ಕನ್ನಡ ವಾರ್ತೆಗಳು

“ಸಮಾಜ ಕಾರ್ಯಾಚರಣೆಯಲ್ಲಿ ಮಾನವ ಹಕ್ಕುಗಳ ಶಿಕ್ಷಣ” ಅಂತಾರಾಷ್ಟ್ರೀಯ ವಿಚಾರ ಸಂಕಿರಣ

Pinterest LinkedIn Tumblr

Roshni_Nilay_Seminar_1

ಮಂಗಳೂರು, ಮಾ.4: ವೆಲೆನ್ಸಿಯಾದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಮತ್ತು ಯುಜಿಸಿ ಸಹಯೋಗದಲ್ಲಿ ಶುಕ್ರವಾರ ‘ಸಮಾಜ ಕಾರ್ಯಾಚರಣೆಯಲ್ಲಿ ಮಾನವ ಹಕ್ಕುಗಳ ಶಿಕ್ಷಣ’ ವಿಷಯದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೆನಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುನೆಸ್ಕೋದ ನೀತಿ ತತ್ವ ಸಲಹಾ ತಜ್ಞ ಡಾ.ಪೀಟರ್ ಜಿ.ಕಿರ್ಶಲೇಗರ್ ಯೇಲ್ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ, ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ಅತಿಥಿಗಳಾಗಿದ್ದರು.

Roshni_Nilay_Seminar_2 Roshni_Nilay_Seminar_3 Roshni_Nilay_Seminar_4 Roshni_Nilay_Seminar_5 Roshni_Nilay_Seminar_6

ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ರಮೀಳಾ ಶೇಖರ್, ಕಾಲೇಜಿನ ನಿರ್ದೇಶಕಿ ಡಾ.ಫಿಲೋಮಿನಾ ಡಿಸೋಜ, ವಿಚಾರ ಸಂಕಿರಣದ ಜತೆ ಕಾರ್ಯದರ್ಶಿ ಶೈಲಜಾ ಸಂತೋಷ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ವಿವರ ನಿರೀಕ್ಷಿಸಿ…

Write A Comment