ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ಭಾರಿ ಮಳೆ : ಧರೆಗುರುಳಿದ ಬೃಹತ್ ಮರ – ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ

Pinterest LinkedIn Tumblr

Havi_Rain_Fall_1

ಮಂಗಳೂರು : ರವಿವಾರ ಬೆಳಗಿನ ಜಾವ ಸುಮಾರು 3.೦೦ಕ್ಕೆ ಸುರಿದ ಧಾರಕಾರ ಮಳೆ ಗಾಳಿಗೆ ನಗರದ ಹಲವೆಡೆಗಳಲ್ಲಿ ಕೆಲವೊಂದು ಅವಾಂತರಗಳಾಗಿವೆ. ಕೆಲವುಕಡೆಗಳಲ್ಲಿ ಮರಗಳು ಧರೆಗುರುಳಿದರೆ, ಮತ್ತೆ ಹಲವೆಡೆ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.

ಅತ್ತವಾರ ಮುಖ್ಯ ರಸ್ತೆಯ ಕೆ.ಎಮ್.ಸಿ ಆಸ್ಪತ್ರಯ ಬಳಿ ಮನೆಯೊಂದರ ಸುಮಾರು ಐವತ್ತು ವಷ೯ದ ಹಳೆಯ ಬೃಹತ್ ಮಾವಿನ ಮರ ಧರೆಗೆ ಉರುಳಿದ ಪರಿಣಾಮ .ಬೆಳಗ್ಗಿನ ಜಾವದಿಂದಲೇ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

Havi_Rain_Fall_2 Havi_Rain_Fall_3 Havi_Rain_Fall_4 Havi_Rain_Fall_5 Havi_Rain_Fall_6 Havi_Rain_Fall_7 Havi_Rain_Fall_8 Havi_Rain_Fall_9 Havi_Rain_Fall_10 Havi_Rain_Fall_11 Havi_Rain_Fall_12 Havi_Rain_Fall_13 Havi_Rain_Fall_14 Havi_Rain_Fall_15 Havi_Rain_Fall_16 Havi_Rain_Fall_18

ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ಪರಿಸರದಲ್ಲಿ ವಿದ್ಯುತ್ ಸ್ಥಗಿತಗೂಂಡ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಉಂಟಾಗಲಿಲ್ಲ.. ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ಅಬ್ಧುಲ್ ರವೂಫ್ ಕೂಡಲೇ ಸ್ಥಳಕ್ಕೆ ಬಂದು ಸೂಕ್ತ ಮುನ್ನೆಚ್ಚರಿಕಯ ಕ್ರಮ ಕೈಗೊಂಡು ಮೆಸ್ಕಾಂ ಅಧಿಕಾರಿಗಳಿಗೆ ಸ್ಥಳೀಯ ವಿದ್ಯುತ್ ಸ್ಥಗಿತಗೊಳಿಸುವಂತೆ ಹೇಳಿದ್ದಾರೆ. ಅಗ್ನಿಶಾಮಕ ದಳದವರು ಮತ್ತು ಮ.ನಾ.ಪ.ದ ಜೆ.ಸಿ.ಬಿ.ಯವರು ರಸ್ತೆಯಲ್ಲಿರುವ ಮರವನ್ನು ತೆರವುಗೊಳಿಸಿದರು.

Write A Comment