ಕನ್ನಡ ವಾರ್ತೆಗಳು

ಲಕ್ಷಾಂತರ ಮೌಲ್ಯದ ಅಡಿಕೆಗೋಣಿ ಕಳವು

Pinterest LinkedIn Tumblr

ullala_supari_teft

ಬಂಟ್ವಾಳ, ಏ.5: ನಗರ ಠಾಣಾ ವ್ಯಾಪ್ತಿಯ ತಲಪಾಡಿ ಜಂಕ್ಷನ್ ನ ವಾಣಿಜ್ಯ ಸಂಕೀರ್ಣವೊಂದರಲ್ಲಿದ್ದ ಅ‌ಡಿಕೆ ದಾಸ್ತಾನು ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳ್ಳತನವಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಕಿಟಕಿಯ ಸರಳು ಮುರಿದು ಒಳ ಪ್ರವೇಶಿಸಿದ ಕಳ್ಳರು ದಾಸ್ತಾನು ಇರಿಸಿದ್ದ ಅಡಿಕೆ ಗೋಣಿಗಳನ್ನು ಕದ್ದೊಯ್ದಿದ್ದಾರೆ. 6 ತಿಂಗಳ ಹಿಂದೆ ಇದೇ ಅಂಗಡಿಯಲ್ಲಿ ಅಡಿಕೆ ಕಳ್ಳತನ ನಡೆದಿತ್ತು. ಆಗ ಪೊಲೀಸರು ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವ‌ಡಿಸುವಂತೆ ಸೂಚಿಸಿದ್ದರು. ಆದರೆ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ಗಂಗಾಧರಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನ ದಳ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.

Write A Comment