ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ಎರಡನೇ ದಿನ ಗಾಳಿ ಹಾಗೂ ಗುಡುಗು ಸಹಿತ ಮಳೆ : ಆದರೂ ಕುಡಿಯುವ ನೀರಿನ ಸಮಸ್ಯೆಗೆ ಸಾಕಾಗುವುದಿಲ್ಲ ಈ ಮಳೆ

Pinterest LinkedIn Tumblr

Rain_Second_Day_2

ಮಂಗಳೂರು, ಮೇ.12 : ಮಂಗಳೂರಿನಲ್ಲಿ ಬುಧವಾರ ಸಂಜೆ 10 ನಿಮಿಷ ಮಳೆ ಬಂದು ನಗರವಾಸಿಗಳಿಗೆ ಅಲ್ಪಸ್ವಲ್ಪ ಖುಷಿ ನೀಡಿ ಮರೆಯಾಗಿತ್ತು. ಆದರೆ ಎಲ್ಲರ ನಿರೀಕ್ಷೆಯಂತೆ ಇಂದು ಮತ್ತೆ ಮಳೆಯಾಗಿದೆ.

Rain_Second_Day_3 Rain_Second_Day_4 Rain_Second_Day_5

ಆದರೆ ಇಂದು ಸ್ವಲ್ಪ ಬದಲಾವಣೆ…. ನಿನ್ನೆ ಸಂಜೆ 5.30ರ ಸುಮಾರಿಗೆ ಸಾದಾರಣ ಮಳೆಯಾಗಿದ್ದಾರೆ.. ಇಂದು ಸಂಜೆ / ರಾತ್ರಿ 8.30ರ ಸುಮಾರಿಗೆ ಗಾಳಿಯೊಂದಿಗೆ ಮಿಂಚು,ಗುಡುಗು ಸಹಿತ ಸುಮಾರು ಅರ್ಧಗಂಟೆ ಸಮಯ ಮಳೆ ಬಂದಿದೆ. ಆದರೂ ಈ ಮಳೆಯಿಂದ ಅತಿಯಾದ ಸೆಕೆಯಿಂದ ಬಳಲುತ್ತಿದ್ದ ನಗರವಾಸಿಗಳು ಸ್ವಲ್ಪ ತಂಪಿನ ಅನುಭವ ಪಡೆಯಲು ಮಾತ್ರ ಸಾಧ್ಯವಾಯಿತು. ಆದರೆ ಜಿಲ್ಲೆಯಲ್ಲಿ ವಿಪರಿತವಾಗಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಗೆ ಈ ಮಳೆಯಿಂದ ಯಾವ ಪ್ರಯೋಜನವೂ ಇಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗ ಬೇಕಾದರೇ ಘಟ್ಟ ಪ್ರದೇಶಗಳಲ್ಲಿ ಕಡಿಮೆಯೆಂದರೂ ಐದು ದಿನಗಳ ಕಾಲ ಬಿರುಸಿನ ಮಳೆಯಾಗಬೇಕು.

ನಗರದಲ್ಲಿ ಸುರಿಯುವ ಮಳೆ ನೀರು ಸಮುದ್ರದ ಒಡಲು ಸೇರಿದರೆ… ದ.ಕ.ಜಿಲ್ಲೆಯ ಸ್ವಲ್ಪ ಎತ್ತರ ಪ್ರದೇಶಗಳಲ್ಲಿ ಸುರಿಯುವ ಮಳೆ ನೀರಿನಿಂದ ನೇತ್ರಾವತಿ ತುಂಬಿ ತುಳುಕಿ ನಗರವಾಸಿಗಳ ಕುಡಿಯುವ ನೀರಿನ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಗುವುದರಲ್ಲಿ ಯಾವೂದೇ ಸಂಶಯವಿಲ್ಲ.

Write A Comment