ಗಲ್ಫ್

ಜಿದ್ದಾ: ನಾಗರಿಕರಿಗೆ ಹೆಚ್ಚಿನ ಉದ್ಯೋಗ, ವಸತಿ ಪಂಚವಾರ್ಷಿಕ ಅಭಿವೃದ್ಧಿ ಯೋಜನೆಯ ಗುರಿ

Pinterest LinkedIn Tumblr

Jeddah

ಜಿದ್ದಾ, ಸೆ.16: ತನ್ನ 2015ರಿಂದ 2020ರವರೆಗಿನ ಹತ್ತನೆಯ ಪಂಚವಾರ್ಷಿಕ ಯೋಜನೆಯಲ್ಲಿ ನಾಗರಿಕರಿಗೆ ಹೆಚ್ಚಿನ ಉದ್ಯೋಗ, ವಸತಿ ಹಾಗೂ ಜೀವನ ಮಟ್ಟ ಸುಧಾರಣೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದು ಸಚಿವರ ಮಂಡಳಿ ಹೇಳಿದೆ.

ಇಸ್ಲಾಮಿಕ್ ವೌಲ್ಯಗಳು ಹಾಗೂ ಬೋಧನೆಗಳ ಸಂರಕ್ಷಣೆ, ರಾಷ್ಟ್ರೀಯ ಏಕತೆ ಹಾಗೂ ರಾಷ್ಟ್ರದ ಅಸ್ತಿತ್ವವನ್ನು ಕಾಪಾಡುವುದನ್ನೊಳಗೊಂಡ 24 ಅಂಶಗಳ ಯೋಜನೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಸಂಸ್ಕೃತಿ ಹಾಗೂ ಮಾಹಿತಿ ಸಚಿವ ಅಬ್ದುಲ್ ಅಝೀಝ್ ಖ್ವಾಜಾ ತಿಳಿಸಿದ್ದಾರೆ.

‘‘ಸೌದಿ ಅರೇಬಿಯದ ಆರ್ಥಿಕತೆಯನ್ನು ಬಲಪಡಿಸುವುದು ಹಾಗೂ ಅದರ ಬೆಳವಣಿಗೆ, ಸ್ಥಿರತೆ ಹಾಗೂ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ. ಮಾತ್ರವಲ್ಲದೆ, ಸಾಂಸ್ಥಿಕ ಸುಧಾರಣೆಗಳಿಗೆ ಅವಕಾಶ ಕಲ್ಪಿಸುವುದು, ನಾಗರಿಕ ಸಂಸ್ಥೆಗಳಿಗೆ ಬೆಂಬಲ ನೀಡುವುದು ಮತ್ತು ಸರಕಾರಿ ಸಂಸ್ಥೆಗಳ ಉತ್ಪಾದಕತೆ ಹಾಗೂ ಉದ್ಯೋಗಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಕೂಡಾ ಯೋಜನೆಯ ಉದ್ದೇಶಗಳಲ್ಲಿ ಒಳಗೊಂಡಿದೆ’’ ಎಂದವರು ವಿವರಿಸಿದ್ದಾರೆ.

Write A Comment