
ಉಡುಪಿ,ಮಾ.25: ಹಿರಿಯಡಕದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಸಂಬಂದಪಟ್ಟ ಬೈಕಾಡ್ತಿ ಹಾಗು ರಕ್ತೇಶ್ವರಿ ದೈವಸ್ಥಾನದ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಮಾರಂಭವು ಬುಧವಾರ ಜರುಗಿತು. ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು “ಪಾಕ ಶಾಲೆ”ಯನ್ನು ಉಧ್ಘಾಟಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮಗಳು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಅಡಿಗರ ನೇತೃತ್ವದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಅಶೋಕ್ ಸೇರಿಗಾರ್ ಇವರ ಸ್ಯಾಕ್ಸೋಫೋನ್ ಸಂಗೀತ ಕಾರ್ಯಕ್ರಮ ಜರುಗಿತು ಮತ್ತು ದಿನೇಶ್ ಸೇರಿಗಾರ್, ಸುಧಾಕರ ಸೇರಿಗಾರ್ ಮತ್ತು ಶಾಮರಾಯ ಆಚಾರ್ಯ ಇವರುಗಳಿಗೆ ಗೌರವಿಸಲಾಯಿತು.

ದೈವಸ್ಥಾನದ ಅರ್ಚಕರಾದ ಬಾಬು ಸೇರಿಗಾರ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ನರಸಿಂಹ ಸೇರಿಗಾರ್, ಅಧ್ಯಕ್ಷ ರಾಜೇಂದ್ರ ಕುಮಾರ, ಕಾರ್ಯದರ್ಶಿ ರಮೇಶ ಸೇರಿಗಾರ್ ಇವರುಗಳನ್ನು ಒಳಗೊಂದು ಹಲವಾರು ಸ್ವಯಂ ಸೇವಕರು, ರಾಜಾರಾಂ ಹೆಗ್ಡೆ, ಪ್ರಕಾಶ ಪೈ ಮತ್ತು ರಾಮದಾಸ್ ಹೆಗ್ಡೆ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು