ್ರೆಸ್ ಟೆಕ್. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುಧೀರ್ ಕುಮಾರ್ ಪೂಜಾರಿ ಹಾಗೂ ತುಳು ಸಿರಿ ದುಬಾಯಿ ಅಧ್ಯಕ್ಷರಾದ ಶ್ರೀ ಪದ್ಮರಾಜ್ ಎಕ್ಕಾರ್ ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿನ ಹಿಂದೆ ಸೇವೆ ಸಲ್ಲಿಸಿದ ಶ್ರೀ ನವೀನ್ ಸಿಕ್ವೇರಾ, ಶ್ರೀ ಜೋವೆಲ್ ಮತ್ತು ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ತುಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೀ ಬಿ. ಕೆ. ಗಣೇಶ್ ರೈಯವರಿಗೆ ಸನ್ಮಾನ

Duabi Tulusiri_Feb 28_2015-381

Duabi Tulusiri_Feb 28_2015-385

Duabi Tulusiri_Feb 28_2015-388

Duabi Tulusiri_Feb 28_2015-390

ಯು.ಎ.ಇ. ಯಲ್ಲಿ ಕಲಾ ನಿರ್ದೇಶಕರಾಗಿ, ಬರಹಗಾರರಾಗಿ, ಸಂಘಟನೆಯ ನಾಯಕರಾಗಿ, ತುಳು, ಕನ್ನಡ ಭಾಷೆಗೆ ಸಲ್ಲಿಸಿದ ಸೇವೆ ಹಾಗೂ ತುಳು ಸಿರಿ ಐಸಿರಿ – 2015ರ ಲಾಂಚನ ವಿನ್ಯಾಸ, ವೇದಿಕೆಯ ಚಿತ್ರಪಟದ ವಿನ್ಯಾಸ, ಆಮಂತ್ರಣ ಪತ್ರದ ವಿನ್ಯಾಸಕ್ಕಾಗಿ ಶ್ರೀ ಬಿ.ಕೆ. ಗಣೇಶ್ ರೈ ಹಾಗು ಧರ್ಮಪತ್ನಿ ಶ್ರೀಮತಿ ಮಂಜುಳಾ ಗಣೇಶ್ ರೈ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್ ಯವರಿಗೆ ಸನ್ಮಾನ

Duabi Tulusiri_Feb 28_2015-417

Duabi Tulusiri_Feb 28_2015-425

Duabi Tulusiri_Feb 28_2015-429

Duabi Tulusiri_Feb 28_2015-434

ಕರಾವಳಿ ಕರ್ನಾಟಕದ ನಾಡಿ ಮಿಡಿತ ನಮ್ಮ ಟಿ.ವಿ. ಯ ಕಾರ್ಯಕ್ರಮ ನಿರೂಪಕರಾದ ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್ ಮಂಗಳೂರಿನಿಂದ ಅತಿಥಿಯಾಗಿ ಆಗಮಿಸಿ ತುಳು ಸಿರಿ ಐಸಿರಿ 2015 ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಅವರ ವಾಘ್ಮಯ ಚತುರತೆಗೆ ಪ್ರೇಕ್ಷಕವರ್ಗದ ಅಪಾರ ಮೆಚ್ಚುಗೆಯನ್ನು ಪಡೆದಿರುವ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ| ವೈ. ಎನ್ ಶೆಟ್ಟಿಯವರಿಗೆ ಗೌರವ ಪೂರ್ವಕ ಸನ್ಮಾನ

Duabi Tulusiri_Feb 28_2015-408

Duabi Tulusiri_Feb 28_2015-404

Duabi Tulusiri_Feb 28_2015-398

ತುಳು ಸಿರಿ ಐಸಿರಿ 2015 ರ ಅಧ್ಯಕ್ಷರಾಗಿ ಕಾರ್ಯಕ್ರಮದ ಘನತೆ ಗೌರವನ್ನು ಹೆಚ್ಚಿಸಿ ಕೊಲ್ಲಿ ನಾಡಿನ ತುಳುವರ ಅಪಾರ ಅಭಿಮಾನಕ್ಕೆ ಪಾತ್ರರಾದ ಡಾ| ವೈ ಎನ್. ಶೆಟ್ಟಿಯವರನ್ನು ತುಳು ಸಿರಿ ದುಬಾಯಿ ಯ ಅಧ್ಯಕ್ಷರಾದ ಶ್ರೀ ಪದ್ಮರಾಜ್ ಎಕ್ಕಾರ್ ಸನ್ಮಾನಿಸಿ ಗೌರವಿಸಿದರು. ಶ್ರೀ ಶಾಂತರಾಂ ಆಚಾರ್ ಸನ್ಮಾನ ಪತ್ರ ವಾಚಿಸಿದರು.

ಅತಿಥಿಗಳಿಂದ ಶುಭಾಶಯದೊಂದಿಗೆ ಮೆಚ್ಚುಗೆಯ ನುಡಿಗಳು.
ಅತಿಥಿಗಳಾದ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಮತ್ತು ಶ್ರೀ ಡಯಾನ್ ಡಿ’ಸೋಜಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಅಧ್ಯಕ್ಷತೆಯನ್ನು ವಹಿಸಿದ ಡಾ| ವೈ. ಎನ್ ಶೆಟ್ಟಿಯವರು ಸಮಾರೋಪ ಭಾಷಣವನ್ನು ಮಾಡಿದರು.

ತುಳು ರಂಗಭೂಮಿ, ತುಳು ಸಿನೆಮಾ ರಂಗದ ಹಿರಿಯ ನಟ ಶ್ರೀ ಕೆ. ಎನ್. ಟೈಲರ್ ರವರಿಗೆ ವೈಧ್ಯಕೀಯ ನೆರವು ನೀಡಿಕೆ.

ತುಳು ರಂಗಭೂಮಿ ಮತ್ತು ತುಳು ಸಿನಿಮಾ ರಂಗದಲ್ಲಿ ಕಳೆದ ಮೂರು ದಶಕಗಳ ಹಿಂದೆ ಅಪಾರ ಸೇವೆ ಸಲ್ಲಿಸಿ ಇದೀಗ ಅನಾರೋಗ್ಯ ಪೀಡಿತರಾಗಿದ್ದು ಅವರ ವೈಧ್ಯಕೀಯ ನೆರವಿಗಾಗಿ ತುಳುಸಿರಿ ದುಬಾಯಿ ತುಳುಸಿರಿ ಐಸಿರಿ ಸಮಾರಂಭದಲ್ಲಿ ದಾನಿಗಳು ನೀಡಿದ ಒಂದು ಲಕ್ಷ ಇಪ್ಪತೈದು ರೂಪಾಯಿಯನ್ನು ನೀಡುವಂತೆ ತೀರ್ಮಾನಿಸಿದರು.

Duabi Tulusiri_Feb 28_2015-064

Duabi Tulusiri_Feb 28_2015-065

Duabi Tulusiri_Feb 28_2015-066

Duabi Tulusiri_Feb 28_2015-067

Duabi Tulusiri_Feb 28_2015-068

Duabi Tulusiri_Feb 28_2015-069

Duabi Tulusiri_Feb 28_2015-070

Duabi Tulusiri_Feb 28_2015-071

Duabi Tulusiri_Feb 28_2015-081

Duabi Tulusiri_Feb 28_2015-082

Duabi Tulusiri_Feb 28_2015-083

Duabi Tulusiri_Feb 28_2015-084

Duabi Tulusiri_Feb 28_2015-085

Duabi Tulusiri_Feb 28_2015-086

Duabi Tulusiri_Feb 28_2015-088

Duabi Tulusiri_Feb 28_2015-112

Duabi Tulusiri_Feb 28_2015-114

ಬಹು ದಿನಗಳಿಂದ “ತುಳು ಸಿರಿ ಐಸಿರಿ” ಯ ಪೂರ್ವಭಾವಿ ತಯಾರಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀಯುತರುಗಳಾದ ಸುಧೀರ್ ಕುಮಾರ್ ಪೂಜಾರಿ, ಯಶ್ವಿನ್ ಎಸ್. ಬಂಗೆರಾ, ಕಿರಣ್, ಲಾರೆನ್ಸ್ ಡಿ’ಸೋಜಾ, ಮುರಳಿ, ಕಿಶೋರ್, ಮನೋಹರ್ ಶೆಟ್ಟಿ, ಕಲ್ಪೇಶ್ ಉಚ್ಚಿಲ, ವಿಜಯ ತೆಲ್ಲಿತ್ , ಸಮಾರಂಭದ ತೆರೆಯಮರೆಯಲ್ಲಿ ಸೇವೆ ಸಲ್ಲಿಸಿದವರು ಶ್ರೀಮತಿ ಲತಾ ಹೆಗ್ಡೆ ಮತ್ತು ತಂಡ.

ಸೇವೆ ಅಭಿನಂಧನಾರ್ಹವಾಗಿದೆ.  ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಆಹ್ವಾನಿತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಉಪಹಾರವನ್ನು ಅಧ್ಯಕ್ಷರಾದ ಶ್ರೀ ಪದ್ಮರಾಜ್ ಎಕ್ಕಾರ್ ವ್ಯವಸ್ಥೆ ಮಾಡಿದ್ದರು. ಕೊಲ್ಲಿ ನಾಡಿನ ಅಪಾರ ತುಳು ಅಭಿಮಾನಿಗಳು ತಮ್ಮ ಅಮೂಲ್ಯ ಸಮಯವನ್ನು ತುಳು ಸಿರಿ ಕಾರ್ಯಕ್ರಮಕ್ಕೆ ವಿನಿಯೋಗಿಸಿ ತಮ್ಮ ಪೂರ್ಣ ಸಹಕಾರ ಬೆಂಬಲ ನೀಡಿದ್ದು ಕೊಲ್ಲಿ ನಾಡಿನಲ್ಲಿ ನಡೆದ ವಿಶೇಷ ಕಾರ್ಯಕ್ರಮಕ್ಕೆ ತುಳು ಸಿರಿ ಐಸಿರಿ-2015 ಐತಿಹಾಸಿಕ ಸಾಕ್ಷಿಯಾಯಿತು.

Write A Comment