ಗಲ್ಫ್

ಕೆ.ಸಿ.ಎಫ್ ಕುವೈತ್ ನಿಂದ ವಿಜ್ರಂಭಣೆಯಿಂದ ನಡೆದ “ಅಂತರಾಷ್ತ್ರೀಯ ಮೀಲಾದ್ ಸಂಗಮ”

Pinterest LinkedIn Tumblr

Kuwait milaad-Jan 6- 2015_004

ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮದಿನದ ಪ್ರಯುಕ್ತ ಕೆ.ಸಿ.ಎಫ್ ಕುವೈತ್ “ಅಂತರಾಷ್ತ್ರೀಯ ಮೀಲಾದ್ ಸಂಗಮ” ವನ್ನು ಜನವರಿ 1 ರಂದು ಆಯೋಜಿಸಿತ್ತು.ಅಬ್ಬಾಸಿಯ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ನೆರೆದ ಸಾವಿರಾರು ಜನರ ಸಮ್ಮುಖದಲ್ಲಿ, ಸಯ್ಯದ್ ಹಬೀಬ್ ಬುಖಾರಿ ತಂಘಳ್ ರವರ ದುವಾ: ದೊಂದಿಗೆ ಆರಂಭ ಗೊಂಡಿತು. ಎಸ್.ಎಸ್.ಎಫ್ ನ ಉಪಾದ್ಯಕ್ಷ ರಾದ ಇಸ್ಮಾಯಿಲ್ ಸಹದಿ ಯವರು ಕಿರಾಹತ್ ಪಠಿಸಿದರು. ಸ್ವಾಗತ ಕಾರ್ಯಕ್ರಮವನ್ನು ಕಾರ್ಯದರ್ಶಿ ಮನ್ಸೂರ್ ರವರು ನಡೆಸಿ ಕೊಟ್ಟರು.

Kuwait milaad-Jan 6- 2015_001

Kuwait milaad-Jan 6- 2015_002

Kuwait milaad-Jan 6- 2015_003

Kuwait milaad-Jan 6- 2015_005

Kuwait milaad-Jan 6- 2015_006

Kuwait milaad-Jan 6- 2015_007

Kuwait milaad-Jan 6- 2015_008

Kuwait milaad-Jan 6- 2015_009

Kuwait milaad-Jan 6- 2015_010

Kuwait milaad-Jan 6- 2015_011

Kuwait milaad-Jan 6- 2015_012

ಸಯ್ಯದ್ ಭಾಫಾಖಿ ತಂಘಳ್ ರವರು ಸಭೆಗೆ ಸಂದೇಶವಿತ್ತು ಶುಭಕೋರಿದರು. ಸಯ್ಯಿದ್ ಖಲೀಲ್ ಬುಖಾರಿ ತಂಘಳ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮುಸ್ಲಿಮ್ ಸಮುದಾಯವು ಶ್ಯೆಕ್ಷಣಿಕವಾಗಿ ಮುಂದೆಬರಲು ಎಲ್ಲರೂ ಒಂದಾಗಬೇಕು, ರಸೂಲರ ಮೇಲೆ ಸ್ವಲಾತ್ ಹೆಚ್ಚಿಸ ಬೇಕೆಂದು ಒತ್ತಿಹೇಳಿದರು.

ಸಂಚಾಲಕರಾದ ಉಮರ್ ಝುಹುರಿ ಯವರು ಮಾತನಾಡಿ, ಕೆ.ಸಿ.ಎಫ್ ನ ಮುಂದಿನ ಯೋಜನೆ ಗಳನ್ನು ಬಿಡುಗಡೆ ಗೊಳಿಸಿದರು. ಇದರ ಅಂಗವಾಗಿ ಆರೋಗ್ಯ ಸಚಿವರಾದ ಯು.ಟಿ. ಖಾದರ್ ರವರ ಸಮ್ಮುಖದಲ್ಲಿ ಮಂಗಳೂರಿನ ಆಸ್ಪತ್ರೆಗಳಿಗೆ ಕಿಡ್ನಿ ಡಯಾಲಿಸಿಸ್ ನೀಡುವ ಬರವಸೆ ನೀಡಲಾಯಿತು. ಬಡ ಮತ್ತು ಅನಾಥ ವಿದ್ಯಾರ್ಥಿಯನ್ನು ದತ್ತು ತೆಗೆಯುವುದರಮೂಲಕ ಶ್ಯೆಕ್ಷಣಿಕ ಸಹಾಯಕ್ಕೆ ಚಾಲನೆ ನೀಡಲಾಯಿತು. ರಕ್ತಧಾನ ಮಾಡಲು ಕುವೈತ್ ಹಾಗು ಮಂಗಳೂರಿನ ಎಲ್ಲಾ ಆಸ್ಪತ್ರೆ ಗಳಲ್ಲೂ ತಂಡಗಳನ್ನು ರಚಿಸಿರುವುದಾಗಿ ತಿಳಿಸಲಾಯಿತು. ಉತ್ತರ ಕರ್ನಾಟಕದಲ್ಲಿ ಮದ್ರಸ, ಮಸೀದಿಗಳನ್ನು ಪುನರ್ ಸ್ಥಾಪಿಸಲು ತೀರ್ಮಾನಿಸಲಾಯಿತು. ಬಡ, ಅನಾಥ ಹೆಣ್ಣುಮಕ್ಕಳ ಮದುವೆ ಸಹಾಯಕ್ಕಾಗಿ ’ಮ್ಯಾರೇಜ್ ಬ್ಯಾಂಕ್’ ಯೋಜನೆಯನ್ನು ಹಾಕಲಾಯಿತು.

Kuwait milaad-Jan 6- 2015_013

Kuwait milaad-Jan 6- 2015_014

Kuwait milaad-Jan 6- 2015_015

Kuwait milaad-Jan 6- 2015_016

Kuwait milaad-Jan 6- 2015_017

Kuwait milaad-Jan 6- 2015_018

Kuwait milaad-Jan 6- 2015_019

Kuwait milaad-Jan 6- 2015_020

Kuwait milaad-Jan 6- 2015_021

Kuwait milaad-Jan 6- 2015_022

Kuwait milaad-Jan 6- 2015_023

Kuwait milaad-Jan 6- 2015_024

Kuwait milaad-Jan 6- 2015_025

ಕುವೈತ್ ನ ರಾಯಬಾರಿ ಕಛೇರಿಯ ಎರಡನೆ ಯ ಕಾರ್ಯದರ್ಶಿ ಶ್ರೀ.ಎ.ಕೆ.ಶ್ರೀವಾಸ್ತವ್ ಮಾತನಾಡಿ, ಭಾರತೀಯ ಅನಿವಾಸಿಗಳಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡಲು ರಾಯಭಾರಿ ಕಛೇರಿ ಯು ಬದ್ದವಾಗಿದ್ದು, ಇದರ ಪ್ರಯೊಜನವನ್ನು ಪಡೆದು ಕೊಳ್ಳಬೇಕಾಗಿ ಕೇಳಿಕೊಂಡರು. ಕೆ.ಸಿ.ಎಫ್ ಕುವೈತ್ ಶಾಖೆ ಯು ರಾಯಭಾರಿ ಖಛೇರಿಯಲ್ಲಿ ನೊಂದಣಿಯಾದ ಶುಭವಾರ್ತೆಯನ್ನು ತಿಳಿಸಿ ಅದರ ಪ್ರತಿಯನ್ನು ಎಮ್.ಎಸ್.ಎಮ್ ಅಬ್ದುರ್ರಶೀದ್ ಝೈನಿ ಯವರಿಗಿ ಹಸ್ತಾಂತರಿಸಿದರು.

ಫಾಕಿಸ್ತಾನ ದ ಧಾರ್ಮಿಕ ಪಂಡಿತರಾದ ತಲತ್ ನಕ್ಷಬಂದಿ ಯವರು ಮೀಲಾದ್ ನ ಶುಭಸಂದೇಶವನ್ನಿತ್ತರು. ಅಧ್ಯಕ್ಶೀಯ ಬಾಷಣವನ್ನು ಹಬೀಬ್ ಕೋಯ ರವರು ನಡೆಸಿ ಕೊಟ್ಟರು. ಕರ್ನಾಟಕ ಯಾತ್ರೆ ಯ ಸ್ವಾಗತ ಗಾನದ ಮೂಲಕ ಎ.ಪಿ.ಅಬೂಬಕರ್ ಮುಸ್ಲಿಯಾರ್ ರವರನ್ನು ವೇಧಿಕೆಗೆ ಸ್ವಾಗತಿಸಲಾಯಿತು.

ಸಬೆಯನ್ನುದ್ದೇಶಿಸಿ ಮಾತನಾಡಿದ ಸಚಿವರಾದ ಜನಾಬ್.ಯು.ಟಿ. ಖಾದರ್ ರವರು ಈ ಮೀಲಾದ್ ಸಂಗಮವು ಕುವೈತಿನಲ್ಲಿ ಇತಿಹಾಸ ಸ್ರಸ್ಟಿಸಲಿದೆ, ನಮಗಿರುವ ಅದಿಕಾರವು ಶಾಶ್ವತವಲ್ಲ, ಉಲಮಾ, ಉಮರಾ ಮೇಲಿರುವ ಪ್ರೀತಿ ವಿಶ್ವಾಸ ಗಳೇ ನಿಜವಾದ ಆಸ್ತಿ ಎಂದರು. ಯಾವ ರೀತಿಯ ಟೀಕೆ ಟಿಪ್ಪಣಿ ಗಳಿಗೂ ಕಿವಿ ಗೊಡದೆ ಮುನ್ನಡೆದರೆನೆ ಯಶಸ್ವಿ ಸಾಧ್ಯ ಎಂದು ಕಾರ್ಯಕರ್ತರಿಗೆ ತಿಳಿಹೇಳಿದರು.

ಆಸ್ತ್ರೇಲಿಯಾದ ಧಾರ್ಮಿಕ ನಾಯಕರಾದ ಮೌಲಾನ ಮೊಹಮ್ಮದ್ ಹುಸೈನ್ ಮಾತನಾಡುತ್ತಾ ಇಂತಹಾ ಕಾರ್ಯಕ್ರಮಗಳು ರಸೂಲರ ಪ್ರೀತಿಯನ್ನು ಇಮ್ಮಡಿ ಗೊಳಿಸುತ್ತದೆ ಎಂದರು.ಈಜಿಪ್ಟಿನ ಧಾರ್ಮಿಕ ಪಂಡಿತರಾದ ಮಹಮ್ಮದ್ ಇನಾಮಿ ಸವೂದ್ ಅಬ್ದುಲ್ ಸಲಾಮ್ ನಜೀ ಮೌಲಿದ್ ಓದುವ ಮೂಲಕ ಸಬೆಗೆ ಮೀಲದ್ ಸಂದೇಶ ವಿತ್ತರು.

ಕರ್ನಾಟಕದ ವಾಗ್ಮಿ ಕೆ.ಸಿ.ಎಫ್. ಕೆಂದ್ರ ಸಮಿತಿಯ ಕಾರ್ಯದರ್ಶಿ ಗಳಾದ ಎಮ್.ಎಸ್.ಎಮ್.ಅಬ್ದುರ್ರಶೀದ್ ಝೈನಿ ಯವರು ಸಭೆಯನ್ನುದ್ದೇಶಿ ಮಾತನಾಡಿ, ಕೆ.ಸಿ.ಎಫ್ ಕುವೈತ್ ನಲ್ಲಿ ವಿವಿದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ, ಇನ್ನೂ ಹಲವೊಂದು ಯೊಜನೆಗಳನ್ನು ಬವಿಷ್ಯಕ್ಕಾಗಿ ಹಾಕಿಕೊಂಡಿದ್ದು, ಇದರ ಪ್ರಯೂಜನವನ್ನು ಪಡೆದುಕೊಳ್ಳಲು ಕೆ.ಸಿ.ಎಫ್ ನ ಸಧಸ್ಯತನ ವನ್ನು ಪಡೆಯಲು ತಿಳಿಸಿದರು. ಕೆ.ಸಿ.ಎಫ್ ವೆಬ್ಸೈಟ್ ಅನ್ನು ಸುಲ್ತಾನುಲ್ ಉಲಮ ಎ.ಪಿ.ಉಸ್ತಾದರು ಬಿಡುಗಡೆಮಾಡಿದರು. ನಾತೇ-ಶರೀಫ್ ಕಾರ್ಯಕ್ರಮವನ್ನು ಮಸ್ಟರ್ ನಬೀಲ್ ಬರಕಾತಿ ನಡೆಸಿಕೊಟ್ಟರು.

ಸನ್ಮಾನ ಕರ್ಯಕ್ರಮವನ್ನು ಹಬೀಬ್ ಕೋಯ ರವರು ನಡೆಸಿಕೊಟ್ಟರು, ಮಾಸ್ಟೆರ್ ನಬೀಲ್ ರವರನ್ನು, ’ಪಿದಾಯೇ ಮದೀನ’ , ಜನಾಬ್ ಯು.ಟಿ.ಖಾದರ್ ರವರನ್ನು ’ಕ್ರಿಯಾತ್ಮಕ ನಾಯಕ’ ಮತ್ತು ಎಮ್.ಎಸ್.ಎಮ್ ಅಬ್ದುರ್ರಶೀದ್ ಝೈನಿ ರವರನ್ನು ’ಪ್ರಭಾಷಣ ರತ್ನ’ ಎಂಬ ಪ್ರಶಸ್ತಿ ಗಳನ್ನು ನೀಡಿ ಸಭೆಯಲ್ಲಿ ಗೌರವಿಸಲಾಯಿತು.

ಸಬಿಕರನ್ನುದ್ದೇಶಿ ಮಾತನಾಡಿದ ಎ.ಪಿ.ಅಬೂಬಕರ್ ಮುಸ್ಲಿಯಾರ್, ಕುವೈತಿನಲ್ಲಿ ಕೆ.ಸಿ.ಎಫ್ ವಿಜಯದ ಹಾದಿಯಲ್ಲಿ ಸಾಗುತ್ತಿದೆ, ಕರ್ನಾಟಕ ಯಾತ್ರೆ ಯ ಬಳಿಕ ಇನ್ನೂ ಬಲಿಷ್ಟ ಗೊಂಡಿದೆ ಎಂದರು. ಎ.ಪಿ.ಉಸ್ತಾದರ ದುವಾ: ಆಶೀರ್ವಾದ ದೊಂದಿಗೆ ಕರ್ಯಕ್ರಮವು ಮುಕ್ತಾಯಗೊಂಡಿತು.

Write A Comment