ಕನ್ನಡ ವಾರ್ತೆಗಳು

ಶ್ರೀ ಮದ್ಭಾರತ ಮಂಡಳಿ ಮುಂಬಯಿ 138ನೇ ಮಂಗಳೋತ್ಸವ

Pinterest LinkedIn Tumblr

mumbai_mangalotvsa_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್

ಮುಂಬಯಿ: ಶ್ರೀ ಮದ್ಭಾರತ ಮಂಡಳಿ ಮುಂಬಯಿ ಇದರ 138ನೇ ಮಂಗಳೋತ್ಸವ ಫೆ. 27 ಮತ್ತು 28ರಂದು ಅಂಧೇರಿ (ಪ.) ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಜರಗಿತು.

ಫೆ. 27ರಂದು ಸಂಜೆ 6.30ರಿಂದ ಹೋಮ, ಬ್ರಾಹ್ಮಣ ಸತ್ಕಾರ, ಇತರ ಪೂಜೆಗಳು, ರಾತ್ರಿ 7.30ರಿಂದ ಗ್ರಂಥ ಪಾರಾಯಣ, ರಾತ್ರಿ 9.30ರಿಂದ ಉಪಕಾರ ಸ್ಮರಣೆ ಆಯೋಜಿಸಲಾಗಿತ್ತು.

ಫೆ. 28ರಂದು ಬೆಳಗ್ಗೆ 8ರಿಂದ ಭಜನೆ, ಉತ್ತರ ಪೂಜೆ, ಅತಿಥಿಗಳ ಸತ್ಕಾರ, ಪೂರ್ವಾಹ್ನ 11.30ರಿಂದ ಪ್ರಾರ್ಥನೆ, ಹರಕೆ ಸಮರ್ಪಣೆ, ಮಧ್ಯಾಹ್ನ 12.5ರಿಂದ ಅನ್ನಸಂತರ್ಪಣೆ, ಅಪರಾಹ್ನ 3ರಿಂದ ಶ್ರೀ ದೇವರ ಮೂರ್ತಿಯ ಪಲ್ಲಕ್ಕಿ ಉತ್ಸವ ಜರಗಿತು.

mumbai_mangalotvsa_2 mumbai_mangalotvsa_3 mumbai_mangalotvsa_4 mumbai_mangalotvsa_5 mumbai_mangalotvsa_6 mumbai_mangalotvsa_7

ಸಾತ್‌ ಬಂಗ್ಲೆ ಚೌಪಾಟಿಗೆ ಭಜನೆಯೊಂದಿಗೆ ಮೆರವಣಿಗೆಯಲ್ಲಿ ದೇವರನ್ನು ಅವಭೃತ ಸ್ನಾನಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ಅಂಧೇರಿ (ಪ.) ವೀರದೇಸಾಯಿ ರೋಡ್‌ನ‌ ಮೊಗವೀರ ಭವನದಲ್ಲಿ ಅನ್ನಸಂತರ್ಪಣೆ ಜರಗಿತು. ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ವಾರ್ಷಿಕ ಮಂಗಳ್ಳೋತ್ಸವವು ಎರಡು ದಿನಗಳ ಕಾಲ ಜರಗಿತು.

ಅತಿಥಿಗಳಾಗಿ ಉದ್ಯಮಿ ದಿನೇಶ್‌ ಪುತ್ರನ್‌, ಮುಂಬಯಿ ಉದ್ಯಮಿಗಳಾದ ಸಂತೋಷ್‌ ಪುತ್ರನ್‌, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್‌ ಸುವರ್ಣ, ಮೊಗವೀರ ಕೋ-ಆಪರೇಟಿವ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್‌, ಮಾಜಿ ಕಾರ್ಯಾಧ್ಯಕ್ಷ ಕೀರ್ತಿರಾಜ್‌ ಸಾಲ್ಯಾನ್‌, ಉದ್ಯಮಿ ಶ್ರೀನಿವಾಸ ಕಾಂಚನ್‌, ಚಿತ್ರಾ ಸಂತೋಷ್‌ ಪುತ್ರನ್‌, ಉದ್ಯಮಿ ಭುವನೇಂದ್ರ ಕಿದಿಯೂರು, ಹಿರಿಯ ಕಾರ್ಯಕರ್ತರಾದ ಆನಂದ ಎಲ್‌. ಕರ್ಕೇರ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್‌, ಗೌ| ‌ ಕಾರ್ಯದರ್ಶಿ ವಿ. ಕೆ. ಸುವರ್ಣ, ಜತೆ ಕಾರ್ಯದರ್ಶಿಗಳಾದ ಲೋಕನಾಥ ಪಿ. ಕಾಂಚನ್‌, ಹರೀಶ್ಚಂದ್ರ ಕಾಂಚನ್‌, ಗೌ| ಪ್ರಧಾನ ಕೋಶಾಧಿಕಾರಿ ಮೂಳೂರು ಕೇಶವ ಆರ್‌. ಪುತ್ರನ್‌, ಜತೆ ಕೋಶಾಧಿಕಾರಿಗಳಾದ ಮೂಳೂರು ನಾರಾಯಣ ಸಿ. ಸುವರ್ಣ ಮತ್ತು ಬೈಕಂಪಾಡಿ ಶ್ಯಾಮ್‌ ಕೆ. ಪುತ್ರನ್‌ ಮೊದಲಾದವರು ಉಪಸ್ಥಿತರಿದ್ದರು.

Write A Comment