ಗುದೈಬಿಯ, ಬಹ್ರೈನ್: ತನ್ನ ದಶಮಾನೋತ್ಸವದ ಪ್ರಯುಕ್ತ ಯೋಜಿಸಿರುವ ದಶ ವಿಶೇಷ ಕಾರ್ಯಕ್ರಮಗಳ ಪೈಕಿ ಏಳನೆಯ ಕಾರ್ಯಕ್ರಮವಾಗಿ ‘ಏಕ ದಿನದ ಮುಕ್ತ ಡಾರ್ಟ್ಸ್ ಪಂದ್ಯಾಟ’ವನ್ನು ಮೊಗವೀರ್ಸ್ ಬಹ್ರೈನ್ ಸಂಸ್ಥೆಯು ಇತ್ತೀಚೆಗೆ ಬಹ್ರೈನ್‍ನ ಅನಿವಾಸಿ ಕನ್ನಡಿಗರಿಗಾಗಿ ಆಯೋಜಿಸಿತು. ಬಹ್ರೈನ್‍ನ ಗುದೈಬಿಯ ನಗರದ ಕರ್ನಾಟಕ ಸೋಶಿಯಲ್ ಕ್ಲಬ್‍ನಲ್ಲಿ ಜರಗಿದ ಈ ಆಕರ್ಷಕ ಒಳಾಂಗಣ ಪಂದ್ಯಾಟವು ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಜರಗಿದ್ದು, ದ್ವೀಪ ರಾಷ್ಟ್ರದ ಹೆಚ್ಚಿನ ಸಂಖ್ಯೆಯ ಅನಿವಾಸಿ ಕನ್ನಡಿಗ ಡಾರ್ಟ್ಸ್ ಆಟಗಾರರು ಇದರಲ್ಲಿ ಅತಿ ಉತ್ಸಾಹದಿಂದ ಪಾಲ್ಗೊಂಡರು.
ಆರಂಭದಲ್ಲಿ ಬೆಳಿಗ್ಗೆ ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ಡಾರ್ಟ್ಸ್ ಬೋರ್ಡಿನ ಮೇಲೆ ಡಾರ್ಟ್ಸ್ ಎಸೆಯುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರಲ್ಲದೆ, ಅವರು ತನ್ನ ಉದ್ಘಾಟನಾ ಭಾಷಣದಲ್ಲಿ ಕ್ರೀಡಾಳುಗಳೆಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಆಡಿ ಸಹಕರಿಸುವಂತೆ ತಿಳಿಸುತ್ತಾ ಸ್ಪರ್ಧಾ ಕೂಟದ ಯಶಸ್ಸಿಗೆ ಹಾರೈಸಿದರು. ಬೌದ್ಧಿಕ ಜಾಣ್ಮೆ, ಚುರುಕಿನ ಗಣಿತ ಮತ್ತು ಗುರಿ ಭೇದಿಸುವ ಕೌಶಲವೇ ಪ್ರಧಾನವಾಗಿರುವ ಈ ಡಾರ್ಟ್ಸ್ ಆಟದ ಪಂದ್ಯಾಟದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧಾ ವಿಭಾಗಗಳನ್ನು ರಚಿಸಲಾಗಿದ್ದು, ದಿನವಿಡೀ ನಡೆದ ಈ ಕುತೂಹಲಕಾರಿ ಪಂದ್ಯಾಟದಲ್ಲಿ ಅಂತಿಮವಾಗಿ ಶ್ರೇಷ್ಠ ನಿರ್ವಹಣೆಯನ್ನು ತೋರಿದ ಈ ಕೆಳಗಿನ ಆಟಗಾರರು ಪ್ರಶಸ್ತಿಗಳನ್ನು ಗೆದ್ದುಕೊಂಡರು.
ಪುರುಷರ ಸಿಂಗಲ್ಸ್ ವಿಭಾಗ:
ಪ್ರಥಮ: ಪ್ರಕಾಶ್ ವೆಂಕಟಾಚಲಂ, ದ್ವಿತೀಯ: ಅಶ್ವಿನ್, ತೃತೀಯ: ಕೃಷ್ಣ ಸುವರ್ಣ ಮತ್ತು ಚತುರ್ಥ: ಕೃಷ್ಣ ನೈಂಪಳ್ಳಿ.
ಮಹಿಳೆಯರ ಸಿಂಗಲ್ಸ್ ವಿಭಾಗ:
ಪ್ರಥಮ: ಶಾಲಿನಿ ಶೆಟ್ಟಿ, ದ್ವಿತೀಯ: ಆಸ್ತಿಕ ಶೆಟ್ಟಿ, ತೃತೀಯ: ಲೋಲಾಕ್ಷಿ ರಾಜಾರಾಮ್ ಮತ್ತು ಚತುರ್ಥ: ಪೂರ್ಣಿಮಾ ಜಗದೀಶ್.
ಪುರುಷರ ಡಬಲ್ಸ್ ವಿಭಾಗ:
ಪ್ರಥಮ: ಪ್ರಕಾಶ್ ವೆಂಕಟಾಚಲಂ ಮತ್ತು ಜಯ ಕುಮಾರ್ ಮಣಿಪಾಲ, ದ್ವಿತೀಯ: ಅಶ್ವಿನ್ ಮತ್ತು ಅರುಣ್ ಐರೋಡಿ, ತೃತೀಯ: ಸಂಜೀವ ಶೆಟ್ಟಿ ಮತ್ತು ಸುನೀಲ್ ಕದ್ರಿ ಹಾಗೂ ಚತುರ್ಥ: ಜೋಗ ಮೆಂಡನ್ ಮತ್ತು ಚಂದ್ರ ಮೆಂಡನ್.
ಮಹಿಳೆಯರ ಡಬಲ್ಸ್ ವಿಭಾಗ:
ಪ್ರಥಮ: ಶಾಲಿನಿ ಶೆಟ್ಟಿ ಮತ್ತು ಆಸ್ತಿಕ ಶೆಟ್ಟಿ, ದ್ವಿತೀಯ: ವೀಣಾ ಡಿ’ಸೋಜ ಮತ್ತು ಅನಿತಾ ಕ್ಲೀಟಸ್, ತೃತೀಯ: ಪೂರ್ಣಿಮಾ ಜಗದೀಶ್ ಮತ್ತು ಪದ್ಮಾ ರಮೇಶ್ ಹಾಗೂ ಚತುರ್ಥ: ಲೋಲಾಕ್ಷಿ ರಾಜಾರಾಮ್ ಮತ್ತು ಗಾಯತ್ರಿ ಶೇಖರ್.
ಶ್ರೇಷ್ಠ ಕ್ರೀಡಾಳು: ಪುರುಷರ ವಿಭಾಗ – ಅಶ್ವಿನ್. ಮಹಿಳೆಯರ ವಿಭಾಗ – ಆಸ್ತಿಕಾ ಶೆಟ್ಟಿ.
ಗರಿಷ್ಠ ಅಂಕ ಸಂಪಾದನೆ: ಪುರುಷರ ವಿಭಾಗ – ಯಾರೂ ಇಲ್ಲ. ಮಹಿಳೆಯರ ವಿಭಾಗ – ವೀಣಾ ಡಿ’ಸೋಜಾ.
ತರುವಾಯದಲ್ಲಿ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಬಹ್ರೈನ್‍ನಲ್ಲಿನ ವಿವಿಧ ತುಳುವ-ಕನ್ನಡಿಗ ಸಂಸ್ಥೆಗಳ ಮುಖಂಡರು ಹಾಗೂ ಇತರ ಗಣ್ಯರುಗಳಾದ ವಿನಯ್ ಡಿ’ಸೋಜಾ, ಜಗದೀಶ್ ಆಚಾರ್, ಕೃಷ್ಣ ನೈಂಪಳ್ಳಿ, ಜಯ ಶೆಟ್ಟಿ, ರಾಜ್‍ಕುಮಾರ್, ಶಿವ ಕುಮಾರ್, ಕೃಷ್ಣ ಸುವರ್ಣ ಮತ್ತು ಶೇಖರ್ ಬಳ್ಳಾರಿ ಇವರೆಲ್ಲಾ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ಆಡಳಿತ ಸಮಿತಿಯ ಸದಸ್ಯರು ಮತ್ತು ಉಪಸ್ಥಿತ ಅತಿಥಿಗಳನ್ನು ಕೂಡಿಕೊಂಡು ಪಂದ್ಯಾಟದಲ್ಲಿ ಭಾಗಿಗಳಾದವರಿಗೆ ಹಾಗೂ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಣೆ ಗೈದರು.
ಇದೇ ಸಂದರ್ಭದಲ್ಲಿ, ಈ ಪಂದ್ಯಾಟವನ್ನು ಯಶಸ್ವಿಯಾಗಿ ಸಂಘಟಿಸುವುದಕ್ಕೆ ವಿಶೇಷ ಸಹಕಾರವನ್ನಿತ್ತ ಕರಾವಳಿ ಫೆಂಡ್ಸ್ ಬಹ್ರೈನ್ ಈ ಡಾರ್ಟ್ಸ್ ಕ್ರೀಡಾ ತಂಡದ ಸಂಚಾಲಕ ಕೃಷ್ಣ ನೈಂಪಳ್ಳಿ ಮತ್ತು ಸದಸ್ಯರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಅಂತಿಮದಲ್ಲಿ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಪುನೀತ್ ಪುತ್ರನ್ ಅವರು ವಂದನಾರ್ಪಣೆ ಗೈದರು ಹಾಗೂ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಡಿ.ರಮೇಶ್ ಅವರು ನಿರೂಪಿಸಿದರು.
ಅತ್ಯಂತ ಯಶಸ್ವಿಯಾಗಿ ಜರಗಿ, ಅಲ್ಲಿ ಆಗಮಿಸಿದ್ದ ಉತ್ತಮ ಸಂಖ್ಯೆಯ ಕ್ರೀಡಾಳುಗಳಿಗೆ ಮತ್ತು ಕ್ರೀಡಾಸಕ್ತರಿಗೆ ಆನಂದವನ್ನಿತ್ತ ಈ ಡಾರ್ಟ್ಸ್ ಪಂದ್ಯಾಟವನ್ನು ಸಂಯೋಜಿಸುವಲ್ಲಿ ಸಂಸ್ಥೆಯ ಸುರೇಶ್ ಅಮೀನ್, ಚಂದ್ರ ಮೆಂಡನ್, ಪದ್ಮನಾಭ ಕಾಂಚನ್, ರಾಜೇಶ್ ಮೆಂಡನ್, ಸುಧಾಕರ ಸಾಲ್ಯಾನ್ ಮತ್ತು ಲವಣ್ ಕುಮಾರ್ ಅವರು ಬಹುವಾಗಿ ಶ್ರಮಿಸಿದರು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಹಬ್ಸನ್ ರಾಕ್ಸ್ ಸಂಸ್ಥೆ ಮತ್ತು ಕೃಷ್ಣ ನೈಂಪಳ್ಳಿ ಅವರು ಮುಖ್ಯ ಪ್ರಾಯೋಜಕತ್ವವನ್ನು ಹಾಗೂ ರಾಜ್‍ಕುಮಾರ್, ಶೇಖರ್ ಬಳ್ಳಾರಿ ಮತ್ತು ಪ್ರಕಾಶ್ ವೆಂಕಟಾಚಲಂ ಇವರೆಲ್ಲರೂ ಸಹ ಪ್ರಾಯೋಜಕತ್ವವನ್ನು ನೀಡಿ ಬೆಂಬಲಿಸಿದರು