ಕನ್ನಡ ವಾರ್ತೆಗಳು

ಮೇ.9ರಂದು ಸೂರ್ಯನ ಮುಂದೆ ಬುಧ ಹಾದುಹೋಗುವ ಅಪರೂಪದ ದೃಶ್ಯ

Pinterest LinkedIn Tumblr

sun_spl_effect

ನವದೆಹಲಿ,ಮೇ.06: ಅಂತರಿಕ್ಷದಲ್ಲಿ ಮೇ.9 ರಂದು ಸೂರ್ಯನ ಮುಂದೆ ಬುಧ ಗ್ರಹ ಹಾದುಹೋಗಲಿದ್ದು, ಈ ಅಪರೂಪದ ದೃಶ್ಯವನ್ನು ನೋಡಲು ತಪ್ಪಿಸಿಕೊಂಡರೆ ಮತ್ತೇ ಅದನ್ನು ಕಾಣಬೇಕೆಂದರೆ 2032 ರವರೆಗೆ ಕಾಯಬೇಕಾಗುತ್ತದೆ.

ಅತಿವಿರಳ ದೃಶ್ಯವು ಭಾರತವು ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಜಪಾನ್ ಹಾಗೂ ಆಗ್ನೇಯ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಅಪರೂಪವು ಒಟ್ಟು 7 ಗಂಟೆ 30 ನಿಮಿಷಗಳ ಕಾಲ ಘಟಿಸಲಿದ್ದು, ಭಾರತದಲ್ಲಿ ಮೇ.9 ರಂದು ಸಂಜೆ 4.41 ರಿಂದ 2 ಗಂಟೆ 45 ನಿಮಿಷಗಳ ಕಾಲ ಕಾಣಿಸುತ್ತದೆ.

ಭಾರತದ ಹಲವೆಡೆ ಸೂರ್ಯ ಮುಳುಗುವ ಸಂದರ್ಭದಲ್ಲಿ ವಿಸ್ಮಯ ಸಂಭವಿಸಲಿದ್ದು, ಸೂರ್ಯನ ಮುಂದೆ ಹಾದು ಹೋಗುವ ಬುಧ ಗ್ರಹದ ಸನ್ನೀವೇಷವನ್ನು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ. ಬೈನೋಕ್ಯುಲಾರ್ ಅಥವಾ ದೂರದರ್ಶಕದ ಮೂಲಕ ನೋಡಬಹುದು.

ಬುಧ ಗ್ರಹವು ಒಂದು ಶತಮಾನದಲ್ಲಿ 13 ರಿಂದ 14 ಬಾರಿ ಸೂರ್ಯನ ಮುಂದೆ ಹಾದು ಹೋಗಲಿದೆ. ಸಾಮಾನ್ಯವಾಗಿ ಈ ಘಟನೆ ಸಂಭವಿಸುವುದು ಮೇ ಮತ್ತು ನವೆಂಬರ್ ತಿಂಗಳ 7 ಮತ್ತು 13 ನೇ ದಿನಾಂಕಗಳಂದು. ಈ ಮುಂಚೆ ನವೆಂಬರ್ 6, 2006 ರಲ್ಲಿ ಭಾರತದ ಪೂರ್ವ ಭಾಗಗಳಲ್ಲಿ ಈ ದೃಶ್ಯ ಕಾಣಿಸಿಕೊಂಡಿತ್ತು. 21 ರಂದು ನೀವು ನೋಡಲಿಲ್ಲವೆಂದರೆ ಮತ್ತೇ 2032, ನವೆಂಬರ್ 13 ರವರೆಗೆ ಕಾಯಬೇಕಾಗುತ್ತದೆ.

Write A Comment