ಕನ್ನಡ ವಾರ್ತೆಗಳು

ಅಪರೂಪದ ಕಾಯಿಲೆಯ ಚಿಕಿತ್ಸೆಗೆ ವಿದ್ಯಾರ್ಥಿನಿ ಗೀತಾಗೆ ಸಹಾಯ: ವಿಶೇಷ ಚೇತನರಿಂದ ದೇಣಿಗೆ ಸಂಗ್ರಹ

Pinterest LinkedIn Tumblr

ಉಡುಪಿ: ತಮ್ಮ ಭಿನ್ನತೆಯ ನೋವನ್ನು ಮರೆತು ಇತರರ ನೋವಿಗೆ ಮರುಗುವುದರಲ್ಲಿ ಸಾರ್ಥಕತೆಯನ್ನು ಕಂಡುಕೊಂಡ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ. ಅಪರೂಪದ ಸಿಕ್ಲಸೆಲ್ ಅನಿಮಿಯಾ ಕಾಯಿಲೆಯಿಂದ ಬಳಲುತ್ತಿರುವಉಡುಪಿಯ ಡಾ| ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಗೀತಾಳ ಆರೋಗ್ಯದ ಚಿಕಿತ್ಸೆಗಾಗಿವಿಶೇಷ ಚೇತನರಿಂದ ಸ್ಪಂದನೆ.

ಇದೇ ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ರಾಜ್ಯ ಅಂಗವಿಕಲರ ಸಂಘ ಉಡುಪಿ ಇದರ ಸದಸ್ಯರು ,ಶಿರ್ವ ,ಬೈಂದೂರು ಅಂಗವಿಕಲರ ಸಂಘದ ಅನೇಕ ಸದಸ್ಯರನ್ನು ಒಳಗೊಂಡು ಪಾದೆಯಾತ್ರೆಯ ಮೂಲಕ ಧನ ಸಂಗ್ರಹ ಮಾಡುವ ಮೂಲಕ ಗೀತಾಳ ನೋವಿಗೆ ಸ್ಪಂದಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದುವರೆಗೂ ಕರ್ನಾಟಕ ಅಂಗವಿಕಲರ ಸಂಘ ಇದುವರೆಗೂ ಯಾರಿಗಾಗಿಯೂ ದೇಣಿಗೆ ಎತ್ತಿಲ್ಲ. ಆದರೇ ಬಾಳಿ ಬದುಕಬೇಕಿರುವ ಪ್ರತಿಬಾವಂತೆ ಹುಡುಗಿ ಗೀತಾಳಿಗಾಗಿ ಸಾಮರ್ಥ್ಯದವರು ಒಟ್ಟಾಗಿ ಕೈ ಜೋಡಿಸಿದ್ದಾರೆ.

Udupi_Geetha_Mney collection (2) Udupi_Geetha_Mney collection (1) Udupi_Geetha_Mney collection (3)

ಉಡುಪಿ ಜೋಡುಕಟ್ಟೆಯಿಂದ ,ನಗರದ ಎಲ್ಲ ಪ್ರದೇಶಗಳಿಗೆ ಪಾದಯಾತ್ರೆ ಮಾಡಿಕೊಂಡು ಗೀತಾಳ ಆರೋಗ್ಯ ಚಿಕಿತ್ಸೆಗಾಗಿ ದೇಣಿಗೆ ಸಂಗ್ರಹ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ಸಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ರಾಜ್ಯ ಅಂಗವಿಕಲರ ಸಂಘ ಉಡುಪಿಯ ಅಧ್ಯಕ್ಷ ವಿಲ್‌ಫೋರ್ಡ್ , ಪ್ರಧಾನ ಕಾರ್ಯದರ್ಶಿ ಎಂ.ಎಸ್.ಸೂಫಿ,ಖಾಲಿದ್ ,ವಿಜಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಾವಂತೆ ಗೀತಾಳ ಚಿಕಿತ್ಸೆಗಾಗಿ ಇಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು . ಇದರಿಂದ ಬರುವ ಹಣವನ್ನು ಅವಳ ಚಿಕಿತ್ಸೆಗಾಗಿ ಬಳಸಲಾಗುವುದು,ಅದಷ್ಟು ಬೇಗ ಅವಳು ಚೇತರಿಸಿಕೊಂಡು ಇತರರಿಗೆ ಸಹಾಯ ಮಾಡಿ ಸಮಾಜಕ್ಕೆ ಮಾದರಿಯಾಗಲಿ.
-ಜಗದೀಶ್ ಭಟ್ ( ರಾಜ್ಯ ಅಂಗವಿಕಲರ ಸಂಘ ಉಡುಪಿ-ಕಾರ್ಯದರ್ಶಿ )

ನಿಜವಾಗಿಯೂ ನನಗೆ ತುಂಬಾ ಆಶ್ಚರ್ಯವಾಗುತ್ತಿದೆ,ಭಿನ್ನ ಸಾಮರ್ಥ್ಯ ಅವರ ತೊಂದರೆ ಲೆಕ್ಕಿಸದೇ ನನ್ನ ಆರೋಗ್ಯದ ಬಗ್ಗೆ ದೇಣಿಗೆ ಸಂಗ್ರಹಿಸುತ್ತಿರುವುದು ಸಂತೋಷವಾಗುತ್ತಿದೆ.ನನ್ನ ಆರೋಗ್ಯ ಸುಧಾರಿಸಿದ ನಂತರ ತಾನೂ ಕೈಲಾದಷ್ಟು ಸಮಾಜ ಸೇವೆ ಮಾಡುತ್ತೇನೆ ಅವರ ಸೇವೆ ನಾನು ಶ್ರಮವಹಿಸುವೆ.
– ಗೀತಾ (ಪ್ರಥಮ ಬಿ.ಕಾಂ ವಿದ್ಯಾರ್ಥಿ)

Write A Comment