ಕನ್ನಡ ವಾರ್ತೆಗಳು

ಏರ್ ಇಂಡಿಯಾದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Pinterest LinkedIn Tumblr

Air_womens_day_1

ಮಂಗಳೂರು,ಮಾ.09 : ದಮಾಮ್ ಗೆ ಸಂಚಾರ ನಡೆಸುವ ವಿಮಾನದಲ್ಲಿ ಎಲ್ಲ ಮಹಿಳಾ ಸಿಬಂದಿಯನ್ನೇ ನಿಯುಕ್ತಿಗೊಳಿಸುವ ಮೂಲಕ ಏರ್ ಇಂಡಿಯಾ ಅಂತಾರಾಷ್ಟೀಯ ಮಹಿಳಾ ದಿನವನ್ನು ಮಂಗಳವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿತು.

ಕಮಾಂಡರ್ ಕ್ಯಾಪ್ಟನ್ ತಾನಿಯಾ ಆನಂದ್, ಸಹ ಪೈಲೆಟ್ ಯುವಿಕಾ ಸಂಧೂ, ಕ್ಯಾಬಿನ್ ಕ್ರಿವ್ ಇನ್ ಚಾರ್ಚ್ ದೀಪಾ ನಟರಾಜನ್, ಕ್ಯಾಬೀನ್ ಕ್ರಿವ್ ಗಳಾದ ನೇಹಾ ಬಿಜೋರಿಯಾ, ಶಾಲಿನಿ ಕಿಂಕರ್, ಜಿಂಜು ಚಂದ್ರನ್ ಅವರನ್ನು ಒಳಗೊಂಡ ವಿಮಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಸಂಜೆ ೫.೦೫ಕ್ಕೆ ದಮಾಮ್ ಗೆ ಪ್ರಯಾಣ ಬೆಳೆಸಿತು. ಪ್ರಯಾಣಕ್ಕೆ ಮೊದಲು ಕೇಕ್ ಕತ್ತರಿಸಿ ಮಹಿಳಾ ದಿನವನ್ನು ಆಚರಿಸಲಾಯಿತು.

Air_womens_day_2 Air_womens_day_3 Air_womens_day_4 Air_womens_day_5 Air_womens_day_6 Air_womens_day_7

ಏರ್ ಇಂಡಿಯಾ ಮಂಗಳೂರು ಕೇಂದ್ರದ ಮ್ಯಾನೇಜರ್ ನಾಗೇಶ್ ಶೆಟ್ಟಿ ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ಉಪಸ್ಥಿತರಿದ್ದರು.

Write A Comment