ಕನ್ನಡ ವಾರ್ತೆಗಳು

ಎಪಿ‌ಎಂಸಿ ಆನ್‌ಲೈನ್ ವ್ಯವಸ್ಥೆ: ಬಂಟ್ವಾಳದಲ್ಲಿ ಜಾಗೃತಿ.

Pinterest LinkedIn Tumblr

Apmc_bantwal_photo

ಮ೦ಗಳೂರು, ಮಾ.25:  ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಏಕೀಕೃತ ಮಾರುಕಟ್ಟೆ ವ್ಯವಸ್ಥೆಯ ಅಭಿಯಾನವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಮಾರ್ಚ್  23,  24ರಂದು  ನಡೆಯಿತು.

ಸ್ಥಳೀಯ ಖರೀದಿದಾರರ ಜೊತೆ ಆನ್‌ಲೈನ್ ಟ್ರೇಡಿಂಗ್ ಖರೀದಿದಾರರು ಪಾಲ್ಗೊಳ್ಳುವುದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ, ನ್ಯಾಯಯುತ ಬೆಲೆ ಸಿಗುವುದು. ಈ ನಿಟ್ಟಿನಲ್ಲಿ ಎಲ್ಲಾ ರೈತರು ಸಮಿತಿಯಲ್ಲಿ ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ನೋಂದಣಿಪಡಿಸಿಕೊಳ್ಳಬೇಕು. ಇದುವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಟ್ಟು 8000 ರೈತರ ಮಾಹಿತಿ ಸಂಗ್ರಹಣೆಯಾಗಿರುತ್ತದೆ ಎಂದು ಬಂಟ್ವಾಳ ಎಪಿ‌ಎಂಸಿ ಕಾರ್ಯದರ್ಶಿಯವರು ತಿಳಿಸಿದರು.

ತಾಲೂಕಿನ ವಿವಿದೆಡೆಗಳಿಗೆ ಪ್ರಚಾರ ವಾಹನವು ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.

Write A Comment