ಕನ್ನಡ ವಾರ್ತೆಗಳು

ಪುತ್ತೂರು: ಪಾರ್ಲೆ ಬಿಸ್ಕತ್‌ನಲ್ಲಿ ಹುಳ ಪತ್ತೆ.

Pinterest LinkedIn Tumblr

parle_biscut_worm

ಮಂಗಳೂರು, ಏ.06: ಪಾರ್ಲೆ ಕಂಪೆನಿಯ ಬಿಸ್ಕತ್‌ಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ವೃದ್ಧರವರೆಗೂ ಪಾರ್ಲೆಯ ಬಿಸ್ಕತ್‌ಗಳನ್ನು ತಿನ್ನದವರಿಲ್ಲ. ಇದೇ ರೀತಿ ಪುಣಚದ ಗ್ರಾಹಕರೊಬ್ಬರು ಇಷ್ಟಪಟ್ಟು ಖರೀದಿ ಮಾಡಿದ ಪಾರ್ಲೆ ಬಿಸ್ಕತ್ ಪ್ಯಾಕೆಟ್‌ನಲ್ಲಿ ಬಿಳಿಬಣ್ಣದ ಹುಳಗಳು ಕಂಡುಬಂದಿದ್ದು ಅಚ್ಚರಿಗೆ ಕಾರಣವಾಗಿತ್ತು.

ಆರು ತಿಂಗಳು ತಿನ್ನಲು ಯೋಗ್ಯವೆಂದು ಬರೆಯಲಾಗಿದ್ದ 20-20 ಬಿಸ್ಕತ್ ಪ್ಯಾಕೆಟ್ ಒಳಗಡೆ ಹುಳಗಳು ಕಂಡುಬಂದಿದ್ದು ಕಂಪೆನಿಯ ಉತ್ಪಾದನೆಗಳ ಗುಣಮಟ್ಟವನ್ನೇ ಪ್ರಶ್ನಿಸುವಂತಾಗಿದೆ.

ಪುಣಚ-ಪೆರಿಯಾಲ್ತಡ್ಕದದಲ್ಲಿರುವ ಸಿಟಿ ಸೂಪರ್ ಬಝಾರ್‌ನಲ್ಲಿ ಮುಹಮ್ಮದ್ ಆಲಿ ಎಂಬವರು ಬಿಸ್ಕತ್ ಖರೀದಿಸಿ ಮನೆಗೆ ಕೊಂಡೊಯ್ದು ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಹುಳಗಳು ಪತ್ತೆಯಾಗಿವೆ.

Write A Comment