ಕುಂದಾಪುರ: ಯುವಕನೋರ್ವ ತನ್ನ ಮನೆಯ ಹಿತ್ತಲಿನಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ವಡೇರಹೋಬಳಿ ಸಮೀಪದ ಬಿ.ಸಿ. ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ವಡೇರಹೋಬಳಿ ಕಾರಂತರಬೆಟ್ಟು ನಿವಾಸಿ ವಿಜಯ್(21) ಆತ್ಮಹತ್ಯೆಗೆ ಶರಣಾದ ಯುವಕ.

ಘಟನೆ ವಿವರ: ಗಾರೆ ಕೆಲಸ ಮಾಡಿಕೊಂಡಿದ್ದ ವಿಜಯ್ ಗುರುವಾರ ರಾತ್ರಿ ಎಂದಿನಂತೆಯೇ ಊಟ ಮುಗಿಸಿ ಮಲಗಿದ್ದಾರೆ. ಆದರೇ ಮನೆಯವರು ಬೆಳಿಗ್ಗೆ ನೋಡುವಾಗ ಆತ ಮಲಗಿದ್ದ ಸ್ಥಳದಲ್ಲಿರದಿದ್ದು ಹುಡುಕಾಟ ನಡೆಸುವಾಗ ಮನೆಯ ಹಿತ್ತಲಿನಲ್ಲಿರುವ ಮರದ ಕೊಂಬೆಯಲ್ಲಿ ಈತ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ.
ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೂಲಗಳು ತಿಳಿಸಿದ್ದರೂ ಕೂಡ ನಿಖರ ಕಾರಣ ತಿಳಿದುಬಂದಿಲ್ಲ. ವಿಜಯ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರು ಹಾಗೂ ಓರ್ವ ಸೋದರನನ್ನು ಅಗಲಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.