ಕನ್ನಡ ವಾರ್ತೆಗಳು

ರಾಜ್ಯ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ: ಶೋಭಾ ಕರಂದ್ಲಾಜೆ ಠೀಕೆ

Pinterest LinkedIn Tumblr

ಉಡುಪಿ: ರಾಜ್ಯ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ. ಮುಖ್ಯಮಂತ್ರಿಗಳಿಗೆ ಯಾವುದೇ ಇಲಾಖೆಯ, ಯಾವುದೇ ಸಚಿವರ ಮೇಲೆ ಹಿಡಿತವಿಲ್ಲ. ಮೂರು ವರ್ಷಗಳಲ್ಲಿ ಗಮನಿಸುವಂತಹ ಯಾವುದೇ ಸಾಧನೆ ಸಿದ್ದು ಸರ್ಕಾರದಿಂದ ಅಗಿಲ್ಲ ಅಂತ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

shobha_Karandlaje

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸರ್ಕಾರ ನಿಷ್ಕ್ರೀಯವಾಗಿದ್ದು , ಪ್ರಗತಿ ಪರಿಶೀಲನಾ ಸಭೆ ಸರಿಯಾಗಿ ನಡೆಯುತ್ತಿಲ್ಲ. ಅಧಿಕಾರಿಗಳನ್ನು ಚುರುಕು ಮುಟ್ಟಿಸುವ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪಿಸಿದ ಶೋಭಾ ರಾಜ್ಯದ 70ಶೇಕಡಾ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಇದೆ. ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು , ಕೇಂದ್ರ ಸರ್ಕಾರವೂ ಬರ ಪರಿಹಾರವಾಗಿ ನೀಡಿದ 1520ಕೋಟಿ ರೂವನ್ನು ಕೂಡಾ ಸರಿಯಾಗಿ ರೈತರಿಗೆ ತಲುಪಿಸಿಲ್ಲ ಎಂದರು.

ಇನ್ನು ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಚರ್ಚೆ ಆಗುತ್ತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಇದು ಗದ್ದುಗೆಗಾಗಿ ನಡೆಯುತ್ತಿರುವ ಜಟಾಪಟಿ ಯಾರಾದರೂ ಶಾಸಕರು ಬಂಡಾಯ ಎದ್ದರೆ ಸಿದ್ದರಾಮಯ್ಯ ಸಚಿವ ಸಂಪುಟ ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ. ಈ ಮೂಲಕ ಶಾಸಕರ ಬಾಯಿಯನ್ನ ಮುಚ್ಚಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಚಿವ ಸಂಪುಟ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

Comments are closed.