ಗಲ್ಫ್

ISF ಸತತ ಪ್ರಯತ್ನ; ಚಿಕಿತ್ಸೆಗಾಗಿ ಊರಿಗೆ ಮರಳಿದ ಹಾರೀಸ್ ಮಂಜೇಶ್ವರ

Pinterest LinkedIn Tumblr

kk

ಸೌದಿ ಅರೇಬಿಯಾದಲ್ಲಿ ದುಡಿಮೆಗಾಗಿ ತೆರಳಿದ ಮಂಜೇಶ್ವರದ ಹಾರೀಸ್ ಎಂಬವರು ರಿಯಾದಿನ ಕಂಪೆನಿಯೊಂದರಲ್ಲಿ ಕಳೆದ 6 ವರ್ಷಗಳಿಂದ ದುಡಿಯುತ್ತಿದ್ಧು , ಕೆಲವು ತಿಂಗಳುಗಳ ಹಿಂದೆ ಅಸ್ತಮಾ ರೊಗಕ್ಕೆ ತುತ್ತಾಗಿದ್ದು, ತನ್ನ ರೂಮಿನಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ರೋಗವು ಉಲ್ಬಣಿಸಿದ ಪರಿಣಾಮ ವೈದ್ಯರ ಸೂಚನೆಯಂತೆ ಚಿಕಿತ್ಸೆಗಾಗಿ ಊರಿಗೆ ತೆರಳಲು ಕಂಪೆನಿಯಲ್ಲಿ ಕೇಳಿಕೊಂಡಿದ್ದರು. ಕಂಪೆನಿಯ ಮೇಲ್ವಿಚಾರಕರು ಇವರನ್ನು ಊರಿಗೆ ಕಳುಹಿಸಿಕೊಡುವಲ್ಲಿ ಸತಾಯಿಸಲಾರಂಬಿಸಿದ್ದು , ಹಾರೀಸ್‌ರವರು ಹಲವು ವ್ಯಕ್ತಿಗಳನ್ನು ಭೇಟಿಯಾಗಿ ಈ ಬಗ್ಗೆ ಪ್ರಯತ್ಸಿಸಿದ್ಧು , ಯಾವುದೇ ಪ್ರಯೋಜನವಾಗಿರಲಿಲ್ಲ. ಕಡೆಗೆ ರಿಯಾದ್ ಈ ಕಾರ್ಯಕರ್ತರನ್ನು ಭೇಟಿಯಾಗಿ ಈ ಬಗ್ಗೆ ವಿವರಿಸಿದ್ಧು , ಕೂಡಲೇ ಕಾರ್ಯಪ್ರವರ್ತರಾದ ಇಸ್ಮಾಯಿಲ್ ಮಂಗಳಪೇಟೆ ಹಾಗೂ ಅಝೀರ್ ಕಾರ್ಕಾಳರವರು ಕಂಪೆನಿಯ ಮೇಲ್ವಿಚಾರಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ಧು , ಕಡೆಗೆ ಕಂಪೆನಿಯ ಮೇಲ್ವಿಚಾರಕರು 10 ದಿವಸಗಳ ಗಡುವನ್ನು ಕೇಳಿದ್ದರು. ಅದರಂತೆ 10 ದಿನಗಳಲ್ಲಿ ಇವರ ಬಾಕಿಯಿದ್ದ ಸಂಬಳದೊಂದಿಗೆ, ಅವರ ಪ್ರಯಾಣದ ವೆಚ್ಚವನ್ನೂ ಕಂಪೆನಿಯು ಭರಿಸುವುದರೊಂದಿಗೆ ಇದೇ ಕಳೆದ 15 ನೇ ತಾರೀಕಿನಂದು ಊರಿಗೆ ಕಳುಹಿಸಿಕೊಟ್ಟತು. ಈ ಪ್ರಯತ್ನದಿಂದ ಅತ್ಯಂತ ಸಂತೋಷಿತರಾದ ಹಾರೀಸ್ ರವರು ಸಂಘಟನೆಯ ಸದಸ್ಯರಿಗೆ ಕೃತಜ್ಙತೆಯನ್ನು ಸಲ್ಲಿಸಿದರು.

Write A Comment