ಗಲ್ಫ್

ಸ್ಪಂದನ ಮಸ್ಕತ್ ನಿಂದ ಫೆಬ್ರವರಿ 13ರಂದು “ಶಾಮ್ ಎ ಸರ್ಗಮ್ ” ಸಂಗೀತ ಸಂಜೆ

Pinterest LinkedIn Tumblr

Backdrop

ಸ್ಪಂದನ ಮಸ್ಕತ್ ರವರು ಮಜಾನ್ ಈವೆಂಟ್ಸ್ ರವರ ಸಹಯೋಗದೊಂದಿಗೆ ಮಸ್ಕತ್ ಕನ್ನಡಿಗರಿಗೆ ಮತ್ತೊಮ್ಮೆ ಸಂಗೀತ ರಸದೌತಣವನ್ನು ನೀಡಲು ತಯಾರಿ ನಡೆಸಿದ್ದಾರೆ. SHAAM-E-SARGAM” (a fusion of melody and music) ಮೂರು ಘಂಟೆ ಗಳ ಕಾಲ ನಡೆಯಲಿರುವ ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿನಿಮಾ ಹಾಡುಗಳು, ಗಜಲ್ಸ್, ಹಾಸ್ಯ, ವಾದ್ಯ ಸಂಗೀತ ಮತ್ತು ಅದ್ದೂರಿ ಭೋಜನವನ್ನು ಒಳಗೊಂಡಿರುತ್ತದೆ.

ಕಾರ್ಯಕ್ರಮವು ೧೩ನೇ ತಾರೀಖು, ಫೆಬ್ರವರಿ ೨೦೧೫ ಶುಕ್ರವಾರ ರಂದು ಹೋಟೆಲ್ ಮಸ್ಕತ್ ಹಾಲಿಡೇ, ಸೂರ್ ಬಾಲ್ ರೂಮ್ ಅಲ್ ಖುವೇರ್, ಮಸ್ಕತ್ ನಲ್ಲಿ ನಡೆಯಲಿದ್ದು, ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿ ಯಾಗಿರುವ ಬಹುಮುಖ ಪ್ರತಿಭೆಯ ಕಲಾವಿದರಾದ ಶ್ರೀ ನವೀನ್ ಕುಮಾರ್ , ಶ್ರೀಮತಿ ಪ್ರಾರ್ಥನ ಚೌದರಿ ಮತ್ತು ಅನುಭವಿ ವಾಧ್ಯಗೋಷ್ಟಿ ರವರ ತಂಡ ತಮ್ಮ ಕಲಾನೈಪುಣ್ಯತೆಯಿಂದ ಮಸ್ಕತ್ ಕನ್ನಡಿಗರಿಗೆ ಸಂಗೀತ ಲೋಕದ ಒಂದು ಅಧ್ಬುತ ಅನುಭವವನ್ನು ನೀಡಲಿದೆ.

“ಶಾಮ್-ಈ-ಸರಗಮ್” ಸಂಗೀತ ಕಾರ್ಯಕ್ರಮ ಸುಮಧುರ ಗಾಯನ, ಸುಂದರ ಘಜಲ್, ಜಾನಪದ, ಶಾಸ್ತ್ರೀಯ ಗಾಯನ, ಹಳೆಯ ಮತ್ತು ಹೊಸ ಸಿನಿಮಾ ಗೀತೆಗಳು ಮತ್ತು ಇಂಪಾದ ವಾದ್ಯ ಸಂಗೀತ ಮತ್ತು ಅತ್ತುತ್ತಮ ಕಲಾವಿದರಿಂದ ರೂಪುಗೊಂಡಿರುವ ವಿಶೇಷ ಸುಮಧುರ ಸಂಗೀತ ಕಾರ್ಯಕ್ರಮ. ಕಳೆದ ಮೂರು ವರ್ಷಗಳಿಂದ ಸ್ಪಂದನ ತಂಡ ಇಂತಹ ವಿನೂತನ ಪ್ರಯತ್ನ ಗಳನ್ನು ಸತತವಾಗಿ ನಡೆಸುತ್ತ ಬಂದಿದೆ. ಸುಂದರ ಸಂಜೆ, ಆಹ್ಲಾದಕರ ವಾತಾವರಣ, ಸುಮಧರ ಗಾಯನ ಮತ್ತು ಅದ್ದೂರಿ ಭೋಜನ, ಇಂತಹ ರಸದೌತಣ ವನ್ನು ಸವಿಯಲು ಒಮಾನ್ ಸಂಗೀತ ರಸಿಕರಿಗೆ ಮತ್ತೇನೂ ಬೇಕು ಹೇಳಿ. ಹೆಚ್ಚಿನ ವಿವರಗಳಿಗಾಗಿ ನೀವು ಇ = ಮೇಲ್ ಮೂಲಕ ಸಂಪರ್ಕಿಸಬಹುದು “spandanamuscat@gmail.com”

Write A Comment