
ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ನಗರದ ಪ್ರತಿಷ್ಠಿತ ಕರಾವಳಿ ಕಾಲೇಜಿನ ಫ್ಯಾಶನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಉಡುಪುಗಳ ಪ್ರದರ್ಶನ “ಫ್ಯಾಶನ್ ಶೋ” ಕಾರ್ಯಕ್ರಮ ಬುಧವಾರ ಸಂಜೆ ಕೊಟ್ಟಾರದಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಕರಾವಳಿ ಸಮೂಹ ಕಾಲೇಜು ಹಾಗೂ ಜಿ.ಆರ್.ಎಜ್ಯುಕೇಶನ್ ಟ್ರಸ್ಟ್‌ನ ಸ್ಥಾಪಾಧ್ಯಕ್ಷ ಶ್ರೀ ಎಸ್.ಗಣೇಶ್ ರಾವ್ ಅವರ ನಿರ್ದೇಶನದಲ್ಲಿ ನಡೆದ ಈ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಕರಾವಳಿ ಕಾಲೇಜಿನ ಫ್ಯಾಶನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳು ತಾವೇ ತಯಾರಿಸಿದ ದೇಶಿಯ ಹಾಗೂ ವಿದೇಶಿಯ ಶೈಲಿಯ ವೈವಿಧ್ಯಮಯ ಉಡುಪುಗಳ ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು.
ಭಾರತೀಯ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಡುಗೆಗಳಿಗೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಫ್ಯಾಶನ್ ಶೋ ಗಮನ ಸೆಳೆಯಿತು. ದೇಶದ ವಿವಿದೆಡೆಯಿಂದ ಬಂದ ವಿದ್ಯಾರ್ಥಿಗಳು ತಾವೇ ತಯಾರಿಸಿದ ಫ್ಯಾಷನ್ ಬಟ್ಟೆಗಳಿಗೆ ತಾವೇ ಮೊಡಲ್‍ಗಳಾಗಿ ರ್‍ಯಾಂಪ್ ವಾಕ್ ಮಾಡಿದರು. ವಿದ್ಯಾರ್ಥಿಗಳು ಅವರೇ ತಯಾರಿಸಿದ ವಿವಿಧ ರೀತಿಯ ಬಣ್ಣ ಬಣ್ಣದ ಡಿಸೈನ್‍ಗಳಿರುವ ಡ್ರೆಸನ್ನು ತೊಟ್ಟು ತಾವು ಮೋಡೆಲ್‍ಗಳಿಗೇನು ಕಡಿಮೆ ಇಲ್ಲ ಎಂದು ನಿರೂಪಿಸಿದರು.

ಪ್ಯಾಷನ್ ಶೋ ಎಂದರೆ….
ಪ್ಯಾಷನ್ ಶೋ ಎಂದಾಕ್ಷಣ ಯುವತಿಯರು ತುಂಡುಡುಗೆಯಲ್ಲಿ ಮೈಬಳಕಿಸುತ್ತಾ ಹೆಜ್ಜೆ ಹಾಕೋದೇ ಫ್ಯಾಷನ್ ಶೋ ಅನ್ನುವುದು ನಮಗೆಲ್ಲ ಗೊತ್ತಿರುವ ವಿಚಾರ.ಅಲ್ಲಿ ಸುಂದರ ಯುವತಿಯರು ಅರೆಬರೆ ಬಟ್ಟೆಗಳನ್ನು ತೊಟ್ಟು ಮೈಮಾಟವನ್ನು ಪ್ರದರ್ಶಿಸುತ್ತ ಪಾಶ್ಚ್ಯಾತ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ. ದೇಹದ ಸೌಂದರ್ಯವನ್ನು ತೋರಿಸುವುದೇ ಫ್ಯಾಷನ್ ಶೋ , ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿ ಮನೆಮಾಡಿದೆ.
ಆದರೆ ಇಲ್ಲಿ ನಡೆದ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಸುಂದರ ಉಡುಗೆ ತೊಡುಗೆಗಳೊಂದಿಗೆ ಕ್ಯಾಟ್ ವಾಕ್ ನಡೆಯಿತು. ಇಲ್ಲಿ ನಡೆದ ಫ್ಯಾಷನ್ ಶೋದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮೈತುಂಬಾ ಬಟ್ಟೆಗಳನ್ನು ತೊಟ್ಟು ವಿಭಿನ್ನವಾದ ಉಡುಗೆ ತೊಡುಗಳನ್ನು ಧರಿಸಿ ತಮ್ಮ ಆಕರ್ಷಕ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿಗಳಿಗೆ ತಾವು ಕಲಿತ ವಿದ್ಯೆ ಹಾಗೂ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಈ ಫ್ಯಾಷನ್ ಶೋ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Comments are closed.