ಕನ್ನಡ ವಾರ್ತೆಗಳು

ಪಡಿತರ ಚೀಟಿಗೆ ಆಧಾರ್ ಎಪಿಕ್ ಮತ್ತು ಯು‌ಐಡಿಯ ಮಾಹಿತಿ ನೀಡಲು ಸೂಚನೆ.

Pinterest LinkedIn Tumblr

ration_adara_epiccno

ಮ೦ಗಳೂರು, ಮಾ.25: ಪ್ರಸ್ತುತ ಎಪಿಕ್ ಮತ್ತು ಯು‌ಐಡಿ ಸಂಖ್ಯೆಗಳನ್ನು ಪಡಿತರ ಚೀಟಿ ಡಾಟಾಗಳಿಗೆ ಹೊಂದಾಣಿಕೆ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಎಲ್ಲಾ ಮಾಧ್ಯಮಗಳ ಮೂಲಕ, ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರ ಗಮನಕ್ಕೆ ತರಲಾಗಿದೆ. ಆದಾಗ್ಯೂ ಇನ್ನೂ ಹೆಚ್ಚಿನ ಪಡಿತರ ಚೀಟಿದಾರರು ಇದುವರೆಗೂ ಎಪಿಕ್ ಮತ್ತು ಯು‌ಐಡಿ ಸಂಖ್ಯೆಯ ಮಾಹಿತಿಯನ್ನು ಇಲಾಖೆಗೆ ನೀಡಿರುವುದಿಲ್ಲ.

ಆದುದರಿಂದ ಇದುವರೆಗೆ ಎಪಿಕ್ ಮತ್ತು ಯು‌ಐಡಿ ಸಂಖ್ಯೆ ಯನ್ನು ನೀಡದಿರುವ ಅಂತ್ಯೋದಯ ಅನ್ನ ಯೋಜನೆ ಹಾಗೂ ಬಿಪಿ‌ಎಲ್ ಪಡಿತರ ಚೀಟಿದಾರರು ತಕ್ಷಣವೇ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆ ಹಾಗೂ 21 ವರ್ಷ ಮೇಲ್ಪಟ್ಟ ಸದಸ್ಯರ ಮತದಾರರ ಗುರುತು ಚೀಟಿ ಸಂಖ್ಯೆಯ ಮಾಹಿತಿಯನ್ನು ಕಡ್ಡಾಯವಾಗಿ ನೀಡತಕ್ಕದ್ದು.

ಎಪಿಕ್ ಮತ್ತು ಯು‌ಐಡಿ ಮಾಹಿತಿಯನ್ನು ಇಲಾಖೆಗೆ ನೀಡದ ಪಡಿತರ ಚೀಟಿಗಳು ಮುಂದೆ ರದ್ದುಗೊಳ್ಳುವ ಸಂಭವವಿರುತ್ತದೆ ಎಪಿಕ್ ಮತ್ತು ಯು‌ಐಡಿ ಮಾಹಿತಿ ಇಲ್ಲದಿರುವ ಪಡಿತರ ಚೀಟಿಗಳ ಪಟ್ಟಿಯು ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿದ್ದು, ಎಲ್ಲಾ ಪಡಿತರ ಚೀಟಿದಾರರು ಅಗತ್ಯ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.

Write A Comment