ಕನ್ನಡ ವಾರ್ತೆಗಳು

ಕಾನೂನು ಸುವ್ಯವಸ್ಥೆ ಕಾಪಾಡಲು ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯ

Pinterest LinkedIn Tumblr

Biometric_card_fisher

ಮಂಗಳೂರು, ಮೇ 05:  ಸಮುದ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್‌ನ್ನು ಹೊಂದುವುದು ಕಡ್ಡಾಯವಾಗಿದೆ ಮೀನುಗಾರಿಕೆ ಉಪನಿರ್ದೇಶರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಯೋಮೆಟ್ರಿಕ್ ಕಾರ್ಡ್‌ನ್ನು ಹೊಂದಲು ಕೊನೆಯ ಅವಕಾಶವಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಕರಾವಳಿ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಬಿಇಎಲ್ ಸಂಸ್ಥೆಯು ಮೇ-ಜೂನ್ ತಿಂಗಳಲ್ಲಿ ಹಮ್ಮಿಕೊಂಡಿದೆ. ಎಲ್ಲಾ ಮೀನುಗಾರಿಕಾ ದೋಣಿ ಮಾಲಕರು ತಮ್ಮ ದೋಣಿಗಳಲ್ಲಿ ಕೆಲಸ ಮಾಡುವ ಮೀನುಗಾರರಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಕಾರ್ಡ್‌ನ್ನು ಪಡೆಯುವ ಬಗ್ಗೆ ಆಸಕ್ತಿ ವಹಿಸಲು ತಿಳಿಸಲಾಗಿದೆ.

ಇದು ಕೊನೆಯ ಅವಕಾಶವಾಗಿರುವುದರಿಂದ ಮತ್ತು ಬಯೊಮೆಟ್ರಿಕ್ ಕಾರ್ಡ್ ಹೊಂದುವುದು ಕಡ್ಡಾಯವಾಗಿರುವುದರಿಂದ ಈ ಕ್ಯಾಂಪ್‌ನ ಪ್ರಯೋಜನ ಪಡೆಯುವಂತೆ ತಿಳಿಸಲಾಗಿದೆ. ಕ್ಯಾಂಪ್‌ನ ದಿನಾಂಕವನ್ನು ಮುಂದಕ್ಕೆ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Write A Comment