ಉಳ್ಳಾಲ,ಮಾ.02: ಝೈನುಲ್ ಉಲಮಾರವರು ಸುನ್ನತ್ ಜಮಾಅತ್ನ ಬೆಳವಣಿಗೆಗೆ ಬಹಳಷ್ಟು ಶ್ರಮವಹಿಸಿದ್ದರು. ಬದುಕಿನಲ್ಲಿ ಬದುಕು ಸಾವು ಎಂಬದು ಇದೆ. ಮರಣದ ಬಳಿಕ ರಕ್ಷಣೆ ಸಿಗಲು ಏನು ಮಾಡಬೇಕೆಂಬುದರ ಬಗ್ಗೆ ಅವರ ಮನ ಕರಗುವಂತಹ ಉಪದೇಶ ಬಹಳಷ್ಟು ಜನರನ್ನು ಎಚ್ಚರಗೊಳಿಸಿದೆ. ಇದಿರಂದ ಇಸ್ಲಾಂ ಧರ್ಮದ ಆಶಯ ಬದಲಿಸದೇ ನಿರಂತರ ನಡೆಯುತ್ತಿದೆ ಎಂದು ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಹೇಳಿದರು
ಅವರು ದೇರಳಕಟ್ಟೆಯ ಸಿಟಿ ಗ್ರೌಂಡ್ನಲ್ಲಿ ಸೋಮವಾರ ನಡೆದ ಎಸ್ಕೆ ಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಇದರ ಆಶ್ರಯದಲ್ಲಿ ಶೈಖುನಾ ಝೈನುಲ್ ಉಲಮಾ (ಖ.ಸಿ.)ರವರ ಅನುಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೈಖುನ ಝೈನುಲ್ ಉಲಮಾರವರ ಅನುಸ್ಮರಣಾ ಭಾಷಣ ಮಾಡಿ ಮಾತನಾಡಿದರು.
ಜಮಾಲಿಯ ಅರೆಬಿಕ್ ಕಾಲೆಜಿನ ಪಾನೂರುನ ಫ್ರಿನ್ಸಿಪಾಲ್ ಉಸ್ತಾದ್ ಸಲೀಂ ಫೈಝಿ ಇರ್ಫಾನಿ ಅಲ್ ಅಝ್ಹರಿ ಮಾತನಾಡಿ, ಪ್ರವಾದಿಯವರು ಹೇಳಿದ ವಿಚಾರವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬರುವುದನ್ನು ಬಿಟ್ಟು ಅದನ್ನು ತಿರಸ್ಕರಿಸಿದರೆ ದೊಡ್ಡ ನಷ್ಟವಾಗುತ್ತದೆಯೇ ಹೊರತು ಲಾಭ ಇಲ್ಲ. ಪ್ರವಾದಿಯವರ ತೀರ್ಮಾನ ಅಂತಿಮವಾಗುತ್ತದೆ. ಅವರ ತೀರ್ಮಾನ ಪ್ರಕಾರ ಜೀವನ ನಮ್ಮದಾಗಬೇಕು. ಪರಸ್ಪರ ಅವಹೇಳನ, ತಮಾಷೆ ಬೇಡ. ಇದನ್ನು ಪ್ರವಾದಿಯವರು ಕಲಿಸಲಿಲ್ಲ. ನಮ್ಮ ಜೀವನ ಪ್ರವಾದಿಯವರ ಬೋಧನೆಗೆ ಪೂರಕವಾಗಿರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಕೆಎಸ್ಬಿವಿ ಬದ್ಯಾರ್ ಶಂಶುಲ್ ಉಲಮಾ ಮದ್ರಸ ಹೊರತಂದ ಝೈನುಲ್ ಉಲಮಾ ಸ್ಮರಣ ಸಂಚಿಕೆಯನ್ನು ಸಲೀಂ ಫೈಝಿ ಇರ್ಫಾನಿ ಇಸ್ಮಾಯಿಲ್ ಹಾಜಿಯವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ವಹಿಸಿದ್ದರು. ದೇರಳಕಟ್ಟೆ ಮಸೀದಿಯ ಖತೀಬ್ ಅಬ್ದುಲ್ ನಾಸಿರ್ ಫೈಝಿ ಕುಂಬಳೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸ್ಸಯ್ಯದ್ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ.ಇಸ್ಮಾಯಿಲ್ ಹಾಜಿ. ದೇರಳಕಟ್ಟೆ ಮಸೀದಿಯ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್, ದೇರಳಕಟ್ಟೆ ರೇಂಜ್ ಅಧ್ಯಕ್ಷ ಲತೀಫ್ ದಾರಿಮಿ, ಎಸ್ಕೆ ಎಸೆಸ್ಸೆಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ನೌಫಲ್ ದೇರಳಕಟ್ಟೆ, ಕಾರ್ಯದರ್ಶಿ ಮುನ್ಶಿದ್, ಟೌನ್ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ದಾರಿಮಿ ಎಸ್ಕೆ ಎಸ್ಸೆಸ್ಸೆಫ್ ಮಂಗಳೂರು ತಾಲೂಕು ಅಧ್ಯಕ್ಷ ಇಬ್ರಾಹಿಂ ಕೊಣಾಜೆ, ಸ್ವಾಗತ್ ಅಬೂಬಕರ್ ಹಾಜಿ, ಇದ್ದಿನಬ್ಬ ಹಾಜಿ ದೇರಳಕಟ್ಟೆ, ಅಬೂಸ್ವಾಲೀಹ್ ಫೈಝಿ ಪರಿಯಕ್ಕಳ ಅಬ್ದುರ್ರಹ್ಮಾನ್ ಹಾಜಿ ಮುನೀರ್, ಇಲ್ಯಾಸ್ ಹಾಜಿ ಡಿ, ಫಾರೂಕ್ ಹಾಜಿ ಕಲ್ಲಡ್ಕ, ಅಬ್ಬಾಸ್ ಹಾಜಿ, ನೌಶಾದ್ ಬದಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಬದ್ಯಾರ್ ಶಂಶುಲ್ ಉಲಮ ಇಸ್ಲಾಮಿಕ್ ಸೆಂಟರ್ ನ ನಿರ್ದೇಶಕ ಕೆ.ಯು. ಖಲೀಲುರ್ರಹ್ಮಾನ್ ಅರ್ಶದಿ ಅತಿಥಿಗಳನ್ನು ಸ್ವಾಗತಿಸಿದರು.

