ಗಲ್ಫ್

ದುಬೈ ಎಐವೈಎಫ್‌ನಿಂದ ಫೆ.13ರಂದು ಮಮ್ಝಾರ್ ಗ್ರೌಂಡ್‌ನಲ್ಲಿ ‘ಅಲಿಫ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ

Pinterest LinkedIn Tumblr

match

ದುಬೈ, ಫೆ.8: ಅಲ್ ಇಸ್ಲಾಮಿಯ್ಯಾ ಯೂತ್ ಫೆಡರೇಶನ್ ದುಬೈ (ಎಐವೈಎಫ್)ಇದರ ಆಶ್ರಯದಲ್ಲಿ ಫೆಬ್ರವರಿ 13ರ ಶುಕ್ರವಾರದಂದು ದುಬೈಯ ಮಮ್ಝಾರ್ ಗ್ರೌಂಡ್‌ನಲ್ಲಿ ‘ಅಲಿಫ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ಎರಡನೆ ಬಾರಿ ಚಾರಿಟಿಗಾಗಿ ನಡೆಸುತ್ತಿರುವ ಕ್ರಿಕೆಟ್ ಪಂದ್ಯಾಟವು ಬೆಳಗ್ಗೆ 6:30ಕ್ಕೆ ಆರಂಭಗೊಳ್ಳಲಿದೆ. ಪ್ರಥಮ ಬಹುಮಾನ 2222 ದಿರ್ಹಂ ಹಾಗೂ ‘ಅಲಿಫ್ ಟ್ರೋಫಿ’ , ದ್ವಿತೀಯ ಬಹುಮಾನ 1111 ಹಾಗೂ ‘ಅಲಿಫ್ ಟ್ರೋಫಿ’ ಮತ್ತು ಇನ್ನ್ಝಿತರ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು. ಪ್ರವೇಶ ಶುಕ್ಕ 500 ದಿರ್ಹಂ. ಕ್ರಿಕೆಟ್ ಪಂದ್ಯಾಕೂಟದಲ್ಲಿ ಭಾಗವಹಿಸಲಿಚ್ಚಿಸುವ ತಂಡಗಳು ಫೆ.11ರೊಳಗೆ ಸುಲೈಮಾನ್ ಎಂ.ಅರಫಾ(050-8720768), ಸಾದಿಕ್ ಕೆ.(055-1883062), ಗಫೂರ್(055-5191155), ಸಮದ್ ಬಿರಾಲಿ(055-3540287)ಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Write A Comment