ಕನ್ನಡ ವಾರ್ತೆಗಳು

ತೆಕ್ಕಟ್ಟೆಯಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿದೆ ರಸ್ತೆ ಮೇಲೆ ಇರುವ ವಿದ್ಯುತ್ ಕಂಬ

Pinterest LinkedIn Tumblr

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಿಂದ ಕೊಮೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆಯೇ ವಿದ್ಯುತ್ ಕಂಬವಿದ್ದು ವಾಹನ ಸವಾರರಿಗೆ ಕಂಟಕಪ್ರಾಯವಾಗಿದೆ.

ಹಲವು ವರ್ಷಗಳಿಂದ ಈ ವಿದ್ಯುತ್ ಕಂಬವು ರಸ್ತೆ ಸಮೀಪವಿತ್ತು. ಆದರೇ ಕಳೆದ ಹದಿನೈದು ದಿನಗಳಿಂದ ಹಿಂದೆ ಚತುಷ್ಪತ ಕಾಮಗಾರಿ ಸಲುವಾಗಿ ರಸ್ತೆಯನ್ನು ಅಗಲಗೊಳಿಸಿದ ಕಾರಣ ಮತ್ತು ಮೀನುಗಾರಿಕೆ ರಸ್ತೆಯನ್ನು ಸಮತಟ್ಟುಗೊಳಿಸಿ ಕಾಮಗಾರಿ ಮಡಿದ ಪರಿಣಾಮ ವಿದ್ಯುತ್ ಕಂಬ ರಸ್ತೆ ಮೇಲಕ್ಕೆ ಬಂದಿದೆ.

Tekkatte_Electricity_Tower Problem (3) Tekkatte_Electricity_Tower Problem (4) Tekkatte_Electricity_Tower Problem (6) Tekkatte_Electricity_Tower Problem (7) Tekkatte_Electricity_Tower Problem (5) Tekkatte_Electricity_Tower Problem (2) Tekkatte_Electricity_Tower Problem (1)

ಹೆದ್ದಾರಿಗೆ ತಾಗಿಕೊಂಡೇ ವಿದ್ಯುತ್ ಕಂಬವಿರುವುದಲ್ಲದೇ ಮೀನುಗಾರಿಕೆ ರಸ್ತೆಯೂ ಈ ಪ್ರದೇಶದಲ್ಲಿರುವ ಕಾರಣ ನಿತ್ಯ ನೂರಾರು ವಾಹನಗಳು ಸಂಚರಿಸುತ್ತದೆ.

ಈ ಬಗ್ಗೆ ಮೆಸ್ಕಾಂನವರನ್ನು ಕೇಳಿದರೇ ಇದು ನಮಗೆ ಸಂಬಂಧವಿಲ್ಲ ಹೆದ್ದಾರಿ ಗುತ್ತಿಗೆ ಕಂಪೆನಿವರು ಇದಕ್ಕೆ ಜವಬ್ದಾರರು ಎನುತ್ತಿದ್ದಾರೆ. ಇತ್ತ ಗುತ್ತಿಗೆ ಕಂಪೆನಿಯವರು ಇದಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ, ರಸ್ತೆ ಅಗಲಗೊಳಿಸುವ ಮೊದಲು ಅಥವಾ ತರುವಾಯ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಬೇರೆಕಡೆಗೆ ವರ್ಗಾಯಿಸಿ ಬಳಿಕ ಕಾಮಗಾರಿ ಮಾಡಿದ್ದರೇ ಈ ಸಮಸ್ಯೆ ಇರುತ್ತಿರಲಿಲ್ಲ ಎಂದು ಸ್ಥಳಿಯರು ತಿಳಿಸಿದ್ದಾರೆ.

ಕೂಡಲೇ ವಿದ್ಯುತ್ ಕಂಬವನ್ನು ರಸ್ತೆಯಿಂದ ತೆರವುಗೊಳಿಸಿ ರಸ್ತೆ ಸಮೀಪದಲ್ಲಿ ಅಳವಡಿಸುವಂತೆ ಸಾರ್ವಜನಿಕರು ಮತ್ತು ವಾಹನ ಸವಾರರು ಆಗ್ರಹಿಸಿದ್ದಾರೆ.

Write A Comment