ಕನ್ನಡ ವಾರ್ತೆಗಳು

‘ಶಿವ ಶಿವ ಎಂದರೇ ಭಯವಿಲ್ಲ’;ಕುಂದಾಪುರದೆಲ್ಲೆಡೆ ಶಿವನ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ

Pinterest LinkedIn Tumblr

ಕುಂದಾಪುರ: ಮಹಾ ಶಿವರಾತ್ರಿಯ ದಿನವಾದ ಸೋಮವಾರ ಕುಂದಾಪುರ ತಾಲೂಕಿನ ಪ್ರಸಿದ್ದ ಶಿವ ದೇವಾಲಯಗಳಿಗೆ ಭಕ್ತರು ಬೆಳಿಗ್ಗೆ ನಸುಕಿನಿಂದಲೇ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಕುಂದಾಪುರದಲ್ಲಿನ ಶ್ರೀ ಕುಂದೇಶ್ವರ ದೆವಸ್ಥಾನದಕ್ಕೆ ಬೆಳಿಗ್ಗೆ ಗಂಟೆ 5 ರಿಂದಲೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.ದೇಗುಲದಲ್ಲಿ ಸಂಜೆಯಿಂದ ವಿವಿಧ ತಂಡಗಳಿಂದ ಭಜನೆ,ದೇವರ ಸಂಕೀರ್ತನೆ,ಗಾನ ವೈಭವ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಸಂಜೆ 6.00 ರಿಂದ ಭಕ್ತರಿಂದ ಹಣತೆ ದೀಪ ಸೇವೆ ನಡೆಯಲಿದೆ.

Kndpr_Shivaratri Fest_Celebration (1) Kndpr_Shivaratri Fest_Celebration (2) Kndpr_Shivaratri Fest_Celebration (3) Kndpr_Shivaratri Fest_Celebration (4) Kndpr_Shivaratri Fest_Celebration (5) Kndpr_Shivaratri Fest_Celebration (6) Kndpr_Shivaratri Fest_Celebration (7) Kndpr_Shivaratri Fest_Celebration (8) Kndpr_Shivaratri Fest_Celebration (9) Kndpr_Shivaratri Fest_Celebration (10) Kndpr_Shivaratri Fest_Celebration (11) Kndpr_Shivaratri Fest_Celebration (12) Kndpr_Shivaratri Fest_Celebration (13) Kndpr_Shivaratri Fest_Celebration (14) Kndpr_Shivaratri Fest_Celebration (15) Kndpr_Shivaratri Fest_Celebration (16) Kndpr_Shivaratri Fest_Celebration (17) Kndpr_Shivaratri Fest_Celebration (18) Kndpr_Shivaratri Fest_Celebration (19) Kndpr_Shivaratri Fest_Celebration (20) Kndpr_Shivaratri Fest_Celebration (21) Kndpr_Shivaratri Fest_Celebration (22) Kndpr_Shivaratri Fest_Celebration (23) Kndpr_Shivaratri Fest_Celebration (24)

ಇನ್ನು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಮತ್ತು ಕುಂಭಾಶಿಯ ಶ್ರೀ ಹರಿಹರ ದೇವಸ್ಥಾನ, ತೆಕ್ಕಟ್ಟೆಯ ಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರು ಮಹಾಲಿಂಗೇಶ್ವರ ದೇವಸ್ಥಾನ,,ವಣಾಕೊಡ್ಲು ಮಹಾಲಿಂಗೇಶ್ವರ, ದೇಲಟ್ಟು ಮಹಾಲಿಂಗೇಶ್ವರ ದೇವಸ್ಥಾನ, ಇಡೂರು ಶಿವ ದೇವಾಲಯ ಸೇರಿದಂತೆ ಇನ್ನೂ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಸೋಮವಾರ ಶಿವನ ಪ್ರಿಯ ದಿನವಾದ ಕಾರಣ ಸೋಮವಾರವೇ ಹಬ್ಬ ಬಂದಿದ್ದು ಭಕ್ತರು ಇನ್ನಷ್ಟು ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿಯನ್ನಿಡುತ್ತಿದ್ದಾರೆ. ಇನ್ನು ಕೆಲವು ದೇವಸ್ಥಾನದಲ್ಲಿ ಕಾಳು ಮೆಣಸಿನ ಕಷಾಯ, ಕೆಲವೆಡೆ ಅನ್ನದಾನ ಕಾರ್ಯಕ್ರಮಗಳು ಜರಗುತ್ತಿದೆ.

ಸೋಮವಾರ ರಾತ್ರಿ ವಿವಿಧ ಸಂಘ ಸಂಸ್ಥೆಗಳು ಜಾಗರಣೆಯ ಸಲುವಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ವರದಿ, ಚಿತ್ರ- ಯೋಗೀಶ್ ಕುಂಭಾಸಿ

Write A Comment