ಕನ್ನಡ ವಾರ್ತೆಗಳು

ಕುಂದಾಪುರ(ಹೈಕಾಡಿ): ಸಿಟ್ಟಿನಲ್ಲಿ ವ್ಯಕ್ತಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ ಎದುರಾಳಿ..!

Pinterest LinkedIn Tumblr

A man bleeds from a severe bite on nose by an aggressive Water Python

(ಸಾಂದರ್ಭಿಕ ಚಿತ್ರ)

ಕುಂದಾಪುರ: ಕ್ಷುಲ್ಲಕ ಕಾರಣಕ್ಕಾಗಿ ನಡೆಯುತ್ತಿದ್ದ ಗಲಾಟೆ ವೇಳೆ ಎದುರಾಳಿಯೋರ್ವ ಇನ್ನೋರ್ವನ ಮೂಗನ್ನು ಕಚ್ಚಿ ಗಾಯಗೊಳಿಸ ಬಗ್ಗೆ ಗಾಯಗೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.

ಶೇಖರ ಕುಲಾಲ್ (45) ಮೂಗನ್ನು ಕಚ್ಚಿಸಿಕೊಂಡು ಗಾಯಗೊಂಡ ವ್ಯಕ್ತಿ. ಭೋಜ ಕುಲಾಲ್ ಎಂಬಾತನ ವಿರುದ್ಧ ಮೂಗು ಕಚ್ಚಿದ ಆರೋಪವಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ನಡೆದಿದೆ.

ಶೇಖರ್ ಕುಲಾಲ್ ಅವರು ತಮ್ಮ ಮನೆಯಲ್ಲಿದ್ದ ವೇಳೆ ಆರೋಪಿ ಬೋಜ ಕುಲಾಲ್ ಆಗಮಿಸಿದ್ದು ಶೇಖರ್ ಕುಲಾಲ್ ಅವರ ತಂದೆ ಅಪ್ಪು ಕುಲಾಲ್ ಅವರಿಗೆ ಯಾವುದೋ ಕಾರಣಕ್ಕಾಗಿ ಬೈಯಲು ಆರಂಭಿಸಿದ್ದಾರೆ. ಈ ನಡುವೆ ಶೇಖರ ಕುಲಾಲ್‌ರವರು “ನೀನು ಈ ರೀತಿ ಬೈಯುವುದು ಸರಿಯಲ್ಲ” ಎಂದು ಬೋಜ ಕುಲಾಲನಿಗೆ ಬುದ್ದಿ ಮಾತು ಹೇಳಿದ್ದಕ್ಕೆ, ಕೋಪಗೊಂಡ ಆರೋಪಿ ಬೋಜ “ನನಗೆ ಬುದ್ದಿವಾದ ಹೇಳಲು ನೀನು ಯಾರು” ಎಂದು ಹೇಳಿ ಶೇಖರ ಕುಲಾಲ್‌ರವರ ಮೂಗನ್ನು ಹಲ್ಲಿನಿಂದ ಕಚ್ಚಿ ರಕ್ತ ಬರುವಂತೆ ಗಾಯಗೊಳಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಶೇಖರ ಕುಲಾಲ್‌ರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment