ಮ೦ಗಳೂರು ಫೆ.16: ಫೆಬ್ರವರಿ 20 ರಂದು ನಡೆಯಲಿರುವ ಜಿಲ್ಲಾ/ ತಾಲೂಕು ಪಂಚಾಯತ್ ಚುನಾವಣೆಯ ಪ್ರಯುಕ್ತ ಜಿಲ್ಲಾ ಚುನಾವಣಾಧಿಕಾರಿಯವರ ಆದೇಶದಂತೆ ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಚುನಾವಣಾ ಕಾರ್ಯಕ್ಕಾಗಿ ಕ.ರಾ.ರ.ಸಾ.ನಿಗಮದ ಪುತ್ತೂರು ವಿಭಾಗದಿಂದ ಗರಿಷ್ಠ ಸಂಖ್ಯೆಯಲ್ಲಿ ವಾಹನಗಳನ್ನು ನಿಯೋಜಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಫೆ. 19 ಮತ್ತು 20 ರಂದು ವಿಭಾಗ ವ್ಯಾಪ್ತಿಯ ಸಂಚಾರ ಕಾರ್ಯಚರಣೆಯಲ್ಲಿ ವ್ಯತ್ತಯ ಉಂಟಾಗಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಸಹಕರಿಸಲು ಪುತ್ತೂರು ಕೆಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.