ಕನ್ನಡ ವಾರ್ತೆಗಳು

ಕೊಟ್ಟಿಗೆಯಿಂದ ನಾಲ್ಕು ಜೆರ್ಸಿ ದನ ಕಳವು ಮಾಡಿದ ಕಳ್ಳರು

Pinterest LinkedIn Tumblr

cattle+theft1

ಉಡುಪಿ: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 4 ಜೆರ್ಸಿ ದನಗಳನ್ನು ಕಳ್ಳರು ಕದ್ದ ಘಟನೆ ಉಡುಪಿಯ ಕುಂಜಿಬೆಟ್ಟು ಬುಡ್ನಾರಿನಲ್ಲಿ ಸಂಭವಿಸಿದೆ.

ಕುಂಜಿಬೆಟ್ಟು ಬುಡ್ನಾರು ಶಾಲೆಯ ಸಮೀಪದ ನಿವಾಸಿ ಟಿ. ರತ್ನಾಕರ ಶೆಟ್ಟಿ ಅವರ 3 ಜೆರ್ಸಿ ದನಗಳನ್ನು ಮತ್ತು ಪಕ್ಕದ ಮನೆಯ ಬಿ. ಬಾಲಕೃಷ್ಣ ಶೆಟ್ಟಿ ಅವರ ಕೊಟ್ಟಿಗೆಯಲ್ಲಿದ್ದ  ದನ ಸಹಿತ ಒಟ್ಟು ನಾಲ್ಕು ಜೆರ್ಸಿ ದನಗಳನ್ನು ಕಳವುಗೈಯಲಾಗಿದೆ. ನಾಲ್ವರು ಅಪರಿಚಿತರು ಮಾಹನದಲ್ಲಿ ದನಗಳನ್ನು ತುಂಬಿಕೊಂಡು ಹೋಗಿದ್ದಾರೆ.  ಕಳವಾದ ದನಗಳ ಒಟ್ಟು ಮೌಲ್ಯ ಒಂದು ಲಕ್ಷ ರೂ. ಎನ್ನಲಾಗಿದೆ.

ದನಕಳ್ಳತನದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)

Write A Comment