ಗಲ್ಫ್

ಅಜ್ಮಾನಿನಲ್ಲಿ ದಾರುನ್ನೂರ್ ಇದರ ನೂತನ ಸಮಿತಿ

Pinterest LinkedIn Tumblr

 Darunnuru ajman_Sept 14_2014_006

ದುಬೈ : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ (ಡಿಇಸಿಕೆ ) ಇದರ ಯು.ಎ.ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ದಿನಾಂಕ 11.04.2014 ನೇ ಗುರವಾರದಂದು ಸಂಜೆ ಅಜ್ಮಾನಿನ ಜನಾಬ್ ನಝೀರ್ ಮೂಡಬಿದ್ರೆಯವರ ನಿವಾಸದಲ್ಲಿ ನೂತನ ಶಾಖೆಯನ್ನು ಆರಂಭಿಸಲಾಯಿತು.

ಯು.ಎ.ಇ ರಾಷ್ಟ್ರೀಯ ಸಮಿತಿಯ ಅದ್ಯಕ್ಷರಾದ ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ , ಉಪಾದ್ಯಕ್ಷ ಜನಾಬ್ ಬಶೀರ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್ , ಕಾರ್ಯದರ್ಶಿ ಜನಾಬ್ ಮುಹಮ್ಮದ್ ರಫೀಕ್ ಸುರತ್ಕಲ್, ಸದಸ್ಯ ಜನಾಬ್ ಅಬ್ದುಲ್ ರವೂಫ್ ಕಬಕ ಮುಂತಾದವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದಾರುನ್ನೂರಿನ ಸಮಗ್ರ ಪರಿಚಯ ಮತ್ತು ವಿದ್ಯಾ ಕೇಂದ್ರದ ಅನಿವಾರ್ಯತೆ, ವಿದ್ಯೆಗೆ ಇಸ್ಲಾಂ ನೀಡಿದ ಮಹತ್ವದ ಬಗ್ಗೆ ಪ್ರಧಾನ ಕಾರ್ಯದರ್ಶಿಯವರು ವಿವರಿಸಿ ಹೇಳಿದರು. ಜನಾಬ್ ಬಶೀರ್ ಬಂಟ್ವಾಳ್ ರವರು ವಿದ್ಯೆಯಿಂದ ವಂಚಿತರಾಗುವ ಒಂದು ಸಮೂಹವನ್ನು ರಕ್ಷಿಸಲು ನಾವೆಲ್ಲರೂ ಕಂಕಣ ಬದ್ಧರಾಗಿರತಕ್ಕದ್ದು. ತಪ್ಪಿದ್ದಲ್ಲಿ ಅಲ್ಲಾಹ ನ ಬಳಿ ಪ್ರಶ್ನಿಸಲ್ಪಡಲು ಸಿದ್ದರಾಗಿರಬೇಕಾಗುತ್ತದೆ ಎಂದು ವಿವರಿಸಿ ಹೇಳಿದರು.

Darunnuru ajman_Sept 14_2014_001

Darunnuru ajman_Sept 14_2014_002

Darunnuru ajman_Sept 14_2014_003

Darunnuru ajman_Sept 14_2014_004

Darunnuru ajman_Sept 14_2014_005

ಜನಾಬ್ ಅಲ್ತಾಫ್ ರವರು ನೂತನ ಸಮಿತಿಯನ್ನು ರಚಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಸಂದರ್ಭ ದಾರುನ್ನೂರ್ ಗಾಗಿ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿ ಇದರ ಮಹತ್ವವನ್ನು ವಿವರಿಸಿದರು.

ಗೌರವಾದ್ಯಕ್ಷರಾಗಿ : ಜನಾಬ್ ಹಂಝ ಕಾಪು
ಅದ್ಯಕ್ಷರಾಗಿ : ಜನಾಬ್ ಪಿ.ಹೆಚ್ ಆಶ್ರಫ್ ಪಡ್ಡಂತಡ್ಕ
ಉಪಾದ್ಯಕ್ಷರಾಗಿ : ಜನಾಬ್ ಉಮರುಲ್ ಫಾರೂಕ್ ಮೂಡಬಿದ್ರೆ
ಪ್ರಧಾನ ಕಾರ್ಯದರ್ಶಿಯಾಗಿ : ಜನಾಬ್ ನಝೀರ್ ಮೂಡಬಿದ್ರೆ
ಕಾರ್ಯದರ್ಶಿಯಾಗಿ ಜನಾಬ್ ನಿಝಾರ್ ಪಡ್ಡಂತಡ್ಕ , ಜನಾಬ್ ಮುಸ್ತಫಾ ಪರ್ಲಿಯಾ
ಕೋಶಾಧಿಕಾರಿಯಾಗಿ : ಜನಾಬ್ ನೌಫಲ್ ಗುರುಪುರ
ಕನ್ ವೀನರ್ ಗಳಾಗಿ : ಜನಾಬ್ ಶಾಫಿ ಮೂಡಬಿದ್ರೆ, ಜನಾಬ್ ಫಾರೂಕ್ ಅಬ್ದುಲ್ಲಾಹ್ ಚಿಕ್ಕ ಮಂಗಳೂರು, ಜನಾಬ್ ಅಶ್ರಫ್ ಪಡ್ಡಂತಡ್ಕ

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ : ಜನಾಬ್ ಮುಹಮ್ಮದ್ ಮುಖ್ತಾರ್ ಪಡ್ಡಂತಡ್ಕ, ಜನಾಬ್ ಹಮೀದ್ ಸೋಮೇಂತಡ್ಕ, ಜನಾಬ್ ಅಶ್ರಫ್ ತೋಡಾರ್, ಜನಾಬ್ ಆಸಿಫ್ ಬಿ.ಸಿ ರೋಡ್, ಜನಾಬ್ ಅಬ್ದುಲ್ ಹಮೀದ್ ಪೆರಿಂಜೆ ಮೊದಲಾದವರನ್ನು ಆರಿಸಲಾಯಿತು.
ವಂದನಾರ್ಪಣೆ ಮತ್ತು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು

ವರದಿ : ಬದ್ರುದ್ದೀನ್ ಹೆಂತಾರ್

Write A Comment