ಕನ್ನಡ ವಾರ್ತೆಗಳು

ದಾಖಲೆ 28 ಸಾವಿರ ಪ್ರದರ್ಶನ ಕಂಡ ತುಳುನಾಟಕ, `ಬಯ್ಯ ಮಲ್ಲಿಗೆ’ ಟೆಲಿಫಿಲ್ಮ್ ಬಿಡುಗಡೆ

Pinterest LinkedIn Tumblr

Bayya_Mallige_Film_1

ಮಂಗಳೂರು, ಮೇ.16: ಶ್ರೀ ಜಯರಾಮ ಫಿಲ್ಮ್ ಲಾಂಛನದಲ್ಲಿ ಟಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ ಅವರ `ಬಯ್ಯಮಲ್ಲಿಗೆ’ ಪ್ರದರ್ಶನ ಕಂಡ ತುಳುನಾಟಕದ ಟೆಲಿಫಿಲ್ಮ್‌ ಅನ್ನು ರವಿವಾರ ನಗರದ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಟೆಲಿಫಿಲ್ಮ್ ಬಿಡುಗಡೆಗೊಳಿಸಿದರು. `ಬಯ್ಯಮಲ್ಲಿಗೆ’ ನಾಟಕದಲ್ಲಿ ತಾನು ನಿರ್ವಹಿಸಿದ ವಿವಿಧ ಪಾತ್ರಗಳನ್ನು ಮೆಲುಕು ಹಾಕಿದ ಅವರು, `ಬಯ್ಯಮಲ್ಲಿಗೆ ನಾಟಕ 28 ಸಾವಿರ ಪ್ರದರ್ಶನ ಕಂಡಿದೆ. ಅದರಲ್ಲಿ 25  ದೃಶ್ಯಗಳಿದ್ದು, 13 ಪಾತ್ರಗಳಿವೆ.  50  ವರ್ಷದ ಹಿಂದೆ ರಚಿಸಿದ ಈ ನಾಟಕ ಈಗಲೂ ಜನ ಪ್ರಿಯವಾಗಿದೆ ಎಂದರು.

Bayya_Mallige_Film_2 Bayya_Mallige_Film_3 Bayya_Mallige_Film_4

ಮಹಾನಗರ ಪಾಲಿಕೆಯ ಮೇಯರ್ ಹರಿನಾಥ್ ಡಿವಿಡಿ ಬಿಡುಗಡೆಗೊಳಿಸಿದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಸಮಾರಂಭವನ್ನು ಉದ್ಘಾಟಿಸಿದರು. ಬಯ್ಯಮಲ್ಲಿಗೆ ನಾಟಕ ತುಳುರಂಗಭೂಮಿಯಲ್ಲಿ ಹೊಸದಾಖಲೆ ಬರೆದಿದೆ ಎಂದು ತಿಳಿಸಿದ ಅವರು ನೇತ್ರಾವತಿ ನದಿ ನೀರನ್ನು ಬರಿದು ಮಾಡುವ ಎತ್ತಿನಹೊಳೆ ಯೋಜನೆಯನ್ನು ಕಲಾವಿದರು ವಿರೋಧಿಸಬೇಕು ಎಂದರು.

Bayya_Mallige_Film_5 Bayya_Mallige_Film_6 Bayya_Mallige_Film_7Bayya_Mallige_Film_8 Bayya_Mallige_Film_9 Bayya_Mallige_Film_10 Bayya_Mallige_Film_11 Bayya_Mallige_Film_12 Bayya_Mallige_Film_13 Bayya_Mallige_Film_14 Bayya_Mallige_Film_15 Bayya_Mallige_Film_16 Bayya_Mallige_Film_17 Bayya_Mallige_Film_18 Bayya_Mallige_Film_19 Bayya_Mallige_Film_20 Bayya_Mallige_Film_21

ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಯ್ಯಮಲ್ಲಿಗೆ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದರನ್ನು ಮತ್ತು ಕಿರುತೆರೆ ಕಲಾವಿದರಾದ ಜ್ಯೋತಿ ರೈ ಮತ್ತು ದಿಶಾರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಪತ್ರಕರ್ತ ಮನೋಹರ್ ಪ್ರಸಾದ್ ಶುಭ ಹಾರೈಸಿದರು.

ಡಾ.ಸಂಜೀವ ದಂಡೆಕೇರಿ ಪ್ರಾಸ್ತಾವಿಕದಲ್ಲಿ ೫೦ ವರ್ಷದ ಹಿಂದಿನ ಈ ನಾಟಕ ಈಗಲೂ ಪ್ರಸ್ತುತವಾಗಿದೆ. ಈ ನಾಟಕ ಐದು ಭಾಷೆಗಳಿಗೆ ಅನುವಾದಗೊಂಡಿದೆ. ಈ ಕಿರುಚಿತ್ರ 12 ದಿನಗಳಲ್ಲಿ ಶೂಟಿಂಗ್ ನಡೆಸಿದ್ದು 1.50 ಗಂಟೆಯ ಡಿ.ವಿ.ಡಿ ತಯಾರಿಸಲಾಗಿದೆ ಎಂದರು.

ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉದ್ಯಮಿ ಕೃಷ್ಣ ಕೋಟ್ಯಾನ್ ಉಪಸ್ಥಿತರಿದ್ದರು. ವಿ.ಜಿ.ಪಾಲ್ ಕಾರ್ಯಕ್ರಮ ನಿರ್ವಹಿಸಿದರು.

Write A Comment