ಕನ್ನಡ ವಾರ್ತೆಗಳು

ಬೈಂದೂರು: ಅಪರಿಚಿತ ವ್ಯಕ್ತಿ ಮೃತದೇಹದ ಸೊಂಟದ ಭಾಗ ಪತ್ತೆ

Pinterest LinkedIn Tumblr

ಕುಂದಾಪುರ: ಅಪರಿಚಿತ ವ್ಯಕ್ತಿಯೋರ್ವರ ಸೊಟದ ಭಾಗವೊಂದು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಎ.16 ಶನಿವಾರ ಸಂಜೆ 4:00 ಗಂಟೆಯ ವೇಳೆಗೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಸಮುದ್ರ ತೀರದ ಬಳಿ ಸುಮಾರು 30 ರಿಂದ 50 ವರ್ಷ ಪ್ರಾಯದ ಗಂಡಸಿನ ಮೃತದೇಹದ ಸೊಂಟದ ಭಾಗ ಬಿದ್ದುಕೊಂಡಿರುವುದು ಪತ್ತೆಯಾಗಿದ್ದು ಸೊಂಟದ ಭಾಗದಲ್ಲಿ ಕಾಫಿ ಬಣ್ಣದ ಚಡ್ಡಿ ಇದೆ. ದೇಹದ ಮೇಲಿನ ಭಾಗ ಹಾಗೂ ಕಾಲಿನ ಮೊಣಗಂಟಿನ ಕೆಳಭಾಗ ಪತ್ತೆಯಾಗಿಲ್ಲ.

Byndoor_Unidentified_Deadbody (2) Byndoor_Unidentified_Deadbody (1)

ಯಾವುದೋ ವ್ಯಕ್ತಿಯು ಸುಮಾರು 25 ರಿಂದ 30 ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಸಮಯದಲ್ಲಿ ಅಥವಾ ಯಾವುದೋ ಕಾರಣದಿಂದಲೋ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ಶಂಶಯಿಸಲಾಗಿದೆ.

ಪತ್ತೆಯಾದ ದೇಹದ ಭಾಗವನ್ನು ಎಂ.ಎಚ್.ಐ. ಹೆಲ್ಪ್ ಲೈನ್ ಇದರ ಇಬ್ರಾಹಿಂ ಹಾಗೂ ಸ್ವಯಂಸೇವಕರ ಸಹಕಾರದಲ್ಲಿ ಬೈಂದೂರು ಶವಗಾರದ ಶೈತ್ಯಾಗಾರದಲ್ಲಿ ಇಡಲಾಗಿದ್ದು ವಾರೀಸುದಾರರ ಪತ್ತೆಗೆ ಕೋರಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment