ಕನ್ನಡ ವಾರ್ತೆಗಳು

ಮೀನುಗಾರಿಕೆಗೆ ತೆರೆಳಿದ ವ್ಯಕ್ತಿ ಶವವಾಗಿ ಪತ್ತೆ – ಕೊಲೆ ಶಂಕೆ …?

Pinterest LinkedIn Tumblr

fiser_man_died

ಉಳ್ಳಾಲ,ಏ.12 : ಕೋಟೆಪುರ ಸಮೀಪದ ಬರಾಕಾ ಫಿಶ್ ಆಯಿಲ್ ಮಿಲ್ ಮುಂಭಾಗದಲ್ಲಿ ವ್ಯಕ್ತಿಯ ಶವ ಮಂಗಳವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಉಳ್ಳಾಲದ ಮೊಗವೀರಪಟ್ನ ನಿವಾಸಿ ರಾಜು ಕೋಟ್ಯಾನ್ (41) ಎಂದು ಗುರುತಿಸಲಾಗಿದೆ.

fiser_man_died_1

ಮಂಗಳವಾರ ನಸುಕಿನ 2 .00 ಗಂಟೆ ಸುಮಾರಿಗೆ ಮನೆಯಿಂದ ಕೋಟೆಪುರದ ದಕ್ಕೆಗೆ ನಡೆದುಕೊಂಡು ಹೋದವ ಇಂದು ಮಧ್ಯಾಹ್ನ ವೇಳೆ ಕೋಟೆಪುರ ಉಳ್ಳಾಲ ರಸ್ತೆ ಬದಿಯ ಪೊದೆಯ ಕೆಳಗಡೆ ಶವವಾಗಿದ್ದಾನೆ , ಬರಾಕಾ ಆಯಿಲ್ ಮಿಲ್ ಎದುರುಗಡೆಯೇ ಮೃತದೇಹ ಮುಖಕ್ಕೆ ಜಜ್ಜಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಧ್ಯಾಹ್ನದ ವೇಳೆ ರಸ್ತೆಬದಿಯಲ್ಲಿ ತೆರಳುತ್ತಿದ್ದ ಮಕ್ಕಳಿಗೆ ಮೃತದೇಹ ಕಂಡು ಬಂದಿದೆ. ಈತನನ್ನು ಕೊಲೆಗೈದಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ.

ಸ್ಥಳಕ್ಕೆ ಡಿಸಿಪಿ, ಎಸಿಪಿ , ಸಿಸಿಬಿ ತಂಡ, ಪಾಂಡೇಶ್ವರ, ಬಜಪೆ, ಮಂಗಳೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಸಹಿತ ಕೆಎಸ್ ಆರ್ ಪಿ ಎರಡು ತುಕಡಿಗಳು ಭೇಟಿ ನೀಡಿದೆ .

ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಶವ ಪೋಸ್ಟ್ ಮಾರ್ಟಂ ಗಾಗಿ ಕಳುಹಿಸಲಾಗಿದೆ.

Write A Comment