ಕನ್ನಡ ವಾರ್ತೆಗಳು

ಅನಾರೋಗ್ಯದಿಂದ ಪೋಷಕ ನಟ ಸುರೇಶ್ ವಿಧಿವಶ

Pinterest LinkedIn Tumblr

Suresh_Mlore_actor

ಬೆಂಗಳೂರು ,ಮೇ.18: ಅನಾರೋಗ್ಯದಿಂದ ಬಳಲುತಿದ್ದ ಕನ್ನಡ ಚಲನಚಿತ್ರದ ಪೋಷಕ ನಟ ಸುರೇಶ್ ಇಂದು ನಿಧನರಾದರು.

ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದ ಸುರೇಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೂಲತಃ ಮಂಗಳೂರಿನವರಾದ ಇವರು ಟೆಲಿಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಸ್ವಯಂ ನಿವೃತ್ತಿ ಪಡೆದು ನಾಟಕ, ಧಾರಾವಾಹಿ, ಸಿನೆಮಾಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಕೆ. ಎನ್. ಟೇಲರ್, ದೇವದಾಸ್ ಕಾಪಿಕಾಡ್ ಅವರ ತಂಡಗಳಲ್ಲದೆ ಕೆಲವು ತಂಡಗಳಲ್ಲಿ ರಂಗ ಪ್ರವೇಶ ಮಾಡಿದ್ದರು.

ಮಿಲನ, ತಾಜ್’ಮಹಲ್, ದೃಶ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ನಿರ್ದೇಶಕ ಆರ್. ಚಂದ್ರು ಅವರ ಸಿನಿಮಾಗಳಲ್ಲಿ ಅವರಿಗೆ ಒಂದು ಪಾತ್ರ ಇದ್ದೇ ಇರುತ್ತಿತ್ತು. ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಸುಮತಿ ಧಾರಾವಾಹಿಯ ಮುಖ್ಯಮಂತ್ರಿ ಪಾತ್ರ ಅವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Comments are closed.