ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ ‘ರಂಗರಂಗು ರವಿವಾರ ಸಂತೆ’; ವಿದ್ಯಾರ್ಥಿಗಳು ಮಾಡಿದ ಮಕ್ಕಳ ಸಂತೆಯ ಕರಾಮತ್ತು

Pinterest LinkedIn Tumblr

(ವರದಿ, ಚಿತ್ರ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರದಲ್ಲಿ ಶನಿವಾರದ ಸಂತೆ ಬಾರೀ ಫೆಮಸ್ಸು. ಆದರೇ ಈ ಬಾರೀ ಭಾನುವಾರವೂ ಕೂಡ ಕುಂದಾಪುರದಲ್ಲಿ ಸಂತೆ ನಡೆಯಿತು. ಅದು ಮಾಮೂಲಿ ನಡೆಯುವ ಸಂತೆಯಾಗಿರಲಿಲ್ಲ. ಬದಲಿಗೆ ವಿದ್ಯಾರ್ಥಿಗಳೇ ಮಾಡಿದ ಸಂತೆ. ಈ ಸಂತೆಯಲ್ಲಿ ಏನಿತ್ತು, ಮಕ್ಕಳು ಏನೆಲ್ಲಾ ಮಾಡಿದ್ರು ಅನ್ನೋದಕ್ಕೆ ಈ ಸ್ಟೋರಿ ಓದಿ.

Kundapura_Makkala_Santhe Programme (13) Kundapura_Makkala_Santhe Programme (16) Kundapura_Makkala_Santhe Programme (8) Kundapura_Makkala_Santhe Programme (6) Kundapura_Makkala_Santhe Programme (5) Kundapura_Makkala_Santhe Programme (4) Kundapura_Makkala_Santhe Programme (3) Kundapura_Makkala_Santhe Programme (7) Kundapura_Makkala_Santhe Programme (17) Kundapura_Makkala_Santhe Programme (15) Kundapura_Makkala_Santhe Programme (14) Kundapura_Makkala_Santhe Programme (9) Kundapura_Makkala_Santhe Programme (10) Kundapura_Makkala_Santhe Programme (1) Kundapura_Makkala_Santhe Programme (2) Kundapura_Makkala_Santhe Programme (12) Kundapura_Makkala_Santhe Programme (11)

ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಇವರು ಹಮ್ಮಿಕೊಂಡ ‘ರಂಗರಂಗು ರವಿವಾರ ಸಂತೆ’ ಎಲ್ಲರ ಗಮನ ಸೆಳೆಯಿತು. ಕಳೆದ ಮೂವತ್ತೇಳು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಮುದಾಯ ಸಂಸ್ಥೆ ಈ ಹಿಂದಿನಂದಲೂ ಉಚಿತ ರಜಾಮೇಳವನ್ನು ಮಾಡುತ್ತಾ ಬಂದಿದೆ. ಆರನೇ ತರಗತಿಯಿಂದ ಆರಂಭಗೊಂಡು ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ರಜಾ ಮೇಳದಲ್ಲಿ ಪಾಲ್ಘೊಳ್ಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ಬಹುತೇಕ ಸರಕಾರಿ ಶಾಲೆ ಮಕ್ಕಳು ಹಾಗೂ ಟೆಂಟ್ ವಾಸಿ ಮಕ್ಕಳು ಈ ರಜಾ ಮೇಳದಲ್ಲಿ ಪಾಲ್ಘೊಳ್ಳುವುದರ ಜೊತೆಜೊತೆಗೆ ಆಸಕ್ತಿಯುಳ್ಳ ಖಾಸಗಿ ಶಾಲಾ ಮಕ್ಕ್ಕಳು ಪಾಲ್ಘೊಳ್ಳುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಮಕ್ಕಳಿಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ರೀತಿಯ ಕಾರ್ಯಗಾರಗಳು ನಡೆಯುತ್ತದೆ. ಅಲ್ಲದೇ ಮಕ್ಕಳಿಗೆ ಅಗತ್ಯವಿರುವ ನಾಟಕ, ಸಂಗೀತ, ಮುಖವಾಡ ತಯಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಈ ಶಿಬಿರದ ಇನ್ನೊಂದು ಪ್ರಮುಖ ಕಾರ್ಯಕ್ರಮವೇ ಮಕ್ಕಳ ಸಂತೆ. ಮಕ್ಕಳಲ್ಲಿ ಸಂವಹನ ಕಲೆ, ವ್ಯಾವಹಾರಿಕ ಚಾತುರ್ಯ, ಗ್ರಾಹಕರನ್ನು ಸೆಳೆಯುವ ಕುಶಲತೆ ಜೊತೆಗೆ ಮಕ್ಕಳಿಗೆ ಮನೋರಂಜನೆ ನೀಡುವ ಉದ್ದೇಶವೇ ಈ ಮಕ್ಕಳ ಸಂತೆಯ ಗುರಿ ಎನ್ನುತ್ತಾರೆ ಸಮುದಾಯ ಸಾಂಸ್ಕ್ರತಿಕ ಸಂಘಟನೆ ಅಧ್ಯಕ್ಷ ಉದಯ ಗಾಂವ್ಕರ್.

ಹೆಸರೇ ಹೇಳುವಂತೆ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳೇ ವ್ಯಾಪಾರಿಗಳು. ಅವರು ಅಂಗಡಿಗಳನ್ನು ತೆರೆದು ತಾವೇ ಮನೆಯಿಂದ ತರುವ ಆಹಾರ ಉತ್ಪನ್ನಗಳು, ದಿನಸಿ ಸಾಮಾಗ್ರಿಗಳು, ತರಕಾರಿ ಹಾಗೂ ಸಾಂಬಾರ ಪದಾರ್ಥಗಳು ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಮಾರಾಟಕ್ಕೆ ಕೂರುತ್ತಾರೆ. ತರಹೇವಾರಿ ತರಕಾರಿಗಳು, ಹಣ್ಣುಗಳು, ಐಸ್ ಕ್ರೀಮ್, ಬಿಸಿಲ ಬೇಗೆ ನಿವಾರಣೆಗೆ ತರಹೇವಾರಿ ಜ್ಯೂಸುಗಳು, ಬೇಕರಿ ಉತ್ಪನ್ನಗಳು, ನಿತ್ಯೋಪಯೋಗಿ ಸಾಮಾಗ್ರಿಗಳಾದ ಸೋಪು, ಶಾಂಪು, ಟೂತ್ ಪೇಸ್ಟ್, ಬ್ರಶ್, ಪೆನ್ನು, ಪೆನ್ಸಿಲ್ ಸೇರಿದಂತೆ ಮಾಮೂಲಿ ಸಂತೆಯಲ್ಲಿ ದೊರಕುವ ಎಲ್ಲಾ ವಸ್ತುಗಳು,ಸರಕುಗಳು ಈ ಮಕ್ಕಳ ಸಂತೆಯಲ್ಲಿ ಲಭ್ಯವಿದ್ದವು.

ತಾವು ಮಾರಾಟಕ್ಕಿಟ್ಟ ವಸ್ತುಗಳನ್ನು ಅದರ ದರ ಸಮೇತವಾಗಿ ಕೂಗುತ್ತಾ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ ಮಕ್ಕಳು ಫುಲ್ ಬ್ಯುಸಿಯಾಗಿದ್ದರು. ಬಹುತೇಕ ಹಣ್ಣು, ಹಣ್ಣಿನ ಜ್ಯೂಸ್, ಸಾಪ್ಟ್ ಡ್ರಿಂಕ್ಸ್ ಹಾಗೂ ತರಕಾರಿ ಮತ್ತು ಹಣ್ಣುಗಳ ಖರೀದಿ ಮಕ್ಕಳ ಸಂತೆಯಲ್ಲಿ ಜಾಸ್ಥಿಯಾಗಿತ್ತು. ಮಕ್ಕಳ ಫೋಷಕರು ಮತ್ತು ಸಾರ್ವಜನಿಕರು ಸಂತೆಯ ಗ್ರಾಹಕರಾಗಿ ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಖುಷಿಪಟ್ಟರು. ಅಲ್ಲದೇ ವ್ಯವಹಾರ ಜ್ಞಾನವನ್ನು ಕಲಿತ ಮಕ್ಕಳು ವ್ಯಾಪಾರ ಹೇಗೆ ಮಾಡಬೇಕೆಂಬುದನ್ನು ತಿಳಿದು ಚೌಕಾಸಿ ಮಾಡುವ ಗ್ರಾಹಕರಿಂದಲೂ ಹಣ ಪಡೆದು ಖುಷಿಪಟ್ಟರು.

ಇನ್ನು ಹತ್ತು ದಿನದ ರಜಾಮೇಳದಲ್ಲಿ ಎಂಟು ಮಂದಿ ಟೆಂಟ್ ವಾಸಿ ಮಕ್ಕಳು ಸೇರಿದಂತೆ ಒಟ್ಟು 70(ಎಪ್ಪತ್ತು) ಮಕ್ಕಳು ಭಾಗಿಯಾಗಿದ್ರು. ದಿನವು ಮಕ್ಕಳಿಗೆ ಬೆಳಿಗ್ಗೆ ಉಪಹಾರ ಮಧ್ಯಾಹ್ನ ಊಟ, ಸಂಜೆ ಉಪಹಾರ ನೀಡಲಾಗುತ್ತಿತ್ತು. ಈ ಬಾರೀ ಸಮುದಾಯ ಸಂಸ್ಥೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಇವರು ಸಹಭಾಗಿತ್ವ ವಹಿಸಿದ್ದರು. ಸಮುದಾಯ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಉದಯ ಗಾಂವ್ಕರ್, ಜಿ.ವಿ. ಕಾರಂತ ಸೇರಿದಂತೆ ಸಮುದಾಯ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಮಕ್ಕಳ ಸಂತೆ ಸಂದರ್ಭ ಇದ್ದರು.

ಒಟ್ಟಿನಲ್ಲಿ ಉಚಿತ ರಜಾ ಮೇಳದ ಮೂಲಕ ಮಕ್ಕಳಿಗೆ ವಿವಿಧ ರೀತಿಯ ಮೌಲ್ಯಾಧಾರಿತ ಸಂಗತಿಗಳನ್ನು ತಿಳಿಸುವ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ. ಅಲ್ಲದೇ ಇಂತಹಾ ಕಾರ್ಯಕ್ರಮಕ್ಕೆ ದಾನಿಗಳ ಸಹಕಾರವು ಅಗತ್ಯವಾಗಿ ಬೇಕಿದೆ.

Write A Comment