ಕನ್ನಡ ವಾರ್ತೆಗಳು

ಕುಂದಾಪುರ: ಕಾಲೇಜು ಕನ್ಯೆಗೆ ಕಿಸ್ ಕೊಟ್ಟ ಉಪಪ್ರಾಂಶುಪಾಲ ಅರೆಸ್ಟ್

Pinterest LinkedIn Tumblr

ಕುಂದಾಪುರ: ವಿದ್ಯೆ ಹೇಳಿಕೊಡುವ ಗುರುವನ್ನು ದೇವರಿಗೆ ಹೋಲಿಸುತ್ತಾರೆ. ಆದರೇ ಗುರುವಿನ ಸ್ಥಾನದಲ್ಲಿರುವ ಕೆಲವೊಬ್ಬರು ಮಾಡುವ ಕುಕ್ರತ್ಯಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂಬುದಕ್ಕೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ನರ್ಸಿಂಗ್ ಕಾಲೇಜೊಂದರಲ್ಲಿ ನಡೆದ ಘಟನೆ ಸಾಕ್ಷಿ. ಈ ಪ್ರಕರಣ ಸುಮಾರು ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿದ್ದು ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ನರ್ಸಿಂಗ್ ಕಾಲೇಜಿನ 18 ವರ್ಷ ಪ್ರಾಯದ ವಿದ್ಯಾರ್ಥಿನಿಯೋರ್ವಳಿಗೆ ಅದೇ ಕಾಲೇಜಿನ ಉಪಪ್ರಾಂಶುಪಾಲ ಕೇರಳದ ಮೂಲದವನಾದ ಅಮರ್ ಎನ್ನುವಾತ ಬಲವಂತವಾಗಿ ಚುಂಬಿಸಿದ್ದಲ್ಲದೇ, ಅಶ್ಲೀಲವಾದ ಸಂದೇಶಗಳನ್ನು ಆಕೆಗೆ ಕಳುಹಿಸಿದ್ದು ಮಾತ್ರವಲ್ಲದೇ ಜೀವಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

Vice Principal_arrest_Sexual Harrisment

( ಆರೋಪಿ ಉಪಪ್ರಾಂಶುಪಾಲ ಅಮರ್)

ಕಾಲೇಜಿನ ಉಪಪ್ರಾಂಶುಪಾಲ ಅಮರ್ ಎಂಬಾತ ಮಾರ್ಚ್ ತಿಂಗಳ 10 ರಂದು ಬಿಡುವಿನ ಸಮಯದಲ್ಲಿ ಈ ವಿದ್ಯಾರ್ಥಿನಿಯನ್ನು ಕರೆದು ಅಶ್ಲೀಲವಾಗಿ ಮಾತನಾಡಿದ್ದಲ್ಲದೇ ಆಕೆಯನ್ನು ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿದ್ದಾನೆ. ಅಲ್ಲದೇ ಈ ವಿಚಾರವನ್ನು ಬಹಿರಂಗಪಡಿಸಿದರೇ ಕಾಲೇಜಿನಿಂದ ಸಸ್ಪೆಂಡ್ ಮಾಡುವುದಾಗಿಯೂ ಅಲ್ಲದೇ ಕೊಲ್ಲುವುದಾಗಿಯೂ ಜೀವಬೆದರಿಕೆ ಹಾಕಿದ್ದಾನೆ.

ಕಾಮುಕ ಅಮರನಿಗೆ ಕಾಲೇಜಿನ ಟೀಚರ್ ಸಾಥ್..?
ಇನ್ನು ಆತ ಕಾಲೇಜಿನ ಬಹುತೇಕ ವಿದ್ಯಾರ್ಥಿನಿಯರಿಗೆ ಮೊಬೈಲಿನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಾನೆ ಎನ್ನಲಾಗಿದ್ದು ಈ ಅಶ್ಲೀಲ ಸಂದೇಶಗಳೆಲ್ಲವನ್ನೂ ವಿದ್ಯಾರ್ಥಿಗಳ ಮೊಬೈಲುಗಳಿಂದ ಡಿಲೀಟ್ ಮಾಡುವ ಕೆಲಸ ಮಾಡಿ ಸಾಕ್ಷಿ ಮಾಡಿದ ಆರೋಪದಡಿ ಅದೇ ಕಾಲೇಜಿನ ಉಪನ್ಯಾಸಕಿ ಗೀತಾ ಎನ್ನುವವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನೊಂದ ಯುವತಿ ಬುಧವಾರದಂದು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡುತ್ತಲೇ ಕಾರ್ಯಪ್ರವ್ರತ್ತರಾದ ಕುಂದಾಪುರ ಪೊಲೀಸ್ ಠಾಣಾಧಿಕಾರಿ ನಾಸೀರ್ ಹುಸೇನ್ ಅವರು ಗುರುವಾರ ಮುಂಜಾನೆ ಆರೋಪಿ ಉಪಪ್ರಾಂಶುಪಾಲ ಅಮರ್ ಎಂಬಾತನನ್ನು ಬಂಧಿಸುತ್ತಾರೆ. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಗುರುವಾರ ಮಧ್ಯಾಹ್ನದ ಸುಮಾರಿಗೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.

Write A Comment