ಗಲ್ಫ್

ದುಬೈ ಬಿಸಿಎಫ್‌ನ ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’ ಕ್ರೀಡಾಕೂಟಕ್ಕೆ ಆಗಮಿಸಿದ ಗಣ್ಯರಿಗೆ ಅದ್ದೂರಿ ಸ್ವಾಗತ

Pinterest LinkedIn Tumblr

Dubai BCF-Jan 29- 2015_005

ದುಬೈ, ಜ.29: ನಾಳೆ (ಜನವರಿ 30) ಅಜ್ಮಾನ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಯುಎಇ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್)ನ ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಲಿರುವ ಗಣ್ಯಾಥಿಗಣ್ಯರ ದಂಡು ದುಬೈಗೆ ಆಗಮಿಸಿದೆ.

ಜನವರಿ 30ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಜರಗಲಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಕರ್ನಾಟಕ ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಮೊಯಿದಿನ್ ಬಾವಾ, ಉದ್ಯಮಿ ಮುಮ್ತಾಝ್ ಅಲಿ ಸೇರಿದಂತೆ ಗಣ್ಯರ ದಂಡೇ ದುಬೈಗೆ ಆಗಮಿಸಿದೆ.

Dubai BCF-Jan 29- 2015_001

Dubai BCF-Jan 29- 2015_002

Dubai BCF-Jan 29- 2015_004

Dubai BCF-Jan 29- 2015_006

Dubai BCF-Jan 29- 2015_008

Dubai BCF-Jan 29- 2015_011

Dubai BCF-Jan 29- 2015_012

ದುಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಗಣ್ಯರಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಶುಕ್ರವಾರ ಬೆಳಗ್ಗೆ ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್ ಆಗಮಿಸಲಿದ್ದಾರೆ.

ಯು.ಟಿ.ಖಾದರ್ ಸೇರಿದಂತೆ ದುಬೈಗೆ ಆಗಮಿಸಿದ ಎಲ್ಲ ಗಣ್ಯರನ್ನು ಬ್ಯಾರೀಸ್ ಕಲ್ಚರಲ್ ಫೋರಂನ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಉಪಾಧ್ಯಕ್ಷ ಎಂ.ಇ.ಮೂಳೂರು, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್, ಕ್ರೀಡಾಕೂಟದ ಸಂಚಾಲಕ ಹನೀಫ್ ಕಾಪು, ಬಿಸಿಎಫ್‌ನ ಉಪಾಧ್ಯಕ್ಷರಾದ ಲತೀಫ್ ಮೂಲ್ಕಿ, ರಝಾಕ್ ದೇವಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Write A Comment