ಕನ್ನಡ ವಾರ್ತೆಗಳು

ಕುಂದಾಪುರ(ಕರ್ಕುಂಜೆ): ಹಾಡುಹಗಲೇ ಮನೆಯಿಂದ ನಗ-ನಗದು ಕಳವು

Pinterest LinkedIn Tumblr

ಕುಂದಾಪುರ: ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲಿದ್ದ ಚಿನ್ನಾಭರಣ ಹಾಗೂ ನಗದು ಕಳವುಗೈದು ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಹೆರ್ಜಾಡಿ ಎಂಬಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು ಕಳ್ಳರು ಬೀಗ ಹಾಕಿದ ಮನೆಯ ಅಡುಗೆ ಕೋಣೆಯ ಪಕ್ಕದ ಕೋಣೆಯ ಮಾಡಿನ ಹಂಚನ್ನು ತೆಗೆದು ಒಳ ಪ್ರವೇಶಿಸಿದ್ದಾರೆ.

Kundapura_Karkunje_Theft (1) Kundapura_Karkunje_Theft (3) Kundapura_Karkunje_Theft (2)

ಕಪಾಟಿನ ಹಣ, ಹುಂಡಿ ಹಣಕ್ಕೂ ಕನ್ನ:
ಮನೆಯೊಳಗಿದ್ದ ಗೋದ್ರೆಜ್ ಕಪಾಟುಗಳನ್ನು ಒಡೆದು, ಅದರಲ್ಲಿರುವ 4 ಗ್ರಾಂ ತೂಕದ ಚಿನ್ನದ ಉಂಗುರ-4, ಸುಮಾರು 10 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿ ಓಲೆ, ಸುಮಾರು 2 ಗ್ರಾಂ ತೂಕದ ಚಿನ್ನದ ತಾಳಿ-1, ಸುಮಾರು 2 ಗ್ರಾಂ ತೂಕದ ಚಿನ್ನದ ಉಂಗುರ -1. ಒಟ್ಟು 30 ಗ್ರಾಂ ತೂಕದ ಅಂದಾಜು 45,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಮನೆಯ ಕಾಮಗಾರಿ ಬಗ್ಗೆ ಕಪಾಟಿನಲ್ಲಿರಿಸಿದ್ದ 80,000 ರೂಪಾಯಿ ನಗದು ಮತ್ತು ದೇವರ ಕೋಣೆಯಲ್ಲಿ ಮೂರು ಸಣ್ಣ ಹುಂಡಿಗಳಲ್ಲಿದ್ದ ಸುಮಾರು 10,000 ರೂಪಾಯಿ ಹಣವನ್ನು ಕಳವುಗೈದಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment