ಕನ್ನಡ ವಾರ್ತೆಗಳು

ಬೈಂದೂರು: ನಾಗೂರಿನಲ್ಲಿ ಬೈಕ್ ಹಾಗೂ ಟೆಂಪೋ ಟ್ರಾವೆಲರ್ ಡಿಕ್ಕಿ; ಬೈಕ್ ಸವಾರ ಸಾವು

Pinterest LinkedIn Tumblr
ಕುಂದಾಪುರ: ಬೈಕ್ ಹಾಗೂ ಟೆಂಫೋ ಟ್ರಾವೆಲರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ  ಘಟನೆ ಬೈಂದೂರು ಸಮೀಪದ ನಾಗೂರು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬೈಂದೂರು ಸಮೀಪದ ಯರುಕೋಣೆ ನಿವಾಸಿ ಕಾರ್ತಿಕ್ ಶೆಟ್ಟಿ(22) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ.
Byndoor_Accident_Kartik Death
(ಮೃತ ಕಾರ್ತಿಕ್ ಶೆಟ್ಟಿ )
ಘಟನೆ ವಿವರ: ಉಪ್ಪುಂದದಲ್ಲಿ ರಾತ್ರಿ ನಡೆದ ಯಕ್ಷಗಾನವನ್ನು ವೀಕ್ಷಿಸಿ  ಬೆಳಿಗ್ಗೆನ ಜಾವ ಮನೆಯತ್ತ ವಾಪಾಸ್ಸಾಗುತ್ತಿದ್ದ ವೇಳೆ  ನಾಗೂರು ಸಮೀಪದಲ್ಲಿ ಕಾರ್ತಿಕ್ ಶೆಟ್ಟಿ ಅವರ  ಬೈಕ್‌ಗೆ ಟೆಂಫೋ ಟ್ರಾವೆಲ್ಲರ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಕಾರ್ತಿಕ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಕಾರ್ತಿಕ್ ಶೆಟ್ಟಿ ಯರುಕೋಣೆ ನಿವಾಸಿ ಉದಯ ಶೆಟ್ಟಿ ಅವರ ಪುತ್ರರಾಗಿದ್ದು ಕಳೆದ ವರ್ಷವಷ್ಟೇ ಪದವಿ ಶಿಕ್ಷಣ ಮುಗಿಸಿ ತಂದೆ, ತಾಯಿ, ಸೋದರಿಯೊಂದಿಗೆ ವಾಸವಿದ್ದರು.
ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment