ಕನ್ನಡ ವಾರ್ತೆಗಳು

ಬರ್ಕೆ :ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ : ಎಸೈ ಶಾಂತರಾಮ್‌ರಿಗೆ ಸನ್ಮಾನ

Pinterest LinkedIn Tumblr

Barke_Pooja_sanmana

ಮಂಗಳೂರು :ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಬರ್ಕೆ ಕುದ್ರೋಳಿ ಇವರ ವತಿಯಿಂದ 8ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯು ಇತ್ತೀಚಿಗೆ ಬರ್ಕೆಯಲ್ಲಿ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಬೊಲೈಟುವಿನ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು, ಸಂಘಟಿತ ದೇವತಾ ಕಾರ್ಯಗಳಿಂದ ಸಮಾಜಕ್ಕೆ ಹಿತವಾಗುವುದು. ಪೂಜಾ ಸಮಿತಿಗಳು ನಡೆಸುವ ಇಂತಹ ದೇವತಾ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಚಾಲಕ ಶ್ರೀ ಎ.ಪಿ.ಉಲ್ಲಾಸ್ ಅವರು ಮಾತನಾಡಿ, ದೇವಭಕ್ತಿಯೊಂದಿಗೆ ದೇಶಭಕ್ತಿಯು ಇರಬೇಕು ಎಂದು ನುಡಿದರು.

ಉದ್ಯಮಿ ಶ್ರೀ ಸಂತೋಷ್ ಕುಮಾರ್ ಗಡಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಇತ್ತೀಚಿಗೆ ಮುಖ್ಯಮಂತ್ರಿಗಳಿಂದ ಧ್ವಜಾ ದಿನಾಚರಣೆ ಪದಕ ಪಡೆದ ಬಂದರು ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀ ಶಾಂತರಾಮ್ ಇವರನ್ನು ಸಮಿತಿ ವತಿಯಿಂದ ಸಭೆಯಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ಭವನಿ ಶಂಕರ ನಾಯಕ್, ಸಂತೋಷ್ ಕುಮಾರ್ ಶೆಟ್ಟಿ, ಪ್ರವೀಣ್ ಬರ್ಕೆ ಹಾಗೂ ಮತ್ತಿತ್ತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಭಾಕಾರ್ಯಕ್ರಮದ ಬಳಿಕ ಬೆದ್ರ ಕಲಾವಿದರ ತಂಡದಿಂದ “ನಮ ನಮ್ಮಾತಿಗೆ” ನಾಟಕ ಪ್ರದರ್ಶನಗೊಂಡಿತ್ತು.

Write A Comment