ಗಲ್ಫ್

ದೀನೀ  ಸಂಘ ಸಂಸ್ಥೆಗಳ ಪೋಷಣೆಯ ಫಲವಾಗಿದೆ ಪರಲೋಕ ಯಶಸ್ಸಿನ ಗುಟ್ಟು : ಕೆ ಐ ಸಿ ಕಾರ್ಯಕ್ರಮದಲ್ಲಿ  ಅಡ್ವಕೇಟ್ ಹನೀಫಾ ಹುದವಿ 

Pinterest LinkedIn Tumblr

IMG_3624

ಸಂಸ್ಕಾರಯುತ ಜೀವನ ನಡೆಸಲು ಅತ್ಯವಶ್ಯಕವಾಗಿದೆ ದೀನೀ  ಜ್ಞಾನ . ಅಂತಹ ವಿಧ್ಯಾಭ್ಯಾಸವನ್ನು ನೀಡುತ್ತಿರುವ  ಜಾಮಿಅ ಅಲ್  ಕೌಸರ್ ಶರೀತ್ ಕಾಲೇಜ್ ಇದರ ಸರ್ವಾಂಗೀಣ ಅಭಿವೃದ್ದಿಯ ನೇತೃತ್ವವನ್ನು ನೀಡುತ್ತಿರುವ ಕೆ ಐ ಸಿ ಯಾ ಕಾರ್ಯಕ್ಷೇತ್ರ ಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅಡ್ವಕೇಟ್ ಹನೀಫ್ ಹುದವಿಯವರು ನಾಳಿನ ಪರಲೋಕ ಜೀವನದಲ್ಲಿ ಸೃಷ್ಠಿ ಕರ್ತನು ಕೇಳುವ ಪ್ರಶ್ನೆ ಒಂದಾಗಿದೆ ದೀನೀ  ಸಂಘ ಸಂಸ್ಥೆಗಳ ಪೋಷಣೆ.  ಓರ್ವ ಮನುಷ್ಯನ ಜೀವನದಲ್ಲಿ ಬೆಲೆ ಕಟ್ಟಲಾಗದ ವಸ್ತುವೊಂದಿದ್ದಲ್ಲಿ ಅದು ಶಿಕ್ಷಣ. ಶಿಕ್ಷಣವನ್ನು ಜೀವನದಲ್ಲಿ ಹಲವಾರು ರೀತಿಯಲ್ಲಿ ಉಪಯೋಗಿಸಬಹುದು  ಆದರೆ ಸಂಸ್ಕಾರಯುತ ಶಿಕ್ಷಣವು ಕಾಣಸಿಗುವುದು ಅತೀ ವಿರಳ. ಇಂತಹ ಸಂದಿಗ್ದ ಪರಿಸ್ಥಿತಿಗಳಲ್ಲಿ ಉಚಿತವಾಗಿ ಸಮನ್ವಯ ವಿಧ್ಯಾಕೆಂದ್ರದ ಸ್ಥಾಪನೆಯ ಗುರಿಯನ್ನು ತಲುಪಿದ ಕೆ ಐ ಸಿ ಕಾರ್ಯಕರ್ತರನ್ನು ಅಭಿನಂದಿಸಿದ ಅವರು , ಖುರ್-ಆನ್ ಹದೀಸ್ ಗಳಲ್ಲಿ ಉಲ್ಲೇಖಿಸಿದಂತೆ ವಿಧ್ಯೆಯನ್ನು ಅದು ಚೀನಾ ದಲ್ಲಾದರು ಕಲಿಯಬೇಕೆಂಬ ವ್ಯಾಖ್ಯಾನದೊಂದಿಗೆ ಪ್ರಾಯ ದ ಇತಿಮಿತಿಗಲಿಲ್ಲದೆ ಇಸ್ಲಾಂ ಶಿಕ್ಷಣಕ್ಕೆ ಅತೀ ಹೆಚ್ಹಿನ ಮಹತ್ವವನ್ನು ನೀಡಿದೆ. ಇಂತಹ ಸಂದರ್ಭಗಳಲ್ಲಿ ಕುಂಬ್ರ ದಲ್ಲಿ ತಲೆಯೆತ್ತಿ ನಿಂತಿರುವ ವಿಧ್ಯಾ  ಸಂಸ್ಥೆಯ  ಅಭಿವೃದ್ದಿಯಲ್ಲಿ ತಾವೆಲ್ಲರೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು , ರಾಜ್ಯ ರಾಷ್ಟ್ರ ಮಟ್ಟದಲ್ಲಿ ತಮ್ಮ ಸ್ಥಾಪನೆಯ ಹೆಸರನ್ನು , ವಿಜಯದ ಪತಾಕೆಯನ್ನು ಹರಿಸಲು ತಾವೆಲ್ಲರೂ ಕಠಿಬದ್ದರಾಗುವಂತೆ ಕೇಳಿಕೊಂಡರು.  ಅಲ್ಲದೆ ಇದೇ  ಸಂದರ್ಬದಲ್ಲಿ ಕೆ ಐ ಸಿ ಅಧೀನ ಯುವ ಸಂಘಟನೆಯ  ಕೆ ಐ ಸಿ ಅಲ್  ಕೌಸರ್ ಯೂತ್ ವಿಂಗ್ ನೇತೃತ್ವದಲ್ಲಿ ಅಕಾಡೆಮಿಗೆ ನೀಡಿದ ವಾಹನ ವ್ಯವಸ್ತೆಯನ್ನು ಉಲ್ಲೇಖಿಸಿ  ಮಾತನಾಡಿದ ಅವರು ಸದಸ್ಯರ  ಕಾರ್ಯದಕ್ಷೆತೆಯನ್ನು ಪ್ರಶಂಸಿಸಿ , ತಮ್ಮಂತಹ  ಸದಸ್ಯರ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿದೆ  ಕೆಲ ಸಮಯಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲಿಸಿದ ಕೆ ಐ ಸಿ ವಿಧ್ಯಾರ್ಥಿಗಳ ಬಹುಭಾಷ ಪಾಂಡಿತ್ಯ. ಇಂದು ರಾಜ್ಯ ಮಟ್ಟದಲ್ಲೇ ಬೆರಳು ತೋರಿಸಿ ಪ್ರಶಂಸಿಸಲು ಇದ್ದ ವಿಧ್ಯಾರ್ಥಿ ಸಮೂಹ ವೊಂದಿದ್ದಲ್ಲಿ ಅದು ಕೆ ಐ ಸಿ ಮಾತ್ರವಾಗಿದೆ. ಎಂದು  ಕೆ ಐ ಸಿ ಅಲ್  ಬರಹ ನೂತನ ಘಟಕ ರಚನೆಯ ಹಾಗು ಮೌಲೂದ್ ಕಾರ್ಯಕ್ರಮದಲ್ಲಿ  ಮುಖ್ಯ ಪ್ರಭಾಷಣ ಮಾಡಿದರು.

IMG_3621

IMG_3616

ಜವಾದ್ ಹುದವಿಯವರು ಉದ್ಘಾಟಿಸಿ ಮಾತನಾಡಿ , ಪ್ರವಾದಿ ಪ್ರೇಮ , ಸಂಘ ಸಂಸ್ಥೆಗಳ ಪೋಷಣೆಯ ಬಗ್ಗೆ ವಿವರಿಸಿ , ಕೆ ಐ ಸಿ ವಿಧ್ಯಾ ಸ್ಥಾಪನೆಯ ಪ್ರಗತಿಗೆ ಶುಭ ಹಾರೈಸಿದರು

ಯು ಎ ಇ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ . ಕೆ ಐ ಸಿ ಪೋಷಕರಲ್ಲಿ  ಓರ್ವರಾದ ಜನಾಬ್ ಅಬ್ದುಲ್ ರಝಾಕ್ ರವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹು ನೌಶಾದ್ ಫೈಝಿ ಯವರು ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಂಸುದ್ದೀನ್ ಹನೀಫಿ ಯವರು ಸ್ವಾಗತಿಸಿ ಮಾತನಾಡಿ, ಕೆ ಐ ಸಿ ಯ ಪ್ರಗತಿ , ವಿಧ್ಯಾಸಂಸ್ಥೆಯ ಅಭಿವೃದ್ದಿಯ ಬಗ್ಗೆ ಪ್ರಶಂಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದುಬೈ ಸಮಿತಿ ಅಧ್ಯಕ್ಷರಾದ ಜನಾಬ್ ಎಸ್ ಎಂ  ಅಶ್ರಫ್ ಮಾಂತೂರ್  ರವರು ಕೆ ಐ ಸಿ ಎಂಬ ಮಹಾನ್ ಸಂಸ್ಥೆಯು ಇಂದು ಹಲವಾರು ಕ್ಷೇತ್ರಗಳಲ್ಲಿ ಪರಿಚಯಿಸಿಕೊಂಡು ಯಶಸ್ಸನ್ನೇ ಸಾಧಿಸುತ್ತಾ ಬಂದಿದ್ದು. ಕರ್ನಾಟಕ ರಾಜ್ಯದಲ್ಲೇ ಪ್ರಭುದ್ದ, ಪ್ರಭಾವಿ , ಯುವ ಪ್ರಭಾಷಣಗಾರರನ್ನು ಪರಿಚಯಿಸಿದ ಈ ಸಂಸ್ಥೆಯ ವಿಧ್ಯಾರ್ಥಿಗಳು  ಬಹುಭಾಷಾ ಪಾಂಡಿತ್ಯದಲ್ಲೂ ತನ್ನ ಕೀರ್ತಿಯನ್ನು ಹೆಚ್ಚಿಸಿದೆ. ಆದ್ದರಿಂದ ಮುಂದೆ ಕೆ ಐ ಸಿ ಯ ಕನಸಿನಲ್ಲ್ಲಿ ವಿವಿದ ಕಾಮಗಾರಿಗಳ ಗುರಿಗಳಿದ್ದು  ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ರಾಷ್ಟ್ರೀಯ ಸಮಿತಿ ನೇತಾರರಾದ ಅಬ್ದುಲ್ ರಝಾಕ್  ಬುಲ್ಲೆರಿಕಟ್ಟೆ , ಬದ್ರುದ್ದೀನ್ ಹೆಂತಾರ್ , ನೂರ್ ಮೊಹಮ್ಮದ್ ನೀರ್ಕಜೆ, ಸುಲೈಮಾನ್ ಮೌಲವಿ ಕಲ್ಲೇಗ ಮೊದಲಾದವರು ಸಂಧರ್ಬ್ಹೊಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೆ ಸಂಧರ್ಬದಲ್ಲಿ ಕೆ ಐ ಸಿ ದುಬೈ ಸಮಿತಿ ಅಧೀನದಲ್ಲಿ ಅಲ್  ಬರಹ ಘಟಕಕ್ಕೆ ಚಾಲನೆ ನೀಡಲಾಯಿತು.

ನೂತನ ಘಟಕದ ಅಧ್ಯಕ್ಷರಾಗಿ ಉಸ್ಮಾನ್ ಕೆಮ್ಮಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬುಲ್ಲೆರಿಕಟ್ಟೆ , ಕೋಶಾಧಿಕಾರಿಯಾಗಿ ಜವಾದ್ ಹುದವಿಯವರನ್ನು ಆರಿಸಿ ಸುಮಾರು 3 5ಸದಸ್ಯರನ್ನೊಳಗೊಂಡ ಘಟಕವನ್ನು  ಅಸ್ತಿತ್ವಕ್ಕೆ ತರಲಾಯಿತು.   ಕಾರ್ಯಕ್ರಮದ ಕೊನೆಯಲ್ಲಿ ಮುಸ್ತಫಾ ಗೂನಡ್ಕರವರು  ವಂದಿಸಿ , ಅಶ್ರಫ್ ಪರ್ಲಡ್ಕ  ನಿರೂಪಿಸಿದರು .

Write A Comment