ಕನ್ನಡ ವಾರ್ತೆಗಳು

ಆಧಾರ್ ಕಾರ್ಡ್‌ಗಳು ಇನ್ನು ಪಿವಿಸಿ ಆಧಾರ್ ಕಾರ್ಡ್ ರೂಪದಲ್ಲಿ

Pinterest LinkedIn Tumblr

adhar_card_new

ಮಂಗಳೂರು,ಫೆ.25 : ಭಾರತ ಸರಕಾರದ ಆಧಾರ್ ಕಾರ್ಡ್‌ಗಳು ಪೇಪರ್‌ನಲ್ಲಿ ಮುದ್ರಿತವಾಗಿರುವ ಕಾರಣ ಬಹುಬಾಳ್ವಿಕೆ ಇಲ್ಲ ಎಂಬ ಭಾವನೆಗೆ ನಗರದ ಬಲ್ಮಠದಲ್ಲಿರುವ ಹೇಮಾವತಿ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿರುವ ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್ ನೂತನ ತಂತ್ರಜ್ಞಾನ ಬಳಸಿಕೊಂಡು ಅಧಿಕೃತವಾಗಿ ಪಿವಿಸಿ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಿಸುವ ಯೋಜನೆಗೆ ಮುಂದಾಗಿದೆ.

ಭಾರತ ಸರಕಾರದ ಆಧಾರ್ ಕಾರ್ಡ್ ಇಲಾಖೆಯೊಂದಿನ ಅಧಿಕೃತ ಸಹಯೋಗದೊಂದಿಗೆ, ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್, ಎಲ್ಲರಿಗೂ ಆಧಾರ್ ಕಾರ್ಡ್‌ಗಳನ್ನು ಪಿವಿಸಿ ಆಧಾರ್ ಕಾರ್ಡ್‌ಗಳನ್ನಾಗಿ ಅತ್ಯಾಧುನಿಕ ತಂತ್ರಜ್ಙಾನದ ಮೂಲಕ ಪರಿಚಯಿಸಲಿದೆ. ಆಧಾರ್ ಕಾರ್ಡ್‌ಗಳು ಇದುವರೆಗೆ ಪೇಪರ್‌ನಲ್ಲಿ ಮುದ್ರಿತವಾಗಿದ್ದರೆ, ಇನ್ನು ಮುಂದೆ ೭೨೦ ಜಿ‌ಎಸ್‌ಎಮ್ ಪ್ಲಾಸ್ಟಿಕ್ ಕಾರ್ಡ್‌ಗಳಲ್ಲಿ ಮುದ್ರಣಗೊಂಡು, ಬಹುಕಾಲ ಬಾಳ್ವಿಕೆಯನ್ನು ಹೊಂದಿರುತ್ತವೆ. ಈ ಪಿವಿಸಿ ಆಧಾರ್ ಕಾರ್ಡ್‌ಗಳು ನೋಡಲು ಎಲ್ಲರೂ ಬಳಸುವಂತಹಾ ಎಟಿ‌ಎಂ ಅಥವಾ ಕ್ರೆಡಿಟ್ ಕಾರ್ಡ್‌ಗಳಂತೆಯೇ ಇರಲಿದೆ. ಪಿವಿಸಿ ಆಧಾರ್ ಕಾರ್ಡ್ ಈಗಾಗಲೇ ನೀಡಲಾಗಿರುವ ಪೇಪರ್‌ನಲ್ಲಿ ಮುದ್ರಿತ ಕಾರ್ಡ್‌ಗಳಿಗಿಂತ ಭಿನ್ನವಾಗಿದ್ದು, ಯಾವಾಗಲೂ ತಮ್ಮ ಪರ್ಸಿನಲ್ಲಿ ಅಥವಾ ಜೇಬಿನಲ್ಲಿ ಇರಿಸಿಕೊಂಡು ಹೋಗಬಹುದಾಗಿದೆ. ಇನ್ನೊಂದು ವಿಶೇಷತೆ ಏನೆಂದರೆ ಈ ಕಾರ್ಡುಗಳ ಬಣ್ಣ ಬಹುಕಾಲದವರೆಗೆ ಮಾಸುವುದಿಲ್ಲ. ಹಾಗೆಯೇ ಕಾರ್ಡುಗಳನ್ನು ಕಳೆದುಕೊಂಡಲ್ಲಿ ಮರುಮುದ್ರಿತ ಕಾರ್ಡುಗಳನ್ನು ಆಧಾರ್ ಕಾರ್ಡ್ ಸಂಖ್ಯೆ ಅಥವಾ ಯಾವುದೇ ಅಧಿಕೃತ ಸುಳಿವು ನೀಡಿ ಪಡೆಯುವುದು ಸುಲಭವಾಗಲಿದೆ.

ಆಧಾರ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದೂ ಸರಕಾರಿ ಸೇವೆಗಳ ಅನುಕೂಲ ಪಡೆಯುವಲ್ಲಿ ಅನುಕೂಲಕರವಾಗಿರುವುದರಿಂದ ಎಲ್ಲರೂ ಸದಾ ತಮ್ಮ ಆಧಾರ್ ಕಾರ್ಡ್‌ನ್ನು ಸದಾ ಕೊಂಡೊಯ್ಯುವುದು ಅನಿವಾರ್ಯವಾಗಿರುತ್ತದೆ. ಹಾಗಾಗಿ ಉದ್ದನೆಯ ಕಾರ್ಡ್‌ಗಳ ಬದಲಾಗಿ ತಮ್ಮ ಎಟಿ‌ಎಂ ಕಾರ್ಡ್‌ಗಳಂತೆ ಸದಾ ಪರ್ಸಿನಲ್ಲಿ ಇರಿಸಿಕೊಳ್ಳುವಂತೆ ಅವಕಾಶ ಪಿವಿಸಿ ಆಧಾರ್ ಕಾರ್ಡಿನಿಂದ ಆಗಲಿದೆ.

ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್ ಆಧಾರ್ ಕಾರ್ಡ್ ಹೊಂದಿದವರಿಗಾಗಿ ವಿನೂತನ ಮತ್ತು ಆತ್ಯಾಧುನಿಕ ತಂತ್ರಜ್ಞಾನದ ಸೌಭ್ಯವನ್ನು ಒದಗಿಸುತ್ತಿದೆ. ಭಾರತ ಸರಕಾರದ ಆಧಾರ ಕಾರ್ಡ್ ವಿಭಾಗದಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಂಡು, ಈ ಯೋಜನೆಯನ್ನು ಎಲ್ಲರಿಗೂ ಉಪಯೋಗವಾಗುವಂತೆ ಸಾಧ್ಯಗೊಳಿಸಲಾಗುತ್ತಿದೆ. ಬಹಳ ಕಡಿಮೆ ಖರ್ಚಿನಲ್ಲಿ ಸಿಗುವ ಪಿವಿಸಿ ಆಧಾರ್ ಕಾರ್ಡ್‌ಗಳನ್ನು ಮುದ್ರಿಸಲಿಕ್ಕಾಗಿ, ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್ ಸುಸಜ್ಜಿತ ಪ್ರಿಂಟರ್‌ಗಳು ಮತ್ತು ನುರಿತ ಸಿಬ್ಬಂದಿಗಳನ್ನು ಹೊಂದಿದೆ. ಯಾವುದೇ ವ್ಯಕ್ತಿ ತನ್ನ ಆಧಾರ್ ಕಾರ್ಡನ್ನು ಒದಗಿಸಿದಲ್ಲಿ ಕೆಲವೇ ನಿಮಿಷಗಳ ಪಿವಿಸಿ ಆಧಾರ್ ಕಾರ್ಡ್ ನೀಡುವ ವ್ಯವಸ್ಥೆಯನ್ನು ಹೊಂದಿದೆ.

ಪಿವಿಸಿ ಆಧಾರ್ ಕಾರ್ಡ್‌ನ ವಿಶೇಷತೆಗಳಲ್ಲಿ ಪ್ರಮುಖವಾಗಿರುವುದು ಎಂದರೆ ಪೇಪರ್ ಕಾರ್ಡಿನಲ್ಲಿರುವ ಎಲ್ಲಾ ದಾಖಲೆಗಳು ಇರುವುದಾಗಿದೆ. ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್‌ನಿಂದ ಪಡೆದ ಎಲ್ಲಾ ಕಾರ್ಡ್‌ಗಳು ಅವರವರ ಬೇಡಿಕೆಗೆ ತಕ್ಕಂತೆ ಅದೇ ಪಿವಿಸಿ ಆಧಾರ್ ಕಾರ್ಡ್‌ನ್ನು ಮತ್ತೆ ಅಧಿಕೃತವಾಗಿ ಮುದ್ರಿಸಿಕೊಡುವ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದೆ. ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್, ಈ ಅವಕಾಶವನ್ನು ಸಾರ್ವಜನಿಕ ಸೇವೆಗಾಗಿ ಭಾರತ ಸರಕಾರದ ಆಧಾರ್ ಕಾರ್ಡ್ ವಿಭಾಗದಿಂದ ಅಧಿಕೃತವಾಗಿ ಅನುಮತಿ ಪಡೆದುಕೊಂಡಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿರಿ: ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್ , ಎರಡನೇ ಮಹಡಿ, ಹೇಮಾವತಿ ಬಿಲ್ಡಿಂಗ್, ಬಲ್ಮಠ,ಮಂಗಳೂರು. ದೂರವಾಣಿ: 0824-4276130 ಅಥವಾ 9008780756. E-mailmanglore@colorscards.in
website: www.colorscards.in

Write A Comment