ಕನ್ನಡ ವಾರ್ತೆಗಳು

ಚಾಲಕನ ಅಜಾಗರುಕತೆ : ಮರಳು ಸಾಗಾಟ ಲಾರಿ ಪಲ್ಟಿ

Pinterest LinkedIn Tumblr

sand_lorry_colapse_1

ಮಂಗಳೂರು : ಮರಳು ಸಾಗಾಟದ ಲಾರಿಯೊಂದ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಸೋಮವಾರ ರಾತ್ರಿ ಕೂಳೂರು – ಕಾವೂರು ರಸ್ತೆಯಲ್ಲಿ ಸಂಭವಿಸಿದೆ.

ಈ ಲಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪರವಾನಿಗೆಯಿಲ್ಲದೇ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಚಾಲಕನ ಅತೀವೇಗ ಹಾಗೂ ಅಜಾಗರುಕತೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

sand_lorry_colapse_2 sand_lorry_colapse_3 sand_lorry_colapse_4 sand_lorry_colapse_5 sand_lorry_colapse_6

ಲಾರಿ ಪಲ್ಟಿಯಾದ ಸ್ಥಳದ ಪಕ್ಕದಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಲಾರಿ ಅದಕ್ಕೆ ತಾಗಿದ್ದರೆ ದೊಡ್ಡ ಮಟ್ಟದ ಅಪಾಯ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಲಾರಿ ಮಗುಚಿ ಬಿದ್ದ ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಮಾಲಕರು ಕೂಡಲೇ ಸ್ಥಳಕ್ಕೆ ಆಗಮಿಸಿ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಿ, ಮರಳನ್ನು ಇನ್ನೊಂದು ಲಾರಿಯಲ್ಲಿ ಹಾಕಿ ಸಾಗಿಸಿದ್ದಾರೆ ಎನ್ನಲಾಗಿದೆ.

Write A Comment