ಕನ್ನಡ ವಾರ್ತೆಗಳು

ಉಜಿರೆ ಡಿಪ್ಲೊಮಾ ವಿದ್ಯಾರ್ಥಿಗಳಿಂದ ಸ್ವಯಂಚಾಲಿತ ವೇಗನಿಯಂತ್ರಕ ಉಪಕರಣ ಹೊಸ ಅವಿಷ್ಕಾರ

Pinterest LinkedIn Tumblr

ujire_speed_control

ಮಂಗಳೂರು/ಬೆಳ್ತಂಗಡಿ,ಏ.05 : ಉಜಿರೆಯ ಪ್ರಸನ್ನ ಪಾಲಿಟೆಕ್ನಿಕ್‌ನ 3ನೇ ವರ್ಷದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಡಿಪ್ಲೊಮಾ ವಿದ್ಯಾರ್ಥಿಗಳು ಅಪಘಾತಗಳನ್ನು ನಿಯಂತ್ರಿಸಲು ವಿಶಿಷ್ಟ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಉಪಕರಣವನ್ನು ವಾಹನಗಳಿಗೆ ಅಳವಡಿಸಿದಲ್ಲಿ ಅಪಘಾತ ವಲಯಗಳಲ್ಲಿ ವಾಹನಗಳು ತನ್ನಿಂತಾನೇ ವೇಗನಿಯಂತ್ರಣಕ್ಕೆ ಒಳಗೊಳ್ಳುತ್ತವೆ.ವಾಹನವು ಅಪಘಾತ ವಲಯಕ್ಕೆ ಬರುತ್ತಿದ್ದಂತೆ ತನ್ನಿಂತಾನೇ ವೇಗ ಕಳೆದುಕೊಳ್ಳವುದರ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂಬುದು ವಿಶಿಷ್ಟ ಸಾಧನವನ್ನು ಅಭಿವೃದ್ಧಿಪಡಿಸಿದ ತಂಡದ ಅಭಿಮತ.

ಪ್ರತೀ ವಾಹನಗಳಲ್ಲೂ ಹಾಗೂ ರೋಡ್ ಸಿಗ್ನಲ್‌ಗಳನ್ನು ಇನ್ನು ಬೋರ್ಡ್‌ಗಳಲ್ಲಿ ಅಳವಡಿಸುವ ಸಂದರ್ಭ ಅಲ್ಲೊಂದು ಸಿಗ್ನಲ್ ನಿಯಂತ್ರಕ ಅಳವಡಿಸಿದರೆ ಅದರಿಂದ ಜಿಪಿಎಸ್ ತಂತ್ರಜ್ಞಾನದ ಮೂಲಕ ಆ ರಸ್ತೆಯಲ್ಲಿ ಬರುವ ವಾಹನಗಳಲ್ಲಿರುವ ಸಾಧನಕ್ಕೆ ಅದು ಸಂಕೇತಗಳನ್ನು ಕಳುಹಿಸಿಕೊಡುತ್ತದೆ. ಹೀಗೆ ಈ ವಿನೂತನ ಕಂಟ್ರೋಲಿಂಗ್ ವ್ಯವಸ್ಥೆ ಕಾರ್ಯಚರಿಸುತ್ತದೆ ಎಂದು ವಿಧ್ಯಾರ್ಥಿಗಳು ಈ ಸಾಧನೆಯ ವಿಶೇಷತೆಯ ಬಗ್ಗೆ ವಿವರಿಸುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಬೆಂಬಲವಾಗಿ ನಿಂತವರು ಕಾಲೇಜಿನ ಪ್ರಾಂಶುಪಾಲರಾದ ಎಚ್.ಎಮ್. ಪಾಟೀಲ್‌ರವರು. ಮಾರ್ಗದರ್ಶಕರಾಗಿದ್ದವರು ಕಾಲೇಜಿನ ಡಿಪ್ಲೊಮಾ ವಿಭಾಗದ ಇಸಿ ಉಪನ್ಯಾಸಕ ಕಾರ್ತಿಕ್ ರಾಥೋಡ್. ಇತರ ಉಪನ್ಯಾಸಕರಾದ ಕಿರಣ್, ಭಾರತಿ. ಜಿ., ಉಷಾ, ಪ್ರವೀಣ್ ಕೆ., ಸವಿತಾ ಆರ್. ತಂಡಕ್ಕೆ ನಿರಂತರ ಸಹಕಾರ ನೀಡಿದ್ದು, ವಿದ್ಯಾರ್ಥಿಗಳಾದ ಸೆಯ್ಯದ್ದ್ ಸಲ್ಮಾನ್ ಆರೀಫ್, ಮುಹಮ್ಮದ್ ಅಶ್ರಫ್, ಲೋಕೇಶ್ ಎಂ., ಸುದರ್ಶನ್, ಯತೀಶ್ ಬಿ. ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

Write A Comment