ಗಲ್ಫ್

ತುಳುಕೂಟ ಕುವೈಟ್‌ “ತುಳು ಪರ್ಬ-2014”

Pinterest LinkedIn Tumblr

Parba-Flyer-Eng-ತುಳುಕೂಟ ಕುವೈಟ್‌ ಇದರ ವಾರ್ಷಿಕೋತ್ಸವ “ತುಳು ಪರ್ಬ-2014” ವಿಜೃಂಭಣೆಯಿಂದ ಆಚರಿಸಲು ಭರದಿಂದ ಸಜ್ಜಾಗುತ್ತಿದೆ. ಇದೇ ಬರುವ ಅಕ್ಟೋಬರ್‌  17, 2014ರ ಶುಕ್ರವಾರ ಸ್ಥಳೀಯ ಮೈದಾನ್‌ ಹವಲ್ಲಿಯ ಅಮೆರಿಕನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್ ರಂಗಮಂದಿರದಲ್ಲಿ ಸಂಜೆ 3:30ಕ್ಕೆ ಸರಿಯಾಗಿ ನಡೆಯಲಿದೆ.

ವಿಶೇಷ ಆಕರ್ಷಣೆಯಾಗಿ ಏಷ್ಯಾದ ಅತಿ ವೇಗದ ಚಿತ್ರಕಲಾವಿದ, “ಕಲರ್‌’ ವಾಹಿನಿಯ ಇಂಡಿಯಾ ಗಾಟ್‌ ಟ್ಯಾಲೆಂಟ್‌ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧಿ ಉದಯೋನ್ಮುಖ ವರ್ಣಚಿತ್ರ ಕಲಾವಿದ ತುಳುನಾಡಿನ ಹೆಮ್ಮೆಯ ಪುತ್ರ ವಿಲಾಸ್‌ ನಾಯಕ್‌ ಇವರ ವರ್ಣರಂಜಿತ ಚಿತ್ರ ಪ್ರದರ್ಶನ ರಂಗೇರಲು ಅಣಿಯಾಗುತ್ತಿದೆ.

“ತುಳು ಪರ್ಬ-2014” ಇದರ  ಪ್ರಧಾನ ಆಕರ್ಷಕ ಕಾರ್ಯಕ್ರಮವಾಗಿ ತುಳುನಾಡಿನ ಖ್ಯಾತ ರಂಗಕಲಾವಿದರು ಹಾಗೂ ಪ್ರತಿಭಾವಂತ ಸ್ಥಳೀಯ ಕಲಾವಿದರ ಕೂಡುವಿಕೆಯಿಂದ “ಬಲೆ ತೆಲಿಪಾಲೆ”ಯಲ್ಲಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ವಿಜೇತ ಖ್ಯಾತ ನಾಟಕಕರ್ತ ಅರುಣ್‌ಚಂದ್ರ ಬಿ.ಸಿ.ರೋಡ್‌ ಬರೆದು ನಟಿಸಿರುವ, ತುಳು, ಕೊಂಕಣಿ ರಂಗಭೂಮಿಯ ಹೆಸರಾಂತ ನಟ ನೆಲ್ಲು ಪೆರ್ಮನೂರು (ನೆವಿಲ್‌ ವೇಗಸ್‌) ಹಾಗೂ ನಾಟಕರಂಗದ ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕ ಬಹುಮುಖ ಪ್ರತಿಭೆ ವಿಶ್ವನಾಥ್‌ ನೆಲ್ಯಾಡಿ ಇವರೊಂದಿಗೆ ಸತೀಶ್‌ ಆಚಾರ್ಯ ನಿರ್ದೇಶನದಲ್ಲಿ ತುಳು ಹಾಸ್ಯಮಯ ನಾಟಕ “ಬಂಗಾರ‍್ ಬಾಬು” ಅದ್ದೂರಿಯಿಂದ ಪ್ರದರ್ಶನಗೊಳ್ಳಲಿದೆ.

ಸುರೇಶ್‌ ಸಾಲ್ಯಾನ್‌ ನಿರ್ದೇಶನದ ದೇಶದ ಭಾವಕ್ಯತೆಯ ಸಂದೇಶ ಸಾರುವ “ಸೌರಾಗಿಣಿರಾಷ್ಟ್ರ” ಹಾಗೂ ಜಾನಪದ ಶೈಲಿಯ ವಿಶೇಷ ರಂಗ ಸಂಯೋಜನೆಯಲ್ಲಿ “ದಶಾವತಾರ” ನೃತ್ಯ ವೈಭವ ಸ್ಥಳೀಯ ಪ್ರತಿಭೆಗಳಿಂದ ಮೂಡಿ ಬರಲಿದೆ.

ಈ ರಂಗು-ರಂಗಿನ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ತಮಗೆಲ್ಲರಿಗೂ ತುಳುಕೂಟ ಕುವೈಟ್‌ ಇದರ ಆಡಳಿತ ಮಂಡಳಿ ಹಾಗೂ ಸರ್ವ ಸಮಿತಿ ಆದರದ ಸ್ವಾಗತವನ್ನು ಬಯಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸುರೇಶ್‌ ಸಾಲ್ಯಾನ್‌-99161228, ಸತೀಶ್‌ ಆಚಾರ್ಯ- 65640611

ವರದಿ: ನೇರಂಬಳ್ಳಿ ಸುರೇಶ್‌ ಶ್ಯಾಮ್‌ ರಾವ್‌, ಕುವೈಟ್‌

Write A Comment