ಕನ್ನಡ ವಾರ್ತೆಗಳು

ಶಾಡೋಲ್ : ಮೊಬೈಲ್ ಕದ್ದ ಮಂಗ : ಠಾಣೆಯಲ್ಲಿ ದೂರು ನೀಡಿದ ಮಹಿಳೆ

Pinterest LinkedIn Tumblr

monkey_with_mobil

ಭೋಪಾಲ್,ಮೇ.04 : ಮೊಬೈಲ್ ಫೋನ್ ಕದ್ದೊಯ್ದ ಮಂಗನ ವಿರುದ್ಧ ಮಧ್ಯ ಪ್ರದೇಶದ ಶಾಡೋಲ್ ಜಿಲ್ಲೆಯ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.

ಶಾಡೋನ್ ಜಿಲ್ಲೆಯ ಗರೋಲಾ ಕಾಲೋನಿಯ ನಿವಾಸಿಯಾದ ಪಾರ್ವತಿ ಬಹ್ರಾನಿ ದೂದು ನೀಡಿದ ಮಹಿಳೆ. ಪಾರ್ವತಿ ತನ್ನ ಮನೆಯ ವರಾಂಡಾದಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಂಗವೊಂದು ಅವರ ಮೊಬೈಲ್ ಫೋನ್ ತೆಗೆದುಕೊಂಡಿದೆ. ಮಂಗನಿಂದ ಮೊಬೈಲ್ ಫೋನ್ ಬಿಡಿಸಿಕೊಳ್ಳಲು ಪಾರ್ವತಿ ಪ್ರಯತ್ನಿಸಿದ್ದಾರೆ. ಆದರೆ ಮಂಗ ಅವರನ್ನು ಹೆದರಿಸಿ ಮೊಬೈಲ್ ಫೋನ್​ನೊಂದಿಗೆ ಪರಾರಿಯಾಗಿದೆ.

ಇದರಿಂದ ಬೇಸತ್ತು ಅವರು ಕೋಟವಾಲಿ ಪೊಲೀಸ್ ಠಾಣೆಗೆ ತೆರಳಿ ಮೊಬೈಲ್ ಕಳ್ಳತನದ ದೂರು ದಾಖಲಿಸಿದ್ದಾರೆ. ಗರೋಲಾ ಕಾಲೋನಿಯಲ್ಲಿ ಮಂಗಗಳ ಹಾವಳಿ ವಿಪರೀತವಾಗಿದ್ದು, ದಿನವೂ ಒಂದಲ್ಲಾ ಒಂದು ಮನೆಗೆ ನುಗ್ಗಿ ದಾಂದಲೆ ಎಬ್ಬಿಸುತ್ತವೆ. ಜತೆಗೆ ಕೆಲವೊಂದು ಮಂಗಗಳು ಕೋಪಗೊಂಡು ಜನರ ಮೇಲೆ ಹಲ್ಲೆ ಸಹ ನಡೆಸಿವೆ

Write A Comment