ಕನ್ನಡ ವಾರ್ತೆಗಳು

ಚಾರ್ಮಾಡಿಯಲ್ಲಿ ಚಾರಣ : ಪ್ರಜಾವಾಣಿ ವರದಿಗಾರ ಹೈಮದ್ ಹುಸೇನ್ ನಿಧನ

Pinterest LinkedIn Tumblr

Reporter_husen_died

ಮಂಗಳೂರು, ಎ.8: ಪ್ರಜಾವಾಣಿ ವರದಿಗಾರ ಹೈಮದ್ ಹುಸೇನ್ (28) ಇಂದು ಮಧ್ಯಾಹ್ನ ಹೃದಾಯಘಾತದಿಂದ ಚಾರ್ಮಾಡಿಯಲ್ಲಿ ನಿಧನರಾದರು.

ಯುಗಾದಿಯ ಪ್ರಯುಕ್ತ ಪತ್ರಿಕೆಗಳಿಗೆ ಇಂದು ರಜೆಯಿದ್ದ ಕಾರಣ ಪತ್ರಕರ್ತರೆಲ್ಲರೂ ಚಾರ್ಮಾಡಿ ಅಧ್ಯಯನ ಪ್ರವಾಸ ತೆರಳಿದ್ದರು. ಪತ್ರಕರ್ತರ ತಂಡ ಹಾಗೂ ಸಹ್ಯಾದ್ರಿ ಸಂಚಯ ಪರಿಸರ ಜಾಗೃತಿ ತಂಡದ ಸುಮಾರು ಮುವತ್ತಾರು ಮಂದಿ ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆ ತೆರಳಿತ್ತು.

ಚಾರ್ಮಾಡಿಯ ಕಾಡಿನ ಮಧ್ಯೆ ಹೈಮದ್ ಹುಸೆನ್ ಅವರು ಹೃದಯಾಘಾತಕೊಳಗಾಗಿದ್ದು, ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಹೈಮದ್ ಹುಸೇನ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹೈಮದ್ ಹುಸೇನ್ ಅವರಿಗೆ ಇತ್ತೀಚೆಗೆ ವರ್ಗಾವಣೆಯಾಗಿದ್ದು, ಕೆಲವೆ ದಿನಗಳಲ್ಲಿ ಹಾವೇರಿಯಲ್ಲಿ ಕೆಲಸಕ್ಕೆ ಹಾಜರಾಗಬೇಕಿತ್ತು. ಹೈಮದ್ ಹುಸೇನ್ ಅವರ ನಿಧನಕ್ಕೆ ಪತ್ರಕರ್ತರು , ಗಣ್ಯರು ಕಂಬನಿ ಮಿಡಿದಿದ್ದಾರೆ.

Write A Comment