ಕನ್ನಡ ವಾರ್ತೆಗಳು

ಶಂಕರನಾರಾಯಣ: ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಕಾಮುಕ ಆರೋಪಿ ಅರೆಸ್ಟ್

Pinterest LinkedIn Tumblr

ಉಡುಪಿ: ಮನೆಯಲ್ಲಿ ಹಿರಿಯರು ಯಾರೂ ಇಲ್ಲದ ವೇಳೆ ಬಂದ ಕಾಮುಕನೋರ್ವ ಮನೆಯಲ್ಲಿದ್ದ ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕಳೆದ ತಿಂಗಳು ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಕೇರಳದವನಾಗಿದ್ದು ಕೊಲ್ಲೂರು ಸಮೀಪದ ಜಡ್ಕಲ್- ಸೆಳ್ಕೋಡು ಎಂಬಲ್ಲಿ ವಾಸವಿದ್ದ ಪ್ರಮೋದ (24) ಬಂಧಿತ ಕಾಮುಕ. ಆಜ್ರಿ ಸಮೀಪದ ತಗ್ಗುಂಜೆ ಎಂಬಲ್ಲಿ ಜ.31 ರಂದು ಈ ಘಟನೆ ನಡೆದಿದೆ.

Rape Case accused- Pramodh Selkodu-

(ಬಂಧಿತ ಕಾಮುಕ-ಪ್ರಮೋದ)

ನಡೆದಿದ್ದೇನು?
ಸೆಳ್ಕೋಡು ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಪ್ರಮೋಧ ಈ ಘಟನೆಯ ಮೊದಲು ಸಂತ್ರಸ್ತ ಬಾಲಕಿ ಮನೆಗೂ ಕೆಲಸಕ್ಕಾಗಿ ಹೋಗಿದ್ದನೆನ್ನಲಾಗಿದೆ. ಇದಾದ ಬಳಿಕ ಜ.31 ರಂದು ಆಜ್ರಿಗೆ ಬಂದ ಆತ ಆಕೆಯ ಮನೆಯತ್ತ ಬಂದಿದ್ದು ಈ ವೇಳೆ ಬಾಲಕಿ ತಾಯಿ ಮನೆಯಲ್ಲಿರಲಿಲ್ಲ. ಬಾಲಕಿ ಹಾಗೂ ಆಕೆಯ ಐದನೇ ತರಗತಿ ಓದುವ ಸಹೋದರ ಇಬ್ಬರೇ ಮನೆಯಲ್ಲಿದ್ದರೆನ್ನಲಾಗಿದೆ. ಸಹೋದರ ಹೊರಗಡೆ ಆಟವಾಡುತ್ತಿದ್ದ ವೇಳೆಯನ್ನು ಗಮನಿಸಿ ಒಳಪ್ರವೇಶಿಸಿದ ಕಾಮುಕ ಪ್ರಮೋ ಬಾಲಕಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿ ಕೂಗಾಡಿದ್ದು ಕೇಳಿದ ಸಹೋದರನೂ ಮನೆ ಸಮೀಪ ಬಂದು ಕೂಗಿದಾಗ ಸ್ಥಳೀಯರು ಜಮಾಯಿಸಿದ್ದಾರೆ. ಜನರು ಬರುತ್ತಲೇ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಸಂತ್ರಸ್ತೆ ಬಾಲಕಿ ತಾಯಿಗೆ ಧಮ್ಕಿ?
ಬಾಲಕಿಯ ತಾಯಿ ಬಂದಾಗ ನಡೆದಿದ್ದನ್ನು ಬಾಲಕಿ ವಿವರಿಸಿದ್ದಾಳೆ. ಆದರೇ ಮರ್ಯಾದೆಗೆ ಅಂಜಿ ಮನೆಯವರು ಸುಮ್ಮನ್ನಿದ್ದು ಆರೋಪಿ ಇದನ್ನೇ ಬಂಡವಾಳವಾಗಿಸಿಕೊಂಡು ಸಂತ್ರಸ್ತೆ ಬಾಲಕಿಗೆ ಫೋನ್ ಕರೆ ಮಾಡಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ತನ್ನ ಬಗ್ಗೆ ಯಾರದ್ದಾದರೂ ಬಳಿ ಹೇಳಿದರೇ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆನ್ನಲಾಗಿದೆ. ಇದರಿಂದ ಬೆದರಿದ ಬಾಲಕಿ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಪರಾರಿಯಾದ ಕಾಮುಕ ಅರೆಸ್ಟ್
ಪೊಲೀಸ್ ಠಾಣೆಯಲ್ಲಿ ಪ್ರಮೋದನ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಅರೋಪಿ ಕಾಮುಕ ಪ್ರಮೋದ ಊರು ಬಿಟ್ಟಿದ್ದಾನೆ. ಪೊಲೀಸರು ಸತತ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿರುವುದಿಲ್ಲ. ಮಾ.2 ರಂದು ಆತ ಸೆಳ್ಕೊಡಿಗೆ ಬಂದಿರುವ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ವರ್ತಮಾನದಂತೆ ಶಂಕರನಾರಾಯಣ ಎಸ್.ಐ. ದೇಜಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಶಂಕರನರಾಯಣ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

Write A Comment