ಕನ್ನಡ ವಾರ್ತೆಗಳು

ಮೂಡುಶೆಡ್ಡೆ ಸರ್ಕಾರಿ ಪ್ರೌಢಶಾಲೆಯ ಕಿಟಕಿಗೆ ಆಪ್ಪಳಿಸಿದ ಗುಂಡು : ವಿದ್ಯಾರ್ಥಿಗಳು ಅಪಾಯದಿಂದ ಪಾರು.

Pinterest LinkedIn Tumblr

Mudshedya_Sutout_1

ಮಂಗಳೂರು: ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಸಶಸ್ತ್ರ ತರಬೇತಿ ನಡೆಸುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಮೂಡುಶೆಡ್ಡೆಯ ದ.ಕ.ಜಿಲ್ಲಾ ಪಂಚಾಯತ್ ಸರ್ಕಾರಿ ಪ್ರೌಢಶಾಲೆಗೆ ಗುಂಡುಗಳು ಬಿದ್ದು ಎರಡು ತರಗತಿಗಳ ಕಿಟಕಿ ಗಾಜುಗಳಿಗೆ ಹಾನಿಯಾದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದು, ಅದೃಷ್ಟವಶಾತ್ ಈ ಸಂದರ್ಭ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಸರ್ಕಾರದ ವಿವಿಧ ಭದ್ರತಾ ಇಲಾಖೆಯ ಸಿಬ್ಬಂದಿಗಳಿಗೆ ಸಶಸ್ತ್ರ ತರಬೇತಿಗೆಂದೇ ಮೀಸಲಾಗಿಟ್ಟಿರುವ ಮೂಡುಶೆಡ್ಡೆಯಲ್ಲಿರುವ ಫೈರಿಂಗ್ ರೇಂಜ್‌ನಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಸಶಸ್ತ್ರ ತರಬೇತಿ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯಿಂದ ಸಮೀಪದಲ್ಲೇ ಇದ್ದ ಸರ್ಕಾರಿ ಪ್ರೌಢಶಾಲೆಯ ಕಿಟಕಿ ಗಾಜುಗಳು ಹಾನಿಗೀಡಾಗಿದೆ.

Mudshedya_Sutout_2 Mudshedya_Sutout_3 Mudshedya_Sutout_4 Mudshedya_Sutout_5 Mudshedya_Sutout_6 Mudshedya_Sutout_7 Mudshedya_Sutout_8 Mudshedya_Sutout_9

ಗುರುವಾರ ಬೆಳಿಗ್ಗೆ 9ನೇ ತರಗತಿಯಲ್ಲಿ ಶಿಕ್ಷಕಿ ಇಂಗ್ಲಿಷ್ ಪಾಠ ಮಾಡುತ್ತಿದ್ದ ವೇಳೆ ಗುಂಡು ಗಾಜಿಗೆ ತಗುಲಿದೆ. ಈ ವಿಚಾರವನ್ನು ಶಿಕ್ಷಕಿ ಮತ್ತೊಂದು ತರಗತಿಯಲ್ಲಿದ್ದ ಶಿಕ್ಷಕರಿಗೆ ತಿಳಿಸಿದ್ದು, ಅವರು ತಕ್ಷಣ ತಮ್ಮ ವಾಹನದಲ್ಲಿ ಪಕ್ಕದಲ್ಲಿರುವ ಫೈರಿಂಗ್ ರೇಂಜಿಗೆ ಈ ವಿಚಾರ ತಿಳಿಸಲು ತೆರಳಿದ್ದರು. ಅವರ ಬರುವಷ್ಟರಲ್ಲಿ ಪ್ರಥಮ ಅಂತಸ್ತಿನಲ್ಲಿರುವ 10 ನೇ ತರಗತಿಯ ಕಿಟಕಿ ಗಾಜಿಗೂ ಗುಂಡು ತಗುಲಿದೆ ಎನ್ನಲಾಗಿದೆ.

ಪೊಲೀಸ್ ಇಲಾಖೆ, ಸಶಸ್ತ್ರ ಮೀಸಲು ಪಡೆ ಸೇರಿದಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೋಸ್ಟ್ ಗಾರ್ಡ್ ಹೀಗೆ ಹಲವಾರು ಇಲಾಖೆಯ ಸಿಬ್ಬಂದಿ ಇಲ್ಲಿಗೆ ಪಿಸ್ತೂಲ್, ಗನ್ ಮತ್ತು ರೈಫಲ್ ತರಬೇತಿಗೆ ಬರುತ್ತಾರೆ. ಸಹಜವಾಗಿಯೇ ಇಲ್ಲಿ ಬಹಳಷ್ಟು ಬಾರಿ ಅಭ್ಯಾಸ ನಡೆಯುತ್ತದೆ. ಆದರೆ ಈ ಬಾರಿ ಎರಡು ಗುಂಡುಗಳು ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯ ಕಿಟಿಕಿಗೆ ಬಿದ್ದು ಅಲ್ಲಿಯ ಗಾಜುಗಳು ಪುಡಿಯಾಗಿದೆ.

ಶಾಲಾ ಮುಖ್ಯೋಪಾಧ್ಯಾಯರು ಈ ಬಗ್ಗೆ ಬಿ.ಇ.ಒ.ಗೆ ದೂರು ನೀಡಿದ್ದು ನಂತರ ಅವರ ಮುಖಾಂತರ ನಗರ ಕಾವೂರು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಲಾಗಿದೆ.

Write A Comment