ಗಲ್ಫ್

ಸೌದಿಅರೇಬಿಯ: ಪ್ರಸ್ತುತ ಕ್ಯಾಲೆಂಡರ್-2015 ಬಿಡುಗಡೆ

Pinterest LinkedIn Tumblr

Prastuta calendar-Jan 6- 2015_008

ದಮಾಮ್, ಡಿ. 12: ಸುದ್ದಿಯ ವಸ್ತುನಿಷ್ಠ ವಿಶ್ಲೇಷಣೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯ ಮ್ಯಾಗಝಿನ್ ಎನಿಸಿಕೊಂಡಿರುವ ‘ಪ್ರಸ್ತುತ ಪಾಕ್ಷಿಕ’ದ ‘ಪ್ರಸ್ತುತ ಕ್ಯಾಲೆಂಡರ್-2015’ ಬಿಡುಗಡೆ ಸಮಾರಂಭವು ಡಿಸೆಂಬರ್ 12ರಂದು ಜುಬೈಲ್‌ನ ಗಲ್ಫ್ ಏಶಿಯನ್ ಮೆಡಿಕಲ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಲ್ಫ್ ಏಶಿಯನ್ ಮೆಡಿಕಲ್ ಸೆಂಟರ್‌ನ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಮ್ ಅವರು ‘ಪ್ರಸ್ತುತ ಕ್ಯಾಲೆಂಡರ್-2015’ ಬಿಡುಗಡೆಗೊಳಿಸಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಪೋರಮ್‌ನ ಕೇಂದ್ರ ಸಮಿತಿ ಕಾರ್ಯದರ್ಶಿ ಶರೀಫ್ ಜೋಕಟ್ಟೆ, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಯು.ಫಯಾಝ್ ಅಹ್ಮದ್ ಉಪಸ್ಥಿತರಿದ್ದರು.

Prastuta calendar-Jan 6- 2015_001

Prastuta calendar-Jan 6- 2015_002

Prastuta calendar-Jan 6- 2015_003

Prastuta calendar-Jan 6- 2015_004

Prastuta calendar-Jan 6- 2015_005

Prastuta calendar-Jan 6- 2015_006

Prastuta calendar-Jan 6- 2015_007

Prastuta calendar-Jan 6- 2015_009

Prastuta calendar-Jan 6- 2015_010

ಪ್ರಸ್ತುತ ಪಾಕ್ಷಿಕದ ಮಾಜಿ ಸಂಪಾದಕ ಫಯಾಝ್ ಎನ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಪ್ರಸ್ತುತ ಪಾಕ್ಷಿವು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ವಿವರಿಸಿದರು. ಪ್ರಸ್ತುತ ರೀಡರ್ಸ್ ಫೋರಮ್ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಅಬ್ದುಲ್ ಸಮತ್ ನಿರೂಪಿಸಿದರು.

ಪ್ರಸ್ತುತ ಪಾಕ್ಷಿಕ ಕ್ಯಾಲೆಂಡರ್-2015ರ ಜಾಹೀರಾತುದಾರರಾಗಿ ಅಲ್‌ಫಲಾಹ್ ಸಂಸ್ಥೆ, ಗಲ್ಫ್ ಏಶಿಯನ್ ಮೆಡಿಕಲ್ ಸೆಂಟರ್, ಫತೇಹ್ ಅಲ್ ಜುಬೈಲ್, ವೈಮಾರ್ಕ್ ಮಾರ್ಕೆಟಿಂಗ್ ಹಾಗೂ ಸೌದಿ ಎಕ್ಸ್‌ಪ್ಲೋರರ್ ಮುಂತಾದ ಕಂಪೆನಿಗಳು ಸಹಕರಿಸಿದ್ದವು.

Write A Comment